K.S Eshwarappa: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್​; ಕೆ.ಎಸ್​ ಈಶ್ವರಪ್ಪಗೆ ಕ್ಲೀನ್ ಚಿಟ್

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್  ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ ಎಂದು ಅಂತಿಮ ವರದಿಯಲ್ಲಿ ಉಡುಪಿ ಪೊಲೀಸರು ಉಲ್ಲೇಖಿಸಿದ್ದಾರೆ.

ಸಚಿವ ಈಶ್ವರಪ್ಪ,  ಸಂತೋಷ್​ ಪಾಟೀಲ್​

ಸಚಿವ ಈಶ್ವರಪ್ಪ, ಸಂತೋಷ್​ ಪಾಟೀಲ್​

  • Share this:
ಗುತ್ತಿಗೆದಾರ ಸಂತೋಷ್ ಪಾಟೀಲ್ (Santhosh Patil) ಆತ್ಮಹತ್ಯೆ ಪ್ರಕರಣದ  (Suicide Case) ಅಂತಿಮ ವರದಿಯನ್ನು ಉಡುಪಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ (K.S Eshwarappa) ಕ್ಲೀನ್ ಚಿಟ್  ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ ಎಂದು ಅಂತಿಮ ವರದಿಯಲ್ಲಿ ಉಡುಪಿ ಪೊಲೀಸರು (Udupi Police) ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಕರೆದು ವಿಚಾರಣೆಯನ್ನೂ ನಡೆಸಿಲ್ಲ. ಆತ್ಮಹತ್ಯೆಗೆ ಕುಮ್ಮಕ್ಕು ಎಂಬುದಕ್ಕೆ ಸಾಕ್ಷ್ಯಾಧಾರಗಳೇ ಇಲ್ಲ ಎಂದು ತನಿಖೆ ನಡೆಸಿರುವ ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.

ಸಚಿವ ಸ್ಥಾನಕ್ಕೆ ಕೆ.ಎಸ್​ ಈಶ್ವರಪ್ಪ ರಾಜೀನಾಮೆ

ಬೆಳಗಾವಿ ಮೂಲದ ಸಂತೋಷ್ ಪಾಟೀಲ್​ ಏಪ್ರಿಲ್ 11ರಂದು ಉಡುಪಿಯ ಲಾಡ್ಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ರು. ಈಶ್ವರಪ್ಪ ಮೇಲೆ 40 ಪರ್ಸೆಂಟ್​ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ರು.  ಪ್ರಕರಣಲ್ಲಿ ಈಶ್ವರಪ್ಪ ಹೆಸರು ಕೇಳಿ ಬಂದ ಹಿನ್ನೆಲೆ ಸಚಿವ ಸ್ಥಾನಕ್ಕೆ ಕೆ.ಎಸ್​ ಈಶ್ವರಪ್ಪ ರಾಜೀನಾಮೆ ನೀಡಿದ್ರು.

ಕೆ.ಎಸ್​ ಈಶ್ವರಪ್ಪಗೆ ಕ್ಲೀನ್​ ಚಿಟ್

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆಯಾಗಿದೆ. ಕೊಲೆ ಅಥವಾ ಕೊಲೆ ಪ್ರಚೋದನೆ ಎಂಬುದಕ್ಕೆ ಸೂಕ್ತ ಸಾಕ್ಷಿಗಳು ಇಲ್ಲ. ಎಲ್ಲಾ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಿ ಕೋರ್ಟ್ ಗೆ ಸಲ್ಲಿಕೆ ಮಾಡಲಾಗಿದೆ.  ಸಿಸಿಟಿವಿ ವೀಡಿಯೋ, ಆಡಿಯೋ, ಮೊಬೈಲ್ ಸಂದೇಶ, ಬ್ಯಾಂಕ್ ದಾಖಲೆ, ಗುತ್ತಿಗೆ ವಿವರ, ಕುಟುಂಬಸ್ಥರು, ಸ್ನೇಹಿತರ ಹೇಳಿಕೆಯನ್ನು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರದಿ ನೀಡಲಾಗಿದೆ. ಈಶ್ವರಪ್ಪ ಕಡೆಯವರಿಂದ ಬೆದರಿಕೆ ಬಂದಿದೆ ಎಂಬುದಕ್ಕೆ ಯಾವುದೇ ದಾಖಲೆಗಳ ಇಲ್ಲ ಎಂದು ಕ್ಲೀನ್​ ಚಿಟ್​ ನೀಡಲಾಗಿದೆ.

the wife of santhosh the contractor who committed suicide has written a letter to the govern or asking him to get justice
ಸಂತೋಷ್ ಪಾಟೀಲ್


ಇದನ್ನೂ ಓದಿ: CM Basavaraj Bommai: ಕಬಿನಿ, ಕೆಆರ್​ಎಸ್​ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ

ಸಾಲಗಾರರ ಒತ್ತಡ ತಾಳದೆ ಆತ್ಮಹತ್ಯೆ ಶಂಕೆ

ತನ್ನದೇ ಇನ್ನೊಂದು ಮೊಬೈಲ್ ನಲ್ಲಿ ಡೆತ್ ನೋಟ್ ಟೈಪ್ ಮಾಡಿದ್ದ ಸಂತೋಷ್ ಪಾಟೀಲ್, ಸಬ್ ಕಾಂಟ್ರ್ಯಾಕ್ಟರ್ ಗಳಿಗೆ ಕೋಟ್ಯಾಂತರ ಹಣ ಬಾಕಿಯಿಟ್ಟಿದ್ದ ಸಂತೋಷ್ ಪಾಟೀಲ್, ಈಶ್ವರಪ್ಪರ ಮಾನನಷ್ಟ ಮೊಕದ್ದಮೆಯಿಂದ ಒತ್ತಡಕ್ಕೊಳಗಾಗಿದ್ದ. ಸಾಲಗಾರರ ಒತ್ತಡ ತಾಳದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

KS Eshwarappa who eventually resigned as minister
ಸಚಿವ ಈಶ್ವರಪ್ಪ, ಸಂತೋಷ್​ ಪಾಟೀಲ್​


10ಕ್ಕೂ ಹೆಚ್ಚು ಜನರ ಫೋನ್ ಸೀಜ್

ಈಶ್ವರಪ್ಪ 40% ಕಮೀಷನ್ ಕೇಳಿದ್ದಾರೆ ಎಂಬುದಕ್ಕೆ ದಾಖಲು ಇಲ್ಲ. ಸುಮಾರು 20 ಅಕೌಂಟ್ ಗಳ ಪರಿಶೀಲನೆ ಮಾಡಿರುವ ತನಿಖಾ ತಂಡ, ಈಶ್ವರಪ್ಪ ಸಂತೋಷ್ ಸಂಪರ್ಕದ 10ಕ್ಕೂ ಹೆಚ್ಚು ಜನರ ಫೋನ್ ಸೀಜ್ ಮಾಡಿದ್ದ ಉಡುಪಿ ಪೊಲೀಸರು, ಈಶ್ವರಪ್ಪ ಅಥವಾ ಈಶ್ವರಪ್ಪ ಕಡೆಯವರಿಂದ ಯಾವುದೇ ಮಾತುಕತೆ ಸಂತೋಷ್ ಜೊತೆ ನಡೆದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Congress Leaders: ಜನರನ್ನು ಸಾಯಿಸಲು GST ತಂದಿದ್ದಾರೆ; ಶ್ರೀಮಂತರಿಗೆ ಟ್ಯಾಕ್ಸ್ ಕಡಿಮೆ ಮಾಡಿ ಬಡವರಿಂದ ವಸೂಲಿ

ಸ್ವಯಂ ವಿಷ ಸೇವಿಸಿ ಆತ್ಮಹತ್ಯೆ

ಕೆಲ ದಿನಗಳ ಹಿಂದೆ ಎಫ್ ಎಸ್ ಎಲ್ ವರದಿ ಪೊಲೀಸರ ಕೈ ಸೇರಿತ್ತು. ಸ್ವಯಂ ವಿಷ ಸೇವಿಸಿ ಆತ್ಮಹತ್ಯೆ ಎಂಬ ವರದಿ ನೀಡಿದೆ. ಅಲ್ಲದೇ ಈಶ್ವರಪ್ಪ ಜೊತೆಗಿರುವ ಫೋಟೋ ಒಂದು ವರ್ಷಕ್ಕಿಂತ ಹಳೆಯದು. ಸಂತೋಷ್ ಪಾಟೀಲ್ ಪತ್ನಿ ಮತ್ತು ಗೆಳೆಯರ ಹೇಳಿಕೆ ಹೊರತುಪಡಿಸಿದರೆ ಈಶ್ವರಪ್ಪ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಾನೂ ಆರೋಪ ಮುಕ್ತವಾಗಿ ಹೊರಬಂದಿದಿದ್ದೇನೆ

ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್​ ಚಿಟ್​ ಸಿಕ್ಕ ಬಳಿಕ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಶಾಸಕ ಕೆ.ಎಸ್ ಈಶ್ವರಪ್ಪ, ಇವತ್ತು ಸಂತೋಷ್ ಆತ್ಮಹತ್ಯೆ ಪ್ರಕರಣ ಬಿ ರಿಪೋರ್ಟ್ ಬಂದಿದೆ.ಬಿ ರಿಪೋರ್ಟ್ ನಲ್ಲಿ ನಾನೂ ಆರೋಪ ಮುಕ್ತವಾಗಿ ಹೊರಬಂದಿದಿದ್ದೇನೆ. ಯಾವುದೇ ಪಾತ್ರವಿಲ್ಲ ಎಂದು ಬಂದಿರಿವುದು ತುಂಬಾ ಸಂತೋಷವಾಗಿದೆ ಎಂದ್ರು.
Published by:Pavana HS
First published: