• Home
  • »
  • News
  • »
  • state
  • »
  • Santosh Patil Suicide Case: ಮೇ 25ರಿಂದ ರಾಜ್ಯಾದ್ಯಂತ ಗುತ್ತಿಗೆದಾರರ ಕೆಲಸ ಬಂದ್: ಸಂತೋಷ್ ಪಾಟೀಲ್ ಆತ್ಮಹತ್ಯೆ ಸಿಬಿಐ ತನಿಖೆಗೆ ಆಗ್ರಹ

Santosh Patil Suicide Case: ಮೇ 25ರಿಂದ ರಾಜ್ಯಾದ್ಯಂತ ಗುತ್ತಿಗೆದಾರರ ಕೆಲಸ ಬಂದ್: ಸಂತೋಷ್ ಪಾಟೀಲ್ ಆತ್ಮಹತ್ಯೆ ಸಿಬಿಐ ತನಿಖೆಗೆ ಆಗ್ರಹ

ಸಂತೋಷ್ ಪಾಟೀಲ್​, ಕೆ.ಎಸ್​ ಈಶ್ವರಪ್ಪ

ಸಂತೋಷ್ ಪಾಟೀಲ್​, ಕೆ.ಎಸ್​ ಈಶ್ವರಪ್ಪ

ಇದು ರೌಡಿಗಳ ಸರ್ಕಾರ ಎಂದು ಗುತ್ತಿಗೆದಾರರ ಸಂಘಟದ ಕೆಂಪಣ್ಣ ಅವರು ಸಭೆಯ ನಂತರ ನೇರ ಆರೋಪ ಮಾಡಿದ್ದಾರೆ.

  • Share this:

    ಬೆಂಗಳೂರು: ಮೇ 25 ರಿಂದ ಒಂದು ತಿಂಗಳುಗಳ ಕಾಲ ರಾಜ್ಯಾದ್ಯಂತ ಗುತ್ತಿಗೆ (Contract Works) ಕೆಲಸಗಳನ್ನು ಸ್ಥಗಿತಗೊಳಿಸೋದಾಗಿ ಗುತ್ತಿಗೆದಾರರ ಸಂಘದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ನಂತರ ಗಂಭೀರ ಸಭೆ ಸೇರಿದ್ದ ಗುತ್ತಿಗೆದಾರರ ಸಂಘ ಈ ನಿರ್ಧಾರ ಕೈಗೊಂಡಿದೆ. ಸಚಿವ ಕೆ.ಎಸ್. ಈಶ್ವರಪ್ಪ (Minister KS Eshwarappa) ಅವರೇ ಸಂತೋಷ್ ಪಾಟೀಲ್ (Contractor Santosh Patil Suicide Case) ಆತ್ಮಹತ್ಯೆಗೆ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ಈ ನಿರ್ಧಾರವನ್ನು ಗುತ್ತಿಗೆದಾರರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈಮೂಲಕ ಶಾಕಿಂಗ್ ಸುದ್ದಿಯೊಂದು ಗುತ್ತಿಗೆದಾರರ ಸಭೆಯಲ್ಲಿ ಹೊರಬಿದ್ದಿದೆ. 


    ನಗರದಲ್ಲಿಂದು ಚಾಮರಾಜಪೇಟೆಯ ಗುತ್ತಿಗೆದಾರರ ಸಂಘದ ಕೇಂದ್ರ ಕಚೇರಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಬಿಜೆಪಿ ಸದಸ್ಯರೂ ಆದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟಿನ ಹಾಲಿ ನ್ಯಾಯಧೀಶರಿಂದ ತನಿಖೆ ನಡೆಸಬೇಕು. ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗುತ್ತಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ನೇರವಾಗಿ ಮಾಧ್ಯಮಗಳ ಎದುರು ಆರೋಪ ಮಾಡಿದ್ದಾರೆ.


    ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಪರಿಹಾರ ನೀಡಿ
    ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದುಆತ್ಮಹತ್ಯೆ ಪ್ರಕರಣವನ್ನ ಸಿಬಿಐ ಅಥವಾ ಹೈಕೋರ್ಟ್ ಹಾಲಿ ನ್ಯಾಯಧೀಶರಿಂದ ತನಿಖೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಬೇಕು. ಕೂಡಲೇ ಗುತ್ತಿಗೆ ಹಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರನ ಸಾವಿಗೆ ಸರ್ಕಾರವೇ ನೇರ ಹೊಣೆ. ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಪರಿಹಾರ ನೀಡುವಂತೆ ಆಗ್ರಹ ವ್ಯಕ್ತಪಡಿಸಿದೆ.


    ಇದನ್ನೂ ಓದಿ: KS Eshwarappa ಅವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ಮನವಿ


    ಸಿಎಂ ಕಚೇರಿಯಲ್ಲೂ ಭ್ರಷ್ಟಾಚಾರ ಇದೆ. ನಾವು ಈಗ ದಾಖಲೆ ಮಾಡಲು ಮುಂದಾಗಿದ್ವಿ..ಆದ್ರೆ ತೊಂದರೆ ಆಗುತ್ತೆ ಅಂತ ನಮಗೆ ಸಲಹೆ ಕೊಟ್ರು. ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಚಾರ ನಡೆಯುತ್ತಿದೆ. ನಮ್ಮ ಹತ್ರನೂ ಭ್ರಷ್ಟಚಾರದ ದಾಖಲೆಗಳಿವೆ. ದಾಖಲೆ‌ ಬಿಡುಗಡೆಗೆ ನಾವು ಹೆದರುತ್ತಿದ್ದೇವೆ. ನಮಗೆ ಕೊಲೆ ಬೆದರಿಕೆ ಬರುತ್ತಿದೆ. ಇದು ರೌಡಿಗಳ ಸರ್ಕಾರ ಎಂದು ಗುತ್ತಿಗೆದಾರರ ಸಂಘಟನೆದ ಕೆಂಪಣ್ಣ ಅವರು ಸಭೆಯ ನಂತರ ನೇರ ಆರೋಪ ಮಾಡಿದ್ದಾರೆ.


    ದಾಖಲೆ ಇದೆ
    ಲಂಚ ಕೊಟ್ಟಿರೋ ದಿನಾಂಕ ಎಲ್ಲವೂ ನಮ್ಮ‌ಬಳಿ ದಾಖಲೆ ಇದೆ. ಶಾಸಕರ ಮಕ್ಕಳೇ ಗುತ್ತಿಗೆದಾರರಾಗಿ ಕೆಲ್ಸ ಮಾಡ್ತಿದ್ದಾರೆ. ಇವತ್ತಿನಿಂದ 15 ದಿನ ಕಾಲಾವಕಾಶ ಕೊಡ್ತೀವಿ. ಭ್ರಷ್ಟಾಚಾರದ ದಾಖಲೆಗಳನ್ನು ಬಳಿಕ‌ ಬಿಡುಗಡೆ ಮಾಡ್ತೀವಿ ಎಂದು ಸಂಘದ ಉಪಾಧ್ಯಕ್ಷ ಮಂಜುನಾಥ್ ಹೇಳಿಕೆ ನೀಡಿದ್ದಾರೆ.





    Koo App


    ಈಶ್ವರಪ್ಪನವರು ಕೊಲೆ ಆರೋಪ ಎದುರಿಸುತ್ತಿರುವುದರಿಂದ ಸಚಿವ ಸಂಪುಟದಲ್ಲಿರಲು ಅವಕಾಶ ನೀಡಬಾರದು. ಇದು ದೊಡ್ಡ ಅಪರಾಧ, ಇದಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯನ್ನೂ ನೀಡಬಹುದಾಗಿದೆ. ಸತ್ತಿರುವ ವ್ಯಕ್ತಿಯೇ ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ನೇರ ಆರೋಪ ಮಾಡಿದ್ದು ಇದಕ್ಕಿಂತ ದೊಡ್ಡ ಸಾಕ್ಷಿ ಮತ್ತೇನು ಬೇಕು? - @siddaramaiah

    - ಕರ್ನಾಟಕ ಕಾಂಗ್ರೆಸ್ (@inckarnataka) 13 Apr 2022





    ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗುತ್ತಿದೆ ಎಂದು ಅವರು ನೇರವಾಗಿ ಮಾಧ್ಯಮಗಳ ಎದುರು ಆರೋಪ ಮಾಡಿದ್ದಾರೆ.   ಮುಂದಿನ ದಿನದಲ್ಲಿ ಭ್ರಷ್ಟಾಚಾರ ದಾಖಲೆ ಬಿಡುಗಡೆ ಮಾಡ್ತೀವಿ‌. ಭ್ರಷ್ಟಾಚಾರ ಹೆಚ್ಚಿದ್ದರೂ ಸಿಎಂ ಮೌನವಾಗಿರೋದು ಸರಿಯಲ್ಲ ಎಂದು ಕೆಂಪಣ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.


    ಇದನ್ನೂ ಓದಿ: Santosh Patil: ಸಂತೋಷ್ ಪಾಟೀಲ್ ಆತ್ಮಹತ್ಯೆ: ಸಚಿವ ಈಶ್ವರಪ್ಪ ಸುದ್ದಿಗೋಷ್ಠಿ, ಗುತ್ತಿಗೆದಾರರ ಸಂಘದಿಂದ ಮಹತ್ವದ ಸಭೆ


    ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿನ್ನೆಲೆ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದೆ. ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗ ಕೆ ಎಸ್ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಮನವಿ ಸಲ್ಲಿಸಿದೆ.

    Published by:ಗುರುಗಣೇಶ ಡಬ್ಗುಳಿ
    First published: