Gadag: ಗದಗದಲ್ಲಿ ಮಳೆ ಆರ್ಭಟ ಜೋರು! ಮನೆಗಳಿಗೆ ನೀರು ನುಗ್ಗಿ ಜನರಿಗೆ ಜಾಗರಣೆ

ಗದಗದಲ್ಲಿ ಭಾರೀ ಮಳೆಗೆ ಮನೆಯೊಳಗೆ ನೀರು ತುಂಬಿರುವುದು

ಗದಗದಲ್ಲಿ ಭಾರೀ ಮಳೆಗೆ ಮನೆಯೊಳಗೆ ನೀರು ತುಂಬಿರುವುದು

ರಾತ್ರಿ 10 ಗಂಟೆಯಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ  ಮನೆಗಳಿಗೆ ನೀರು ನುಗ್ಗಲಾರಂಭಿಸಿತ್ತು. ಇದರಿಂದಾಗಿ ಜನರು ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿತ್ತು.

  • Share this:

ಗದಗ(ಮೇ.20) : ಗದಗ (Gadag) ಜಿಲ್ಲೆಯಲ್ಲೂ ಮಳೆ ಅವಾಂತರ ಸೃಷ್ಟಿಸಿಯಾಗಿದೆ. ನಗರದ ಗಂಗಿಮಡಿ ಬಡಾವಣೆಯ ಅನೇಕ‌ ಮನೆಗಳಿಗೆ ಮಳೆ ನೀರಿನ ಜೊತೆಗೆ ಚರಂಡಿ ನೀರು (Drainage Water) ನುಗ್ಗಿದೆ. ಬಡಾವಣೆ ಹಿಂಭಾಗದ ಡ್ರೈನೇಜ್ ಛೇಂಬರ್ ನಿಂದ ನೀರು ಹರಿದು ಮನೆಗಳಿಗೆ ನುಗ್ಗಿದೆ. ರಾತ್ರಿ 10 ಗಂಟೆಯಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ (Rain) ಬೆಳಗಿನ ಜಾವ 3 ಗಂಟೆ ಸುಮಾರಿಗೆ  ಮನೆಗಳಿಗೆ ನೀರು ನುಗ್ಗಲಾರಂಭಿಸಿತ್ತು. ಇದರಿಂದಾಗಿ ಜನರು ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿತ್ತು. ಮನೆಯಲ್ಲಿ ಹೊಕ್ಕ ನೀರನ್ನ ಬುಟ್ಟಿಗಳ ಸಹಾಯದಿಂದ ಹೊರ ಹಾಕುವ ವ್ಯರ್ಥ ಪ್ರಯತ್ನ ಮಾಡಿದ್ರು.


ಉಪಾಹಾರ ಸೇವಿಸದೇ ಹಾಗೇ ಕೂತ ತುಂಬು ಗರ್ಭಿಣಿ ಮಹಿಳೆ


ಕಾಲೋನಿಯ ಆಸ್ಮಾ ನದಾಫ್ ಎಂಬ ತುಂಬು ಗರ್ಭಿಣಿ, ಮಧ್ಯಹ್ನವಾದ್ರೂ ಉಪಾಹಾರ ಸೇವಿಸದೇ ಹಾಗೇ ಕೂತ ದೃಶ್ಯ ಮನಕಲಕುವಂತಿತ್ತು. ಕುಸುಗಲ್ ನಿಂದ ಹೆರಿಗೆಗಾಗಿ ತವರು ಮನೆಗೆ ಆಸ್ಮಾ ಬಂದಿದ್ರು. ನಿನ್ನೆ ಏಕಾಏಕಿ ಮನೆಗೆ ನೀರು ನುಗ್ಗಿದ ಪರಿಣಾಮ ಆಸ್ಮಾ ರಸ್ತೆಯಲ್ಲೇ ಕೂತಿದ್ರು.ರಾತ್ರಿಯಿಂದ ಗರ್ಭಿಣಿಯರು, ವೃದ್ಧರು, ಮಕ್ಕಳು, ಮಹಿಳೆಯರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ.


ಒಲೆ ಹೊತ್ತಿಸಲಾಗುತ್ತಿಲ್ಲ


ಮನೆಗೆ ನೀರು ನುಗ್ಗಿದ್ದ ಪರಿಣಾಮ ಮನೆಯ ಸಾಮಗ್ರಿಗಳು ತೇವ ಆಗಿವೆ. ಬೆಳಗಿನ ಉಪಹಾರಕ್ಕೂ ಒಲೆ ಹೊತ್ತಿಸಲು ಸಾಧ್ಯವಾಗಿರಲಿಲ್ಲ. ಅವೈಜ್ಞಾನಿಕ ಡ್ರೈನೇಜ್ ಕಾಮಗಾರಿಯಿಂದ ಅನೇಕ‌ ಮನೆಗಳಿಗೆ ನೀರು ನುಗ್ಗುತ್ತಿದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.. ವೃದ್ಧೆ ಒಬ್ಬರು ಮನೆಯಿಂದ ನೀರು ಹೊರಹಾಕುತ್ತಾ ಕಣ್ಣೀರಿಟ್ಟ ದೃಶ್ಯವೂ ಕಂಡು ಬಂತು.


ಎಲ್ಲ ಕಡೆ ಮಳೆಯ ಎಫೆಕ್ಟ್


ಜೀವನೋಪಾಯಕ್ಕಾಗಿ ಅಂತಾ ಮನೆಯಲ್ಲೇ ಚಿಕ್ಕ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಮಳೆ ರೌದ್ರ ನರ್ತನಕ್ಕೆ ಅಂಗಡಿ ಸಾಮಗ್ರಿಗಳು ನೀರುಪಾಲಾಗಿವೆ. ಒಂಟಿ ವೃದ್ಧೆ ಅಸಹಾಯಕಳಾಗಿ ಕಣ್ಣೀರಿಡುತ್ತಾ ತನ್ನ ಅಳಲು ತೋಡಿಕೊಂಡರು.


ಇದನ್ನೂ ಓದಿ: CM Visit: ಮಳೆ ಹಾನಿ ಪ್ರದೇಶಗಳಿಗೆ ಬಸವರಾಜ ಬೊಮ್ಮಾಯಿ ವಿಸಿಟ್; ಅತ್ತ ಎಚ್‌ಡಿಕೆ ಪ್ರತ್ಯೇಕ ಭೇಟಿ


ಗದಗ ಜಿಲ್ಲೆ ಹಲವೆಡೆ ಮಳೆರಾಯ ಎಡಬಿಡದೆ ಸುರಿದು ಅವಾಂತರ ಸೃಷ್ಟಿ ಮಾಡಿದೆ. ಇನ್ನು ಗಂಗಿಮಡಿಯ ನಿವಾಸಿಗಳಿಗೆ ನಗರಸಭೆಯ ಅಧಿಕಾರಿಗಳಯ ಎಚ್ಚೆತ್ತೆಗೊಂಡು ಬಡ ಜನ್ರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಅಷ್ಟೇ ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸಿ ಆದಷ್ಟು ಬೇಗನೆ ಬಡ ಜನ್ರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ. ಹಗಲು ರಾತ್ರಿ ಎನ್ನದೆ ಕಣ್ಣೀರಿನಲ್ಲಿ ಗಂಗಿಮಡಿಯ ನಿವಾಸಿಗಳು ಕೈ ತೊಳೆಯುತ್ತಿದ್ದಾರೆ.


ನೋಡು ನೋಡುತ್ತಿದ್ದಂತೆ ಹಳೇಯ ಮನೆಯ ಗೋಡೆ ಕುಸಿತ


ರಾತ್ರಿವಿಡಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ‌ ಡಂಬಳ ಗ್ರಾಮದಲ್ಲಿ ನಡೆದಿದೆ. ಹೌದು ನೋಡು ನೋಡುತ್ತಿದ್ದಂತೆ ಹಳೇಯ ಮನೆಯ ಗೋಡೆ ಕುಸಿತ ಬೀಳುತ್ತಿರೋದ ಗ್ರಾಮಸ್ಥರು ನಿಂತು ನೋಡುತ್ತಾರೆ. ಡಂಬಳ ಗ್ರಾಮದ ಅನ್ನಸಮ್ಮ‌‌ ಮಠದ ಎಂಬುವರಿಗೆ ಸೇರಿದ ಹಳೇಯ ಮನೆಯ ಗೋಡೆ ಕುಸಿದ್ದು ಬಿದ್ದಿದೆ. ಬೀಳುವ ಮನೆಯ ಕಟ್ಟಿಯ ಮೇಲೆ ಕುಳಿತಿದ್ದ ಕೆಲವರು ಗೋಡೆ ಬೀಳುವ ಸಪ್ಪಳಕ್ಕೆ ಕಾಲು ಕಿತ್ತು ಓಡಿದ್ದಾರೆ.

First published: