ಇವಿಎಂ ದುರುಪಯೋಗವಾಗುತ್ತಿದೆ; ಸ್ವಾಯತ್ತ ಸಂಸ್ಥೆಗಳು ಅಪಾಯದಲ್ಲಿವೆ; ಹೀಗೇ ಮುಂದುವರಿದರೆ ಪ್ರಜಾಪ್ರಭುತ್ವಕ್ಕೆ ಕೊಡಲಿಪೆಟ್ಟು: ಮಲ್ಲಿಕಾರ್ಜುನ ಖರ್ಗೆ ಆತಂಕ

ಇವಿಎಂ ಬಗ್ಗೆ ದೊಡ್ಡ ಆಂದೋಲನವಾಗಬೇಕು. ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ತರುವ ಕೆಲಸವಾಗಬೇಕು. ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಆಗುವುದನ್ನು ತಡೆಯಬೇಕು. ಹಾಗಾಗದಿದ್ದಲ್ಲಿ ದೇಶಕ್ಕೆ ಉಳಿಗಾಲವಿಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟರು.

news18-kannada
Updated:September 24, 2019, 5:37 PM IST
ಇವಿಎಂ ದುರುಪಯೋಗವಾಗುತ್ತಿದೆ; ಸ್ವಾಯತ್ತ ಸಂಸ್ಥೆಗಳು ಅಪಾಯದಲ್ಲಿವೆ; ಹೀಗೇ ಮುಂದುವರಿದರೆ ಪ್ರಜಾಪ್ರಭುತ್ವಕ್ಕೆ ಕೊಡಲಿಪೆಟ್ಟು: ಮಲ್ಲಿಕಾರ್ಜುನ ಖರ್ಗೆ ಆತಂಕ
ಮಲ್ಲಿಕಾರ್ಜುನ ಖರ್ಗೆ
  • Share this:
ಬೆಂಗಳೂರು(ಸೆ. 24): ದೇಶದ ಪ್ರಜಾಪ್ರಭುತ್ವಕ್ಕೆ ಬುನಾದಿಯಾದ ಅನೇಕ ಸಂಸ್ಥೆಗಳ ದುರುಪಯೋಗವಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲಾ ಸಂಸ್ಥೆಗಳನ್ನು ಹತೋಟಿಗೆ ತೆಗೆದುಕೊಂಡಿದೆ. ಚುನಾವಣಾ ಆಯೋಗ, ಐಟಿ, ಇಡಿ, ಸಿಬಿಐ ಮೊದಲಾದ ಸ್ವಾಯತ್ತ ಸಂಸ್ಥೆಗಳು ಕೇಂದ್ರದ ಹಿಡಿತದಲ್ಲಿವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇಂದು ಆತಂಕ ತೋಡಿಕೊಂಡರು. ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಖರ್ಗೆ, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದರು.

ಇವಿಎಂ ಬಗ್ಗೆ ದೊಡ್ಡ ಆಂದೋಲನವಾಗಬೇಕು. ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ತರುವ ಕೆಲಸವಾಗಬೇಕು. ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಆಗುವುದನ್ನು ತಡೆಯಬೇಕು. ಹಾಗಾಗದಿದ್ದಲ್ಲಿ ದೇಶಕ್ಕೆ ಉಳಿಗಾಲವಿಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ನಿಮ್ಮದು ಮನುಷ್ಯ ಚರ್ಮವೋ ಎಮ್ಮೆ ಚರ್ಮವೋ, ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ನಿಮಗೇನು ರೋಗ?; ಬಿಎಸ್​ವೈ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

“ಇವಿಎಂ ಮೆಷಿನ್​ಗಳ ದುರುಪಯೋಗವಾಗುತ್ತಿದೆ ಎಂದು ನಾನು ಸೋತಿರುವ ಕಾರಣಕ್ಕೆ ಆರೋಪ ಮಾಡುತ್ತಿಲ್ಲ. ಕೆಲವು ಆಯ್ದ ಕ್ಷೇತ್ರಗಳಲ್ಲಿ ಇವಿಎಂ ದುರುಪಯೋಗವಾಗುತ್ತಿರುವುದಕ್ಕೆ ಸ್ಪಷ್ಟ ನಿದರ್ಶನಗಳಿವೆ” ಎಂದು ಹೇಳಿದ ಖರ್ಗೆ ಗುರುಮಠಕಲ್ ಕ್ಷೇತ್ರದ ಉದಾಹರಣೆ ನೀಡಿದರು.

“1952ರಿಂದ 2019ರವರೆಗೂ ಗುರುಮಿಠ್ಕಲ್​ನಲ್ಲಿ ಕಾಂಗ್ರೆಸ್ ಇದೆ. ಇಲ್ಲಿ ನಿರಂತರವಾಗಿಯೇ ಗೆಲ್ಲುತ್ತಾ ಬಂದಿದೆ. ಹಲವರು ಹೊರಗಿನಿಂದ ಬಂದು ಇಲ್ಲಿ ನಿಂತು ಗೆದ್ದಿದ್ದಾರೆ. ಕಾಂಗ್ರೆಸ್ ಸಂಸದರಿಗೆ ಗುರುಮಿಠಕಲ್ ವಿಧಾನಸಭಾ ಕ್ಷೇತ್ರ ಲೀಡ್ ಕೊಟ್ಟಿದೆ. 2008ರವರೆಗೆ ನಾನೂ ಅಲ್ಲಿ ಶಾಸಕನಾಗಿದ್ದೆ. ಯಾವಾಗಲೂ ಅಲ್ಲಿ ಲೀಡ್ ಅಂತರ ಹೆಚ್ಚುತ್ತಿತ್ತೇ ಹೊರತು ಕಡಿಮೆಯಾಗಿದ್ದಿಲ್ಲ. ಚಿತ್ತಾಪುರಕ್ಕೆ ಕ್ಷೇತ್ರ ಬದಲಾವಣೆ ಮಾಡಿದ ಮೇಲೂ ಅಲ್ಲಿ ಕಾಂಗ್ರೆಸ್ ಇತ್ತು. ಇಂಥ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದರೆ ಹೇಗೆ ಸಾಧ್ಯ?” ಎಂದು ಮಾಜಿ ಕೇಂದ್ರ ಸಚಿವರೂ ಆದ ಅವರು ಪ್ರಶ್ನಿಸಿದರು.

ಇದನ್ನೂ ಓದಿ: Viral Selfie: ಟ್ವಿಟ್ಟರ್​ನಲ್ಲಿ ವೈರಲ್ ಆಯ್ತು ಮೋದಿ- ಟ್ರಂಪ್ ಜೊತೆಗಿನ ಶಿರಸಿ ಹುಡುಗನ ಪವರ್​ಫುಲ್ ಸೆಲ್ಫೀ!

“ಬಿಜೆಪಿ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡುತ್ತಿದೆ. ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿದೆ. ನನ್ನ ಕ್ಷೇತ್ರಕ್ಕೆ ಆರೆಸ್ಸೆಸ್​ನವರು ಎರಡು ವರ್ಷ ಮೊದಲೇ ಬಂದು ಕೂತರು. ಪ್ರಧಾನಿ ಮೋದಿ ಕೂಡ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟರು. ಶಾ ಬಂದು ಹೋದ್ರು. ಇವೆಲ್ಲವನ್ನೂ ಗಮನಿಸಿದಾಗ ಸಹಜವಾಗಿಯೇ ಅನುಮಾನ ಬರುತ್ತದೆ. ಇದು ಮುಂದುವರಿದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ” ಎಂದು ಭಯ ವ್ಯಕ್ತಪಡಿಸಿದ ಖರ್ಗೆ, ಮುಂಬರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲೂ ಎವಿಎಂ ಮೆಷೀನ್ ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕೇಂದ್ರದ ವಿಪಕ್ಷ ನಾಯಕರು ಇವಿಎಂ ಮತಯಂತ್ರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳನ್ನ ತಿರುಚಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಹಾಗೆಯೇ, ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯು ಇವಿಎಂ ಮತಯಂತ್ರಗಳ ದುರುಪಯೋಗ ಮಾಡಿದೆ. ಐಟಿ, ಇಡಿ, ಸಿಬಿಐ ಮೂಲಕ ವಿಪಕ್ಷ ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ.

(ವರದಿ: ಶ್ರೀನಿವಾಸ ಹಳಕಟ್ಟಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: September 24, 2019, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading