Idli : ಶೀಘ್ರವೇ ಬೆಂಗಳೂರಲ್ಲಿ ಶುರುವಾಗಲಿದೆ ಇಡ್ಲಿ ಎಟಿಎಂ..!

Idli Atm : ಹಲವಾರು ಕಡೆ ಪಾನಿಪುರಿ ಗೋಲ್ ಗಪ್ಪ ಎಟಿಎಂಗಳ ಸ್ಥಾಪನೆಯಾಗಿದೆ.. ಆದ್ರೆ ಇದೇ ಮೊದಲ ಬಾರಿಗೆ ವಿಶೇಷ ಎನ್ನುವಂತೆ ಬೆಂಗಳೂರಿಗರ ಇಡ್ಲಿ ಬೇಡಿಕೆಯನ್ನು ಪೂರೈಸಲು ಶೀಘ್ರವೇ ಇಡ್ಲಿ ಎಟಿಎಂ ಪ್ರಾರಂಭವಾಗಲಿದೆ

ಇಡ್ಲಿ

ಇಡ್ಲಿ

 • Share this:
  ದಕ್ಷಿಣ ಭಾರತದಲ್ಲಿ (South India) ಅತಿ ಹೆಚ್ಚು ಫೇಮಸ್ (Famous) ಆಗಿರುವ ಆಹಾರ ಪದಾರ್ಥ ಅಂದರೆ ಅದು ಇಡ್ಲಿ(Idli) ಚಟ್ನಿ(Chutney) ಸಾಂಬಾರ್.. ಬೆ ಳಗ್ಗಿನ ಉಪಹಾರಕ್ಕೆ(Morning Breakfast) ಇರಲಿ ರಾತ್ರಿಯ ಊಟಕ್ಕೆ(Night Dinner) ಇರಲಿ ಕೆಲವರಿಗೆ ಇಡ್ಲಿ ಸಾಂಬಾರ್ ಚಟ್ನಿ ಅಂದ್ರೆ ಅಚ್ಚುಮೆಚ್ಚು. ಆದರೆ ಇಂತಹ ಇಡ್ಲಿಯನ್ನು ದಿಢೀರಂತ ಮನೆಯಲ್ಲಿ ಮಾಡುವುದು ಕಷ್ಟಸಾಧ್ಯ.. ಹೀಗಾಗಿಯೇ ಹೆಚ್ಚು ಜನರು ಹೋಟೆಲ್ ಗಳಿಂದ ಇಡ್ಲಿ ತರಿಸಿಕೊಂಡು ತಿನ್ನುತ್ತಾರೆ. ಆದ್ರೆ ಇಡ್ಲಿ ಹೋಟೆಲ್ಗಳು ತೆಗೆದಿದ್ದ ಅವಧಿಯಲ್ಲಿ ಮಾತ್ರ ಸಿಗುವುದರಿಂದ ಬೆಣ್ಣೆಯಂತೆ ಮೆತ್ತಗಿರುವ ಇಡ್ಲಿ ಸೇವನೆ ಅಸಾಧ್ಯ.. ಹೀಗಾಗಿ ಬೆಂಗಳೂರಿನ ಜನರಿಗೆ ಸದಾ ಕಾಲಕ್ಕೂ ಇಡ್ಲಿ ಸೇವೆ ಸಿಗುವಂತೆ ಮಾಡಲು ಶೀಘ್ರವೇ ಬರಲಿದೆ ಇಡ್ಲಿ ಎಟಿಎಂ.

  ಬೆಂಗಳೂರಲ್ಲಿ ಶೀಘ್ರವೇ ಇಡ್ಲಿ ಎಟಿಎಂ

  ಈಗಾಗಲೇ ಹಲವಾರು ಕಡೆ ಪಾನಿಪುರಿ ಗೋಲ್ ಗಪ್ಪ ಎಟಿಎಂಗಳ ಸ್ಥಾಪನೆಯಾಗಿದೆ.. ಆದ್ರೆ ಇದೇ ಮೊದಲ ಬಾರಿಗೆ ವಿಶೇಷ ಎನ್ನುವಂತೆ ಬೆಂಗಳೂರಿಗರ ಇಡ್ಲಿ ಬೇಡಿಕೆಯನ್ನು ಪೂರೈಸಲು ಶೀಘ್ರವೇ ಇಡ್ಲಿ ಎಟಿಎಂ ಪ್ರಾರಂಭವಾಗಲಿದೆ.

  ಹೌದು, ಇದು ನಿಮಗೆ ಆಶ್ಚರ್ಯ ಅನಿಸಿದ್ರೂ ಸತ್ಯ.. ಇಡ್ಲಿ ಬೋಟ್ ಹೆಸರಿನ ಎರಡು ಯಂತ್ರಗಳಲ್ಲಿ ಬಿಸಿ ಬಿಸಿ ಇಡ್ಲಿ ಹಾಗೂ ಚಟ್ನಿ ಸಾಂಬಾರ್ ತಯಾರಾಗಲಿದ್ದು, 24 ಗಂಟೆಯು ಇವುಗಳು ಗ್ರಾಹಕರಿಗೆ ಇಡ್ಲಿಯನ್ನು ಬೇಯಿಸಿ ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸಲಿವೆ.

  ಇದನ್ನೂ ಓದಿ :ಬಾಳೆಹಣ್ಣಿನ ಇಡ್ಲಿ ಟ್ರೈ ಮಾಡಿದ್ದೀರಾ? ಬೆಳಗಿನ ತಿಂಡಿಗೆ ತಿಂದ್ರೆ ಆರೋಗ್ಯಕ್ಕೂ ಒಳ್ಳೆಯದಂತೆ!

  ಮಗಳ ಅನಾರೋಗ್ಯದಿಂದ ಹುಟ್ಟಿಕೊಂಡಿತು ಇಡ್ಲಿ ಎಟಿಎಂ ಕನಸು

  ಫ್ರೆಶ್‌ ಹಾಟ್‌ ರೋಬೋಟಿಕ್ಸ್‌ ಪ್ರೈ. ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಸಿಒಇ ಶರಣ್‌ ಹಿರೇಧಿಮಧಿಠ್‌ ಅವರು ಹೇಳುವಂತೆ ಪ್ರಸ್ತುತ ಕೊರೋನಾ ಮಹಾಮಾರಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

  ಹೀಗಾಗಿ ಹೋಟೆಲ್ ರೆಸ್ಟೋರೆಂಟ್ ಹಾಗೂ ದರ್ಶಿನಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಇಡ್ಲಿ ಖರೀದಿ ಮಾಡುವುದು ಅಸಾಧ್ಯ .

  ಒಮ್ಮೆ ನನ್ನ ಮಗಳಿಗೆ ಅನಾರೋಗ್ಯವಾಗಿತ್ತು. ರಾತ್ರಿ 10.30ರಲ್ಲಿ ಇಡ್ಲಿ ಸಿಗಲಿಲ್ಲ. ಆಗ ನನಗೆ ಎಟಿಎಂನಲ್ಲಿ ದಿನದ 24 ಗಂಟೆಯೂ ಹಣ ಸಿಗುವಂತೆ, ಇಡ್ಲಿಯೂ ಕೂಡ ಏಕೆ ಸಿಗುವಂತೆ ಮಾಡಬಾರದೆಂಬ ಆಲೋಚನೆ ಬಂದಿತು.

  2019ರ ಫೆಬ್ರವರಿಯಲ್ಲಿ ಹುಟ್ಟಿಕೊಂಡ ಇಡ್ಲಿ ಸಂಪರ್ಕ ರಹಿತ ಆಹಾರ ಪೂರೈಕೆ ಉದ್ದೇಶ ಇಡ್ಲಿ ಎಟಿಎಂ ಮೂಲಕ ನೆರವೇರುತ್ತಿದೆ ಎಂದು ಫ್ರೆಶ್‌ ಹಾಟ್‌ ರೋಬೋಟಿಕ್ಸ್‌ ಪ್ರೈ. ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಸಿಒಇ ಶರಣ್‌ ಹಿರೇಧಿಮಧಿಠ್‌ ಹೇಳುತ್ತಿದ್ದಾರೆ.

  ಇನ್ನು ಇಡ್ಲಿಬೋಟ್‌ ಹೇಗೆ ಕಾರ್ಯ ನಿರ್ವಹಣೆ ಮಾಡುತ್ತದೆ ಎಂದು ವಿವರಿಸಿರುವ ಕಂಪನಿಯ ಸಹ ಸಂಸ್ಥಾಪಕ ಸುರೇಶ್‌ ಚಂದ್ರಶೇಖರನ್‌, 'ಇಡ್ಲಿಹಿಟ್ಟನ್ನು ಸಿದ್ಧಪಡಿಸಿ ಅದನ್ನು ಡ್ರಮ್‌ಗಳಲ್ಲಿ ಪೂರೈಸಲಾಗುವುದು. ಇಡ್ಲಿ ಯಂತ್ರಗಳನ್ನು ಕ್ಲೌಡ್‌ ಕಿಚನ್‌ಗಳ ಜತೆ ಸಂಯೋಜಿಸಲಾಗುವುದು. ಇಡ್ಲಿಹಿಟ್ಟು ಕಡಿಮೆಯಾಗುತ್ತಿದ್ದಂತೆಯೇ ಅಲರ್ಟ್‌ ಸಂದೇಶ ಬರುತ್ತದೆ. ನಂತರ ಇಡ್ಲಿಬೋಟ್‌ಗಳಿಗೆ ಹಿಟ್ಟನ್ನು ತುಂಬಲಾಗುವುದು ಎಂದು ತಿಳಿಸಿದ್ದಾರೆ .

  ಇದನ್ನೂ ಓದಿ : 20 ನಿಮಿಷದಲ್ಲಿ ರೆಡಿಯಾಗುತ್ತೆ ಗೋಲಿ ಇಡ್ಲಿ, ಬೆಳಗ್ಗಿನ ಗಡಿಬಿಡಿಗೆ ಸೂಪರ್ ತಿಂಡಿ - ಟ್ರೈ ಮಾಡಿ

  ಜನಸಂದಣಿ ಇರುವ ಪ್ರದೇಶಗಳಲ್ಲಿ ಇಡ್ಲಿ ಎಟಿಎಂ ಸ್ಥಾಪನೆಗೆ ಚಿಂತನೆ

  ಸಾಮಾನ್ಯವಾಗಿ ಬೆಂಗಳೂರಲ್ಲಿ ಗಲ್ಲಿಗೊಂದು ಹೋಟೆಲ್ ಹಾಗು ದರ್ಶಿನಿಗಳು ಇವೆ.. ಆದರೆ ಹೆಚ್ಚು ಜನರು ಓಡಾಟ ಮಾಡುವ ರೈಲ್ವೆ ಸ್ಟೇಷನ್ ಮಾರುಕಟ್ಟೆ, ವಿಮಾನ ನಿಲ್ದಾಣ, ಆಸ್ಪತ್ರೆ, ಹೆದ್ದಾರಿಗಳಲ್ಲಿ ಹೋಟೆಲ್ಗಳು ಅಷ್ಟಾಗಿ ಸಿಗುವುದಿಲ್ಲ.

  ಅಲ್ಲದೆ ಇಲ್ಲಿ ಹಗಲು-ರಾತ್ರಿ ಎನ್ನದೆ ಜನಸಂಚಾರ ಇದ್ದೇ ಇರುತ್ತದೆ.. ಹೀಗಾಗಿ ಸ್ಥಳಗಳಲ್ಲಿ ಇಡ್ಲಿ ಬೋಟ್ ಸ್ಥಾಪನೆ ಮಾಡುವುದರಿಂದ, ಹಸಿವಾದಾಗ ಜನರು ಯಾವಾಗ ಬೇಕೆಂದರೆ ಆಗ ರುಚಿಯಾದ ಇಡ್ಲಿ ಚಟ್ನಿ ಸಾಂಬಾರ್ ಪಡೆದುಕೊಳ್ಳಬಹುದಾಗಿದೆ..

  25 ರಿಂದ 30ರೂಗೆ 2 ಇಡ್ಲಿ

  ಸದ್ಯ ಇಡ್ಲಿ ಎಟಿಎಂ App  ಅಭಿವೃದ್ಧಿ ಮಾಡಲಾಗುತ್ತಿದ್ದು, ಹಸಿವಾದಾಗ ಯಾರು ಯಾವಾಗ ಬೇಕಾದರೂ ಇಡ್ಲಿಯನ್ನು ಆರ್ಡರ್ ಮಾಡಬಹುದಾಗಿದೆ.. ಸಾಮಾನ್ಯವಾಗಿ ಹೋಟೆಲ್ ನಲ್ಲಿ ಎರಡು ಇಡ್ಲಿಗೆ 60 ರೂಪಾಯಿ ಬೆಲೆ ಇರುತ್ತದೆ..

  ಇಡ್ಲಿ ಎಟಿಎಂನಲ್ಲಿ ಕೇವಲ 25 ರಿಂದ 30 ರೂಪಾಯಿಗೆ ಎರಡು ಇಡ್ಲಿ ದೊರಕುವ ಸಾಧ್ಯತೆ ಇದೆ.ಇನ್ನು 2022ರ ಏಪ್ರಿಲ್‌ ಒಳಗೆ ಇಡ್ಲಿ ಯಂತ್ರಗಳನ್ನು ಪರಿಚಯಿಸುವ ಯೋಜನೆಯನ್ನು ಸಂಸ್ಥಾಪಕರು ಹಾಕಿಕೊಂಡಿದ್ದಾರೆ. ಇಡ್ಲಿಬೋಟ್‌ಗಳಿಗೆ ಸುಮಾರು 200ರಿಂದ 300 ಚದರ ಅಡಿ ಜಾಗದ ಅವಶ್ಯಕತೆ ಇದ್ದು, ಮಾಲ್‌ ಮತ್ತು ಮೆಟ್ರೊ ನಿಲ್ದಾಣಗಳಲ್ಲೂ ಅವುಗಳನ್ನು ಅಳವಡಿಸಬಹುದಾಗಿದೆ
  Published by:ranjumbkgowda1 ranjumbkgowda1
  First published: