ಬಾಲಕನ ಮೇಲೆ ಬೀದಿ ನಾಯಿ ದಾಳಿ; ಬಿಬಿಎಂಪಿ ಗುತ್ತಿಗೆದಾರ, ಅಧಿಕಾರಿಗಳಿಬ್ಬರ ಬಂಧನ

news18
Updated:August 31, 2018, 7:02 PM IST
ಬಾಲಕನ ಮೇಲೆ ಬೀದಿ ನಾಯಿ ದಾಳಿ; ಬಿಬಿಎಂಪಿ ಗುತ್ತಿಗೆದಾರ, ಅಧಿಕಾರಿಗಳಿಬ್ಬರ ಬಂಧನ
news18
Updated: August 31, 2018, 7:02 PM IST
ಕೆ.ಎನ್​. ಕಿರಣ್​, ನ್ಯೂಸ್​18 ಕನ್ನಡ

ಬೆಂಗಳೂರು (ಆ. 31): ನಗರದಲ್ಲಿ  ಬೀದಿ ನಾಯಿಗಳ ಹಾವಳಿ ಮತ್ತೆ ಶುರುವಾಗಿದ್ದು, ಆ. 29ರಂದು ವಿಭೂತಿಪುರದ ಕೆರೆ ಬಳಿ ಬಾಲಕನ ಮೇಲೆ ದಾಳಿ ಮಾಡಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.

ಬೀದಿ ನಾಯಿಗಳಿಂದ ದಾಳಿಗೊಳಗಾಗಿದ್ದ ಬಾಲಕ ಪ್ರವೀಣ್​ ಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಮಹದೇವಪುರ ವಲಯ ಪಶುಪಾಲನೆ ವಿಭಾಗದ ಸಹಾಯಕ ನಿರ್ದೇಶಕ ಶ್ರೀರಾಮ್​, ಪಶುಪಾಲನೆ ಗುತ್ತಿಗೆದಾರ ರವಿಶಂಕರ್​, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಅರುಣ್​ ಮುತಾಲಿಕ್​ ದೇಸಾಯಿ ಅವರನ್ನು ಬಂಧಿಸಲಾಗಿದೆ.

ಶ್ರೀರಾಮ್​


ಆ. 29ರಂದು ಮಧ್ಯಾಹ್ನ ವಿಭೂತಿಪುರದ ಕೆರೆಯ ಬಳಿ ಪ್ರವೀಣ್​ ಎಂಬ 10 ವರ್ಷದ ಹುಡುಗನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದವು. ಮಣಿಪಾಲ್​ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇನ್ನೂ ಬಾಲಕನಿಗೆ ಚಿಕಿತ್ಸೆ ಮುಂದುವರಿಯುತ್ತಿದೆ.

ಅರುಣ್​ ಮುತಾಲಿಕ್​


ಈ ಘಟನೆಗೆ ಸಂಬಂಧಿಸಿದಂತೆ ಪ್ರವೀಣನ ಪೋಷಕರು ಹೆಚ್​ಎಎಲ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಬೀದಿನಾಯಿಗಳ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದ ಇಬ್ಬರು ಬಿಬಿಎಂಪಿ ಅಧಿಕಾರಿಗಳು, ಓರ್ವ ಗುತ್ತಿಗೆದಾರನನ್ನು ಬಂಧಿಸಿದ್ದಾರೆ.
Loading...

ರವಿಶಂಕರ್
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ