K.S Eshwarappa ಮನೆ ಮುಂದೆ ಸಿಹಿ ಹಂಚಿ ಸಂಭ್ರಮ; ನನ್ನ ಮನೆ ದೇವರೇ ಕಾಪಾಡಿದ್ದು

ಕೆ.ಎಸ್​ ಈಶ್ವರಪ್ಪಗೆ ಕ್ಲೀನ್ ಚೀಟ್ ಸಿಕ್ಕ ಹಿನ್ನಲೆ ಮಾಜಿ ಸಚಿವ ಈಶ್ವರಪ್ಪ ನಿವಾಸದಲ್ಲಿ ಸಂತಸ ಮನೆ ಮಾಡಿದೆ. ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಸಂತೋಷ ಹಂಚಿಕೊಂಡ ಈಶ್ವರಪ್ಪ. ಏನೂ ತಪ್ಪು ಮಾಡದ ನನ್ನ ಮೇಲೆ ಬಂದ ಆರೋಪದಲ್ಲಿ ನನ್ನ ಪಾತ್ರವಿಲ್ಲ ಎಂದು ಮೊದಲೇ ಹೇಳಿದ್ದೇ ಎಂದ್ರು.

ಸಂತೋಷ್ ಪಾಟೀಲ್​, ಕೆ.ಎಸ್​ ಈಶ್ವರಪ್ಪ

ಸಂತೋಷ್ ಪಾಟೀಲ್​, ಕೆ.ಎಸ್​ ಈಶ್ವರಪ್ಪ

  • Share this:
ಶಿವಮೊಗ್ಗ (ಜು.20): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santhosh Patil) ಪ್ರಕರಣದಲ್ಲಿ (Suicide Case) ಮಾಜಿ ಸಿಎಂ ಕೆ.ಎಸ್​ ಈಶ್ವರಪ್ಪಗೆ ಕ್ಲೀನ್ ಚೀಟ್ (Clean Chit)) ಸಿಕ್ಕ ಹಿನ್ನಲೆ ಈಶ್ವರಪ್ಪ ನಿವಾಸದಲ್ಲಿ ಸಂತಸ ಮನೆ ಮಾಡಿದೆ. ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಶಾಸಕ ಕೆ.ಎಸ್ ಈಶ್ವರಪ್ಪ, ಇವತ್ತು ಸಂತೋಷ್ ಆತ್ಮಹತ್ಯೆ ಪ್ರಕರಣ ಬಿ ರಿಪೋರ್ಟ್ ಬಂದಿದೆ.ಬಿ ರಿಪೋರ್ಟ್ ನಲ್ಲಿ ನಾನೂ ಆರೋಪ ಮುಕ್ತವಾಗಿ ಹೊರಬಂದಿದಿದ್ದೇನೆ. ಯಾವುದೇ ಪಾತ್ರವಿಲ್ಲ ಎಂದು ಬಂದಿರಿವುದು ತುಂಬಾ ಸಂತೋಷವಾಗಿದೆ ಎಂದ್ರು. ಇದೇ ರೀತಿಯೇ ರಿಪೋರ್ಟ್ ಬರುತ್ತದೆ ಎಂದು ಕೇಸ್ ಬಿದ್ದಿದ ದಿನನೇ ಗೊತ್ತಿತ್ತು. ಈ ಆತ್ಮಹತ್ಯೆಗೂ ನನಗೂ 1% ಸಂಬಂಧ ಇಲ್ಲ ಎಂದು ಹೇಳಿದ್ದೆ. ಈ ಆರೋಪದಿಂದ ಹೊರಬರುತ್ತೇನೆ ಎಂದು ಅವತ್ತು ಹೇಳಿದ್ದೆ.

ನನ್ನ ಮನೆ ದೇವರು ಮೇಲೆ ನನಗೆ ನಂಬಿಕೆ ಇದೆ

ನನ್ನ ಮನೆ ದೇವರು ಮೇಲೆ ನನಗೆ ನಂಬಿಕೆ ಇದೆ. ನಾನೂ ಏನಾದರೂ ತಪ್ಪು ಮಾಡಿದ್ದರೆ ನನ್ನ ಮನೆ ದೇವರು ಚೌಡೇಶ್ವರಿ ಶಿಕ್ಷೆ ಕೊಡುತ್ತಿದ್ದಳು. ನನ್ನಿಂದ ನನ್ನ ಪಕ್ಷದ ನಾಯಕರಿಗೆ ಸರ್ಕಾರಕ್ಕೆ ಮುಜುಗರ ಆಗಿತ್ತು. ಇದರಿಂದ ಎಲ್ಲರೂ ಈ ಮುಜುಗರದಿಂದ ಮುಕ್ತರಾಗಿದ್ದಾರೆ ಎನ್ನುವುದು ಇವತ್ತಿನ ಸಂತೋಷ. ಎಲ್ಲ ಸಾಧೂ ಸಂತರು ನನ್ನ ಮನೆಗೆ ಬಂದು ಹರಸಿದ್ದರು. ಸಚಿವ ಸ್ಥಾನ ಕೊಡುವುದು ಬಿಡುವುದು ನನ್ನ ಕೈಯಲ್ಲಿ ಇಲ್ಲ, ಪಕ್ಷಕ್ಕೆ ಬಿಟ್ಟಿದ್ದು.

ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಸಂತೋಷ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಿಎಂ ಕೆ.ಎಸ್​ ಈಶ್ವರಪ್ಪಗೆ ಕ್ಲೀನ್ ಚೀಟ್ ಸಿಕ್ಕ ಹಿನ್ನಲೆ ಮಾಜಿ ಸಚಿವ ಈಶ್ವರಪ್ಪ ನಿವಾಸದಲ್ಲಿ ಸಂತಸ ಮನೆ ಮಾಡಿದೆ. ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಸಂತೋಷ ಹಂಚಿಕೊಂಡ ಈಶ್ವರಪ್ಪ. ಏನೂ ತಪ್ಪು ಮಾಡದ ನನ್ನ ಮೇಲೆ ಬಂದ ಆರೋಪದಲ್ಲಿ ನನ್ನ ಪಾತ್ರವಿಲ್ಲ ಎಂದು ಮೊದಲೇ ಹೇಳಿದ್ದೇ. ಸಂತೋಷ್ ಪಾಟೀಲ್ ಪತ್ನಿಗೆ ಯಾರೋ ಪ್ರಚೋದಿಸಿ ರಾಜ್ಯಪಾಲರಿಗೆ ದೂರು ಕೊಡಿಸಿದ್ದಾರೆ.

ಇದನ್ನೂ ಓದಿ: K.S Eshwarappa ಮನೆ ಮುಂದೆ ಸಿಹಿ ಹಂಚಿ ಸಂಭ್ರಮ; ನನ್ನ ಮನೆ ದೇವರೇ ಕಾಪಾಡಿದ್ದು

ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ನಾನು ಯಾವುದೇ ಹುದ್ದೆ ಬಯಸಿಲ್ಲ. ಬಯಸುವುದೂ ಇಲ್ಲ. ಪಕ್ಷದ ನಾಯಕರ ತೀರ್ಮಾನಕ್ಕೆ ನಾನು ಬದ್ಧ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಪಕ್ಷದ ಹಿರಿಯರ, ಮಠಾಧೀಶರ ಆಶೀರ್ವಾದ ನನಗೆ ಇದೆ. ಅನೇಕ ಹಿರಿಯರು ಮಠಾಧೀಶರು ನನಗೆ ಕರೆ ಮಾಡಿ ಶುಭಾಶಯ ಕೋರುತ್ತಿದ್ದಾರೆ.

ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್​ ಕಿಡಿ

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಿ ರಿಪೋರ್ಟ್ ವಿಚಾರಕ್ಕೆ ಪ್ರತಿಕ್ರಿಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ತನಿಖೆ ಸಂದರ್ಭದಲ್ಲೇ ಸಿಎಂ, ಗೃಹ ಸಚಿವರು, ಯಡಿಯೂರಪ್ಪ ಹೇಳಿದ್ದರು. ಅವರು ಹೊರಗಡೆ ಬರ್ತಾರೆಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಆಗ ಇನ್ನೂ ತನಿಖೆ ಪ್ರಾರಂಭವಾಗಿರಲಿಲ್ಲ. ರಾಜೀನಾಮೆಗೂ ಮುನ್ನವೇ ಆ ರೀತಿ ಹೇಳಿದ್ದರು.

ಇದನ್ನೂ ಓದಿ: CM Basavaraj Bommai: ಕಬಿನಿ, ಕೆಆರ್​ಎಸ್​ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ

ಸರ್ಕಾರ ಗೌರವ ಕಳೆದುಕೊಳ್ಳಬಾರದೆಂದು ಬಿ ರಿಪೋರ್ಟ್ ಕೊಟ್ಟಿದ್ದಾರೆ.  ಸಚಿವ ಕಾರಜೋಳ ಏನಂತ ಹೇಳಿಕೆ ಕೊಟ್ಟಿದ್ದರು?. ರಮೇಶ್ ಜಾರಕಿಹೊಳಿ ಯಾವ ಹೇಳಿಕೆ ಕೊಟ್ಟಿದ್ದರು? ಸಚಿವ ಮುರುಗೇಶ್ ನಿರಾಣಿ ಅಲ್ಲಿಗೆ ಹೋಗಿ ಏನು‌ ಹೇಳಿದ್ದರು? ಅವನು ಕೆಲಸ ಮಾಡಿದ್ದಾನೆ ಅಂದಿದ್ದರು. ಸಂತೋಷ್ ಪಾಟೀಲ್‌ ಎಲ್ಲರಿಗೂ ಕಾಗದ ಬರೆದಿದ್ದ. ರಾಜ್ಯಪಾಲರು, ಪ್ರಧಾನಿಗೆ ಕಾಗದ ಬರೆದಿದ್ದ. ಅವರ ಪತ್ನಿ ಕೂಡ ರಾಜ್ಯಪಾಲರಿಗೆ ಗೌರವ ಕೊಟ್ಟರು. ನಾವು ಇದರ ಬಗ್ಗೆ ಹೋರಾಟ ಮಾಡಿದ್ದೆವು. ಈಗ ಅವರ ರಾಜೀನಾಮೆ ಪಡೆದಿದ್ರು. ಈಗ ಬಿ ರಿಪೋರ್ಟ್ ಕೊಟ್ಟಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ, ನೇರವಾಗಿಯೇ ತನ್ನ ನೋವನ್ನ ಹೊರಹಾಕಿದ್ದ. ಅವರು ಏನೇ ಮುಚ್ಚಿಟ್ರು ಜನರಿಗೆ ಎಲ್ಲ ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.
Published by:Pavana HS
First published: