Drugs Case| ಸಿಸಿಬಿ ಪೊಲೀಸರಿಂದ ಮುಂದುವರಿದ ಕಾರ್ಯಾಚರಣೆ; 30 ಲಕ್ಷ ಮೌಲ್ಯದ ಡ್ರಗ್ ಜಪ್ತಿ, 5 ಡ್ರಗ್ ಪೆಡ್ಲರ್ ಗಳ ಬಂಧನ

ಮಾದಕ ವಸ್ತು ಸೇವಿಸಿದ್ರೆ ಹೆಚ್ಚು ಕೆಲಸ ಮಾಡಬಹುದು ಎಂದು ಐಟಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಪೆಡ್ಲರ್ಸ್ ಗಳು ಈ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂಬ ಅಂಶ ವಿಚಾರಣೆ ವೇಳೆ ಬಹಿರಂಗವಾಗಿದೆ.

ಜಪ್ತಿ ಮಾಡಲಾಗಿರುವ ಮಾದಕ ವಸ್ತುಗಳು.

ಜಪ್ತಿ ಮಾಡಲಾಗಿರುವ ಮಾದಕ ವಸ್ತುಗಳು.

 • Share this:
  ಬೆಂಗಳೂರು (ಜೂನ್ 23); ಸ್ಯಾಂಡಲ್​ ವುಡ್​ ನಟಿಯರು ಮಾದಕ ವಸ್ತು ಪ್ರಕರಣದಲ್ಲಿ ಸಿಲುಕಿದ ನಂತರ ಸಿಸಿಬಿ ಪೊಲೀಸರು ಮಾದಕ ಜಾಲದ ಮೇಲೆ ಮುಗಿಬಿದ್ದಿತ್ತು. ನಗರದಲ್ಲಿ ಹಲವಾರು ಡ್ರಗ್ಸ್​ ಪೆಡ್ಲರ್​ಗಳನ್ನು ಬಂಧಿಸಿತ್ತು. ಪರಿಣಾಮ ಈ ಜಾಲ ಕೆಲ ದಿನಗಳಿಂದ ಸದ್ದಿಲ್ಲದಂತಾಗಿತ್ತು. ಆದರೆ, ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅನ್​ಲಾಕ್​ ಆರಂಭವಾಗುತ್ತಿದ್ದಂತೆ ಡ್ರಗ್ಸ್​ ಜಾಲ ಮತ್ತೆ ತನ್ನ ಕಬಂಧಬಾಹುಗಳನ್ನು ಚಾಚಲು ಆರಂಭಿಸಿದೆ. ಹೀಗಾಗಿ ಮತ್ತೆ ಸಿಸಿಬಿ ಪೊಲೀಸರು ಇಂದು ಮಾದಕ ಜಾಲದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 30 ಲಕ್ಷ ಮೌಲ್ಯದ ಡ್ರಗ್ ಜಪ್ತಿ ಮಾಡಲಾಗಿದ್ದು, 5 ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, 30 ಲಕ್ಷ ಮೌಲ್ಯದ 300 MDM ಮಾತ್ರೆಗಳು, 150 LSD ಸ್ಟ್ರಿಪ್ಸ್, 250 ಗ್ರಾಂ ಹ್ಯಾಶಿಶ್, ಗಾಂಜಾ ಹಾಗೂ 5 ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಎಲ್ಲಾ ಪ್ರಮುಖ 5 ಡ್ರಗ್​ ಪೆಡ್ಲರ್​ಗಳನ್ನು ಬಂಧಿಸಲಾಗಿದೆ.

  ಬ್ಯಾರಡಹಳ್ಳಿಯ ಪ್ರತಿಷ್ಟಿತ ಕಾಲೇಜಿನ ಬಳಿ ಪಿಜಿಯಲ್ಲಿ ಈ ಪೆಡ್ಲರ್ ಗಳು ವಾಸವಾಗಿದ್ದು, ಅವರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ, ತಲೆ ಮರೆಸಿಕೊಂಡಿರುವ ಮೂವರು ಕಿಂಗ್ ಪಿನ್ ಗಳಿಗಾಗಿ ಹುಡುಕಾಟವೂ ನಡೆಯುತ್ತಿದೆ. ಬಂಧಿತ ಐದು ಆರೋಪಿಗಳ ಪೈಕಿ ಇಬ್ಬರು ಟೆಕ್ಕಿಗಳು, ಓರ್ವ ಆರೋಪಿ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿ ಎಂಬುದು ಆತಂಕಕ್ಕೆ ಕಾರಣವಾಗಿದೆ.

  ಪೊಲೀಸರ ವಿಚಾರಣೆ ವೇಳೆ ಡಾರ್ಕ್ ವೆಬ್ ಮೂಲಕ ಬಿಟ್ ಕಾಯಿನ್ ನಿಂದ ವಿದೇಶದಿಂದ ಹೈಎಂಡ್ ಡ್ರಗ್ ಖರೀದಿ ಮಾಡಿ ಬಳಿಕ ಅಮೇಜಾನ್ ಟೇಪ್ ಸುತ್ತಿ ಯಾರಿಗೂ ಅನುಮಾನ ಬಾರದಂತೆ ಕೋರಿಯರ್ ಮೂಲಕ ದಂಧೆ ನಡೆಯುತ್ತಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆಯುತ್ತಿದೆ.

  ಇದನ್ನೂ ಓದಿ: Lakshadweep| ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ 2 ವಿವಾದಾತ್ಮಕ ಆದೇಶಗಳಿಗೆ ತಡೆ ನೀಡಿದ ಕೇರಳ ಹೈಕೋರ್ಟ್​

  ಟೆಕ್ಕಿಗಳು-ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿಗಳೇ ಪೆಡ್ಲರ್​ಗಳ ಟಾರ್ಗೆಟ್!:

  ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳಿಗೆ ಅಧಿಕ ಸಂಬಳದ ಜೊತೆಗೆ ಕೆಲಸದ ಒತ್ತಡವೂ ಅಧಿಕವಾಗಿರುತ್ತದೆ. ಇನ್ನೂ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೂ ಹೆಚ್ಚು ಅಂಕ ಗಳಿಸಬೇಕು ಎಂಬ ಒತ್ತಡ ಇರುತ್ತದೆ. ನಗರದ ಡ್ರಗ್ಸ್​ ಪೆಡ್ಲರ್​​ಗಳಿಗೆ ಈ ಒತ್ತವೇ ಬಂಡವಾಳ. ಹೀಗಾಗಿ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳೇ ಇವರ ಟಾರ್ಗೆಟ್.

  ಮಾದಕ ವಸ್ತು ಸೇವಿಸಿದ್ರೆ ಹೆಚ್ಚು ಕೆಲಸ ಮಾಡಬಹುದು ಎಂದು ಐಟಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಪೆಡ್ಲರ್ಸ್ ಗಳು ಈ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂಬ ಅಂಶ ವಿಚಾರಣೆ ವೇಳೆ ಬಹಿರಂಗವಾಗಿದೆ.

  ಇದನ್ನೂ ಓದಿ: SaveLakshaDweep: ನೆಮ್ಮದಿಯಾಗಿದ್ದ ಲಕ್ಷದ್ವೀಪದಲ್ಲಿ ಹುಳಿ ಹಿಂಡಿತಾ ಕೇಂದ್ರ, ಏನಿದು ಸೇವ್ ಲಕ್ಷದ್ವೀಪ ಹೋರಾಟ? ಇಲ್ಲಿದೆ ಮಾಹಿತಿ!

  ತಮ್ಮ ಸಹೋದ್ಯೋಗಿಗಳನ್ನೇ ಗಿರಾಕಿಗಳಾಗಿ ಮಾಡಿಕೊಂಡಿದ್ದ ಆರೋಪಿಗಳು ಐಟಿ ಫೀಲ್ಡ್ ನಲ್ಲಿ ಹೆಚ್ಚು ಕೆಲಸ ಮಾಡಲು ಮಾದಕವಸ್ತು ಅಗತ್ಯ, ಅದನ್ನು ಸೇವಿಸಿದ್ರೆ ಹೆಚ್ಚು ಕೆಲಸ ಮಾಡಬಹುದು ಎಂದು ಪ್ರೇರೆಪಣೆ ನೀಡಿ ಹಲವು ಮಂದಿಯನ್ನು ಡ್ರಗ್ ವ್ಯಸನಿಗಳನ್ನಾಗಿ ಮಾಡಿದ್ದಾರೆ. ಹೀಗಾಗಿ ಪೊಲೀಸರು ಇದೀಗ ಆರೋಪಿಗಳ ವಿರುದ್ಧ ನಾನಾ ಸೆಕ್ಷನ್​ನಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: