ವಿಡಿಯೋ ಕಾಲ್​ನಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಗುತ್ತಿಗೆದಾರ; ಕಾಂಗ್ರೆಸ್​​ ಗ್ರೂಪ್​ನಲ್ಲಿ ಫೋಟೋ ಶೇರ್​ ಮಾಡಿದ ಭೂಪ

ತಾಲೂಕಿನ ಕಾಂಗ್ರೆಸ್​ ವಿಚಾರಗಳನ್ನು ಹಂಚಿಕೊಳ್ಳಲು ವಾಟ್ಸ್​ಆ್ಯಪ್​ ಗ್ರೂಪ್​ ಮಾಡಿಕೊಳ್ಳಲಾಗಿತ್ತು. ಆದರೆ, ಈ ಗ್ರೂಪ್​ ದುರ್ಬಳಕೆ ಆಗಿರುವುದು ಬೇಸರದ ವಿಚಾರ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:October 10, 2019, 12:50 PM IST
ವಿಡಿಯೋ ಕಾಲ್​ನಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಗುತ್ತಿಗೆದಾರ; ಕಾಂಗ್ರೆಸ್​​ ಗ್ರೂಪ್​ನಲ್ಲಿ ಫೋಟೋ ಶೇರ್​ ಮಾಡಿದ ಭೂಪ
ವಾಟ್ಸ್​ ಆ್ಯಪ್​
  • Share this:
ಧಾರವಾಡ (ಅ.10): ಕಾಂಗ್ರೆಸ್ ವಾಟ್ಸ್​ಆ್ಯಪ್​​​ ಗ್ರೂಪ್​​ನಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಬೆಂಬಲಿಗ, ಗುತ್ತಿಗೆದಾರ ಧನರಾಜ್​ ಬಡಿಗೇರ ಅಶ್ಲೀಲ್ ಫೋಟೊ ಶೇರ್ ಮಾಡಿದ್ದಾನೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಧನರಾಜ ಮಹಿಳೆಯೊಬ್ಬಳಿಗೆ ವಿಡಿಯೋ ಕಾಲ್​ ಮಾಡಿದ್ದ. ಆಗ ಮಹಿಳೆ ಬಟ್ಟೆ ಬಿಚ್ಚಿದಾಗ ಸ್ಕ್ರಿನ್ ಶಾಟ್ ತೆಗೆದಕೊಂಡಿದ್ದ. ಅಷ್ಟೇ ಅಲ್ಲ ಇದರ ಸ್ಕ್ರೀನ್ ಶಾಟ್​​ಗಳನ್ನು ಧಾರವಾಡ ಜಿಲ್ಲೆಯ ಅಳ್ನಾವರ್ ಬ್ಲಾಕ್ ಕಾಂಗ್ರೆಸ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದ.

ಶೇರ್​ ಮಾಡಿದ ನಂತರ ಧನರಾಜ್​ಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ತಕ್ಷಣ ಗ್ರೂಪ್​​ನ ಎಲ್ಲಾ ಸದಸ್ಯರನ್ನು ರಿಮೂವ್ ಮಾಡಿ ಗ್ರೂಪ್ ಡಿಲಿಟ್ ಮಾಡಿದ್ದಾನೆ. ಸದ್ಯ ಈ ಪೋಟೊಗಳು ಸಾಕಷ್ಟು ವೈರಲ್​ ಆಗಿದೆ.

ತಾಲೂಕಿನ ಕಾಂಗ್ರೆಸ್​ ವಿಚಾರಗಳನ್ನು ಹಂಚಿಕೊಳ್ಳಲು ವಾಟ್ಸ್​ಆ್ಯಪ್​ ಗ್ರೂಪ್​ ಮಾಡಿಕೊಳ್ಳಲಾಗಿತ್ತು. ಆದರೆ, ಈ ಗ್ರೂಪ್​ ದುರ್ಬಳಕೆ ಆಗಿರುವುದು ಬೇಸರದ ವಿಚಾರ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

First published: October 10, 2019, 12:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading