Dakshina Kannada: ಈಡೇರಲಿದೆ ಪುತ್ತೂರು ಜನರ ದಶಕಗಳ ಕನಸು; ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣಕ್ಕೆ ಗ್ರೀನ್ ​ಸಿಗ್ನಲ್​

ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಮೂಲಕ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಉಪ್ಪಿನಂಗಡಿಯನ್ನು ಸಂಪರ್ಕಿಸುವ ರಸ್ತೆಗೆ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣಕ್ಕೆ ಕೊನೆಗೂ ಗ್ರೀನ್​ ಸಿಗ್ನಲ್​ ಸಿಕ್ಕಿದೆ.

ಬ್ರಿಡ್ಜ್​ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​

ಬ್ರಿಡ್ಜ್​ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​

  • Share this:
ದಕ್ಷಿಣ ಕನ್ನಡ (ಮೇ 16):  ಪುತ್ತೂರಿನ ಜನತೆಯ ಕಳೆದ 2 ದಶಕಗಳ ನಿರಂತರ ಬೇಡಿಕೆ, ಕಾತರಕ್ಕೆ ಸದ್ಯದಲ್ಲೇ ಪುರಸ್ಕಾರ ಸಿಗುವ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಮಂಗಳೂರು ರೈಲ್ವೆ ನಿಲ್ದಾಣವನ್ನು (Mangalore Railway Station) ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಕಬಕ ಪುತ್ತೂರು (Putturu) ರೈಲು ನಿಲ್ದಾಣವನ್ನು ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಿಸಲು ಇದೀಗ ಕೇಂದ್ರ ರೈಲ್ವೆ (Central Railway) ಇಲಾಖೆ ಹಸಿರು ನಿಶಾನೆ ನೀಡಿದೆ.

ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​

ಸುಮಾರು 9.56 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಕಾಮಗಾರಿಗೆ ಈಗಾಗಲೇ ಟೆಂಟರ್ ಕೂಡಾ ಕರೆಯಲಾಗಿದ್ದು, ಸದ್ಯದಲ್ಲೇ ಕಾಮಗಾರಿಗೂ ಚಾಲನೆ ದೊರಕಲಿದೆ. ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಮೂಲಕ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಉಪ್ಪಿನಂಗಡಿಯನ್ನು ಸಂಪರ್ಕಿಸುವ ರಸ್ತೆಗೆ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಿಸಬೇಕೆಂದು ಒತ್ತಾಯಿಸಿ ನಡೆದ ಹೋರಾಟಗಳಿಗೆ ಲೆಕ್ಕವಿಲ್ಲ.

ಪುತ್ತೂರು ಆದರ್ಶ ರೈಲು ನಿಲ್ದಾಣದ ಮೂಲಕ ಹಾದು ಹೋಗುವ ಈ ರಸ್ತೆಗೆ ಎಪಿಎಂಸಿ ಬಳಿ ರೈಲ್ವೇ ಗೇಟ್ ನಿರ್ಮಿಸಲಾಗಿದ್ದು, ರೈಲು ಮಾರ್ಗದಲ್ಲಿ ನಿರಂತರವಾಗಿ ರೈಲುಗಳು ಹಾದುಹೋಗುತ್ತಿದೆ. ಮಂಗಳೂರು-ಬೆಂಗಳೂರು ಹಗಲು ಮತ್ತು ರಾತ್ರಿ ರೈಲು, ಸುಬ್ರಹ್ಮಣ್ಯ-ಪುತ್ತೂರು ರೈಲು ಸೇರಿದಂತೆ ಹಲವು ಗೂಡ್ಸ್ ರೈಲುಗಳು ದಿನಂಪ್ರತಿ ಈ ರೈಲು ಮಾರ್ಗದಲ್ಲಿ ಸಂಚರಿಸುತ್ತವೆ. ಈ ಕಾರಣಕ್ಕಾಗಿ ಎ.ಪಿ.ಎಂ.ಸಿ ಮೂಲಕ ಉಪ್ಪಿನಂಗಡಿ ಸಂಪರ್ಕಿಸುವ ಈ ರಸ್ತೆ ಹೆಚ್ಚಿನ ಸಮಯ ಬಂದ್​ ಆಗಿರುತ್ತದೆ.

ಇದನ್ನೂ ಓದಿ: Karwar: ಕಾರ್ಮಿಕ ಇಲಾಖೆ ಯೋಜನೆ ಪ್ರಚಾರಕ್ಕಾಗಿ ಹೊಸ ತಂತ್ರ, ಕಾರವಾರದಿಂದ ಬೆಂಗಳೂರಿನವರೆಗೂ ಸ್ಕೆಟಿಂಗ್!

ಈಡೇರಿದ ಪುತ್ತೂರು ಜನತೆಗೆ ದಶಕಗಳ ಕನಸು

ರೈಲು ಸಂಚಾರ ಇರುವ ಸಂದರ್ಭದಲ್ಲಿ ಈ ರಸ್ತೆಯ ಮಧ್ಯೆ ಇರುವ ರೈಲ್ವೇ ಗೇಟನ್ನು ಮುಚ್ಚಲಾಗುತ್ತಿದ್ದು, ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕಿಲೋಮೀಟರ್ ಉದ್ದ , ಗಂಟೆಗಟ್ಟಲೆ ಗೇಟು ತೆರೆಯಲು ಕಾಯಬೇಕಾದ ಸ್ಥಿತಿಯಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಮಾರುಕಟ್ಟೆಯಲ್ಲಿ ರೈತರು ಹೆಚ್ಚಿನ ವ್ಯವಹಾರಗಳನ್ನು ಆರಂಭಿಸಿದ ಹಿನ್ನಲೆಯಲ್ಲಿ ಈ ರಸ್ತೆಯನ್ನು ಅವಲಂಭಿಸುವವರ ಸಂಖ್ಯೆಯೂ ಹೆಚ್ಚಾಗಲಾರಂಭಿಸಿದೆ. ಈ ಹಿನ್ನಲೆಯಲ್ಲಿ ಈ ರಸ್ತೆಗೆ ರೈಲ್ವೇ ಅಂಡರ್ ಪಾಸ್ ನಿರ್ಮಿಸುವ ಮೂಲಕ ವಾಹನಗಳ ನಿರಂತರವಾಗಿ ಓಡಾಡುವಂತಾಗಬೇಕೆಂದು ಪುತ್ತೂರಿನ ಜನತೆ ಕೇಂದ್ರ ರೈಲ್ವೇ ಸಚಿವರಿಗೆ, ಅಧಿಕಾರಿಗಳಿಗೆ ನೀಡಿದ ಮನವಿಗಳಿಗೆ ಲೆಕ್ಕವೇ ಇಲ್ಲದಾಗಿದೆ.

ಆದರೆ ಇದೀಗ ಕೇಂದ್ರ ರೈಲ್ವೇ ಸಚಿವರು ಈ ಮನವಿಗೆ ಸ್ಪಂದಿಸಿದ್ದು, ಈ ರಸ್ತೆಗೆ ಅಂಡರ್ ಪಾಸ್ ನಿರ್ಮಿಸಲು ಅನುದಾನವನ್ನು ಕಾಯ್ದಿರಿಸಲಾಗಿದೆ. ಸುಮಾರು 9.56 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಅಂಡರ್ ಪಾಸ್ ಕಾಮಗಾರಿ ನಡೆಯಲಿದ್ದು, ಈಗಾಗಲೇ ಕಾಮಗಾರಿಗೆ ಟೆಂಡರ್ ಕೂಡಾ ಕರೆಯಲಾಗಿದ್ದು, ಸದ್ಯದಲ್ಲೇ ಇದರ ಕಾಮಗಾರಿಯೂ ಆರಂಭಗೊಳ್ಳಲಿದೆ. ರೈಲ್ವೇ ಇಲಾಖೆ ಕೆಲಸವನ್ನು ನಿರ್ವಹಿಸುವ ಪರಿಣತಿಹೊಂದಿರುವ ಗುತ್ತಿಗೆದಾರರು ಈ ಅಂಡರ್ ಪಾಸ್ ಕಾಮಗಾರಿಯನ್ನು ನಡೆಸಲಿದ್ದು, 4 ತಿಂಗಳ ಕಾಲ ಮಿತಿಯೊಳಗೆ ಕಾಮಗಾರಿಯನ್ನು ಮುಗಿಸುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಪುತ್ತೂರು ಶಾಸಕ‌ ಸಂಜೀವ ಮಠಂದೂರು.

9.56 ಕೋಟಿ ರೂಪಾಯಿ ವೆಚ್ಚದಲ್ಲಿ  ಅಂಡರ್ ಪಾಸ್ ಕಾಮಗಾರಿ

ಕೇಂದ್ರ ರೈಲ್ವೇ ಇಲಾಖೆಯ ಜೊತೆಗೆ ರಾಜ್ಯ ಸರಕಾರ, ಎ.ಪಿ.ಎಂ.ಸಿ ಕೂಡಾ ಈ ಅಂಡರ್ ಪಾಸ್ ಗೆ ಶೇಕಡಾ 50 ಭಾಗ ವೆಚ್ಚವನ್ನು ಭರಿಸಲಿದೆ. ಸರಿ ಸುಮಾರು 17 ವರ್ಷಗಳಿಂದ ಈ ರಸ್ತೆಗೆ ಅಂಡರ್ ಪಾಸ್ ನಿರ್ಮಿಸಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಹಲವು ರೀತಿಯ ಹೋರಾಟಗಳನ್ನು ಮಾಡಿದ್ದಾರೆ. ಕೃಷಿಕರಿಗೆ ಸೇರಿದಂತೆ ಎಲ್ಲಾ ಸ್ತರದ ಜನರಿಗೂ ಅತೀ ಉಪಯುಕ್ತವಾದ ಈ ರಸ್ತೆಗೆ ಇದೀಗ ಅಂಡರ್ ಪಾಸ್ ನಿರ್ಮಾಣವಾಗುತ್ತಿರುವುದು ಸ್ಥಳೀಯರಿಗೆ ಖುಷಿ ನೀಡಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತಲೋಕೇಶ್ ಬನ್ನೂರು.

ಇದನ್ನೂ ಓದಿ: Uttara Kannada Tourism: ನೀವು ನೋಡಿದ್ದೀರಾ ಭೀಮನ ಬುಗುರಿ? ನೋಡ ಬನ್ನಿ ಉತ್ತರ ಕನ್ನಡಕ್ಕೆ

ಮುಖ್ಯವಾಗಿ ಪುತ್ತೂರು ಅಗ್ನಿ ಶಾಮಕದಳದ ವಾಹನಗಳು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಭವಿಸುವ ದುರಂತಗಳಿಗೆ ತೆರಳುವ ಸಂದರ್ಭದಲ್ಲಿ ಹೆಚ್ಚಾಗಿ ಹತ್ತಿರದ ಈ ರಸ್ತೆಯನ್ನೇ ಬಳಸುತ್ತಾರೆ. ಆದರೆ ಹಲವು ಸಂದರ್ಭದಲ್ಲಿ ರೈಲ್ವೇ ಗೇಟ್ ಬಂದ್ ಆಗಿರುವ ಕಾರಣ ಅವಘಡ ನಡೆದ ಸ್ಥಳಕ್ಕೆ ಸೂಕ್ತ ಸಮಯದಲ್ಲಿ ತಲುಪಲಾರದೆ ಇದ್ದ ನಿದರ್ಶನಗಳು ಸಾಕಷ್ಠಿವೆ. ತುರ್ತು ವಾಹನಗಳ ಸಂಚಾರಕ್ಕೂ ಇದು ಅತ್ಯಂತ ಪ್ರಮುಖ ರಸ್ತೆಯಾಗಿದ್ದು, ಕಾಮಗಾರಿ ಆದಷ್ಟು ಬೇಗ ಆರಂಭಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತಗೊಳ್ಳಬೇಕಿದೆ.
Published by:Pavana HS
First published: