ಬೆಂಕಿ ಬೀಳದಂತೆ ಬಂಡೀಪುರದಲ್ಲಿ 2828 ಕಿ.ಮೀ ಬೆಂಕಿರೇಖೆ ನಿರ್ಮಾಣ: ವಾಯುಪಡೆ ಹೆಲಿಕಾಪ್ಟರ್ ಬಳಕೆಗೂ ಚಿಂತನೆ

ಬಂಡೀಪುರದ ನಡುವೆ ಹಾದು ಹೋಗುವ ರಸ್ತೆಗಳು ಅರಣ್ಯದಲ್ಲಿನ ಸಫಾರಿ ಮಾರ್ಗ, ಗೇಮ್ ರಸ್ತೆಗಳು ಸೇರಿದಂತೆ  ಈ ಬಾರಿ 2828 ಕಿಲೋಮೀಟರ್ ಗು ಹೆಚ್ಚು ಉದ್ದ ಬೆಂಕಿ ರೇಖೆ ನಿರ್ಮಿಸಲಾಗಿದೆ.

ಬಂಡೀಪುರದ ನಡುವೆ ಹಾದು ಹೋಗುವ ರಸ್ತೆಗಳು ಅರಣ್ಯದಲ್ಲಿನ ಸಫಾರಿ ಮಾರ್ಗ, ಗೇಮ್ ರಸ್ತೆಗಳು ಸೇರಿದಂತೆ  ಈ ಬಾರಿ 2828 ಕಿಲೋಮೀಟರ್ ಗು ಹೆಚ್ಚು ಉದ್ದ ಬೆಂಕಿ ರೇಖೆ ನಿರ್ಮಿಸಲಾಗಿದೆ.

ಬಂಡೀಪುರದ ನಡುವೆ ಹಾದು ಹೋಗುವ ರಸ್ತೆಗಳು ಅರಣ್ಯದಲ್ಲಿನ ಸಫಾರಿ ಮಾರ್ಗ, ಗೇಮ್ ರಸ್ತೆಗಳು ಸೇರಿದಂತೆ  ಈ ಬಾರಿ 2828 ಕಿಲೋಮೀಟರ್ ಗು ಹೆಚ್ಚು ಉದ್ದ ಬೆಂಕಿ ರೇಖೆ ನಿರ್ಮಿಸಲಾಗಿದೆ.

  • Share this:
ಚಾಮರಾಜನಗರ (ಜ. 6) ಕಳೆದ ಎರಡು  ವರ್ಷಗಳ ಹಿಂದೆ  ಹೊತ್ತಿ ಉರಿದಿದ್ದ ಬಂಡೀಪುರ ಹುಲಿರಕ್ಷಿತಾರಣ್ಯ ದಲ್ಲಿ ಈ ವರ್ಷ ಭಾರೀ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಕಿ  ನಿಯಂತ್ರಣಕ್ಕೆ ಈ ಬಾರಿ ಅರಣ್ಯ ಇಲಾಖೆ ಬೇಸಿಗೆಗು ಮುನ್ನವೇ ಬೆಂಕಿ ರೇಖೆ ನಿರ್ಮಾಣ ಮಾಡಿದೆ.  ಇದಲ್ಲದೆ ಅತಿ ಅವಶ್ಯಕತೆ ಬಿದ್ದಲ್ಲಿ ವಾಯುಪಡೆ ಹೆಲೆಕ್ಯಾಪ್ಟರ್ ಗಳ ಬಳಕೆಗು ಅರಣ್ಯ ಇಲಾಖೆ ಕ್ರಮ ವಹಿಸಿದೆ. ಜಿಲ್ಲೆಯ ಬಂಡೀಪುರ ರಾಜ್ಯದಲ್ಲಿಯೇ ಅತೀ  ಹೆಚ್ಚು ಹುಲಿಗಳನ್ನ ಹೊಂದಿರುವ ತಾಣ. ಹುಲಿಯಷ್ಟೆ ಅಲ್ಲದೆ ಆನೆ ಚಿರತೆ, ಕರಡಿ ಕಾಡೆಮ್ಮೆ, ಜಿಂಕೆ ಸೇರೀದಂತೆ ಅಸಂಖ್ಯಾತ  ಪ್ರಾಣಿ ಪಕ್ಷಿಗಳನ್ನು ಹೊಂದಿರುವ ಅಭಯಾರಣ್ಯ. ಕಳೆದ  ಎರಡು ವರ್ಷಗಳ ಹಿಂದೆ  ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ  4 ಸಾವಿರ ಹೆಕ್ಟೇರ್ ಗು ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಅಮೂಲ್ಯ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗಿತ್ತು. ವ್ಯಾಪಕವಾಗಿ ಹಬ್ಬಿದ ಬೆಂಕಿಯನ್ನು  ನಂದಿಸಲು ಅರಣ್ಯ ಇಲಾಖೆ ಹರಸಾಹಸವನ್ನೆ ನಡೆಸಿತ್ತು. ದುರ್ಗಮ ಅರಣ್ಯದಲ್ಲಿ  ವಾಯುಪಡೆ ಹೆಲೆಕ್ಯಾಪ್ಟರ್ ಗಳ ಮೂಲಕ ಬೆಂಕಿ ನಂದಿಸಲಾಗಿತ್ತು 

ಹಾಗಾಗಿ ಕಳೆದ ವರ್ಷ  ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು  ಕೈಗೊಳ್ಳುವ ಮೂಲಕ ಯಾವುದೇ ಕಡೆ ಬೆಂಕಿ ಬೀಳದಂತೆ ಕ್ರಮ ವಹಿಸಲಾಗಿತ್ತು. ಅದೇ ರೀತಿ  ಈ ವರ್ಷವೂ ಸಹ ಝೀರೋ ಫೈರ್  ಇಯರ್ ಮಾಡಲು  ಬಂಡೀಪುರ ಅರಣ್ಯಾಧಿಕಾರಿಗಳು ಶ್ರಮಿಸುತ್ತಿದ್ದಾರೆ
ಬಂಡೀಪುರದ ನಡುವೆ ಹಾದು ಹೋಗುವ ರಸ್ತೆಗಳು ಅರಣ್ಯದಲ್ಲಿನ ಸಫಾರಿ ಮಾರ್ಗ, ಗೇಮ್ ರಸ್ತೆಗಳು ಸೇರಿದಂತೆ  ಈ ಬಾರಿ 2828 ಕಿಲೋಮೀಟರ್ ಗು ಹೆಚ್ಚು ಉದ್ದ ಬೆಂಕಿ ರೇಖೆ ನಿರ್ಮಿಸಲಾಗಿದೆ. ಇಕ್ಕೆಲಗಳಲ್ಲಿ 10 ಮೀಟರ್ ಅಗಲದಲ್ಲಿ ಬೆಳೆದಿರುವ ಸಣ್ಣಪುಟ್ಟ ಗಿಡಗಂಟಿಗಳು, ಹುಲ್ಲಿಗೆ ಬೆಂಕಿ ಹಚ್ಚಿ ಸುಡಲಾಗಿದೆ. ಹೀಗೆ ಮಾಡುವುದರಿಂದ ಬೆಂಕಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಬ್ಬವುದು ತಪ್ಪಲಿದೆ

ಅರಣ್ಯ ಸಿಬ್ಬಂದಿ ಹೋಗಲಾಗದ ದುರ್ಗಮ ಅರಣ್ಯದಲ್ಲಿ ಬೆಂಕಿ ಬಿದ್ದರೆ  ವಾಯುಪಡೆ ಹೆಲಿಕಾಪ್ಟರ್ ಗಳ ಸಹಾಯ ಪಡೆಯಲು ಚಿಂತನೆ ನಡೆಸಲಾಗಿದೆ ಈ ಬಗ್ಗೆ  ಸೇನಾ ತರಬೇತಿ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು  ಸರ್ಕಾರದ ಮಟ್ಟದಲ್ಲಿ  ಮಾತುಕತೆಯಾಗಬೇಕಿದೆ ಅವಶ್ಯಕತೆ ಬಿದ್ದಲ್ಲಿ  ಹೆಲಿಕಾಪ್ಟರ್ ಗಳ ಮೂಲಕ ಕಾರ್ಯಚರಣೆ ಮಾಡಲು ವಾಯುಪಡೆ ಅಧಿಕಾರಿಗಳು ಸಹಕರಿಸುವ ಭರವಸೆ ಇದೆ ಎಂದು  ಬಂಡೀಪುರ ಅರಣ್ಯರಕ್ಷಣಾಧಿಕಾರಿ ಹಾಗು ಹುಲಿಯೋಜನೆ ನಿರ್ದೇಶಕ ನಟೇಶ್  ನ್ಯೂಸ್ 18 ಗೆ  ತಿಳಿಸಿದ್ದಾರೆ

ಬಂಡೀಪುರದ ಮದ್ಯೆ ತಮಿಳುನಾಡಿನ ಊಟಿಗೆ  ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ 67, ಕೇರಳದ ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ರ ಇಕ್ಕೆಲಗಳಲ್ಲಿ ಟ್ಯಾಂಕರ್ ಗಳ ಮೂಲಕ ವಾಟರ್ ಸ್ಪ್ರೇ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ರಸ್ತೆ ಬದಿಗಳಲ್ಲಿ ಬೇಗ ಹಸಿರು ಚಿಗರಲಿದೆ.  ವಾಹನಗಳಲ್ಲಿ ಪಯಣಿಸುವವರು ಒಂದು ವೇಳೆ ಬೀಡಿ ಸೇದಿ ಆಕಸ್ಮಿಕವಾಗಿ ರಸ್ತೆ ಬದಿ ಬೀಸಾಡಿದರೂ  ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ.

ಇದನ್ನು ಓದಿ: ಇದ್ದೂ ಇಲ್ಲದಂತೆ ಇರುವ ಸಿರವಾರದ ಆಸ್ಪತ್ರೆ; ಸಚಿವರಿಂದ ಉದ್ಘಾಟನೆಗಾಗಿ ಎರಡು ವರ್ಷದಿಂದ ಕಾದು ಕುಳಿತ ಕಟ್ಟಡಗಳು

ಇಷ್ಟೇ ಅಲ್ಲದೆ,  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾಲಿ ಇರುವ  ಒಂದು ಸಾವಿರ ಅರಣ್ಯ ಸಿಬ್ಬಂದಿ ಜೊತೆಗೆ ಬೆಂಕಿ ನಿಯಂತ್ರಣಕ್ಕೆ  435 ಫೈರ್ ವಾಚರ್ ಗಳನ್ನು ನಿಯೋಜಿಸಲಾಗಿದೆ.

ಒಟ್ಟಾರೆ ಬೆಂಕಿ ಬಿದ್ದಾಗ ಕ್ರಮ ಕೈಗೊಳ್ಳುವ ಬದಲು ಮೊದಲೇ ಸಮರೋಪಾದಿಯಲ್ಲಿ  ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಯಾರದ್ದೋ ಮೇಲಿನ ದ್ವೇಷ ಮತ್ತು ಸ್ವಾರ್ಥಕ್ಕಾಗಿ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕದೇ ಇರಲಿ, ಅಮೂಲ್ಯ ಅರಣ್ಯ ಸಂಪತ್ತು ನಾಶವಾಗದಿರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

 (ವರದಿ: ಎಸ್.ಎಂ.ನಂದೀಶ್ )
Published by:Seema R
First published: