ರಾಯಚೂರಿನಲ್ಲಿ ನಿರ್ಮಾಣ ಹಂತದ ಜಿಲ್ಲಾಡಳಿತ ಭವನ‌ ಸ್ಥಳಾಂತರ; ರಾಜಕೀಯ ಮೇಲಾಟ

ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ಮಾಡಿ ಸ್ಥಳ ನಿಗದಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. 11 ಕೋಟಿ ರೂಪಾಯಿ ಖರ್ಚು ಮಾಡಿರುವ ಭವನಕ್ಕೆ ಗುತ್ತಿಗೆದಾರರಿಗೆ ಈಗ 3 ಕೋಟಿ ರೂಪಾಯಿ ಹಣ ಪಾವತಿಸಲಾಗಿದೆ.

news18-kannada
Updated:September 25, 2020, 11:30 AM IST
ರಾಯಚೂರಿನಲ್ಲಿ ನಿರ್ಮಾಣ ಹಂತದ ಜಿಲ್ಲಾಡಳಿತ ಭವನ‌ ಸ್ಥಳಾಂತರ; ರಾಜಕೀಯ ಮೇಲಾಟ
ನಿರ್ಮಾಣ ಹಂತದ ಕಟ್ಟಡ
  • Share this:
ರಾಯಚೂರು(ಸೆ.25): ಎಲ್ಲಾ ರಂಗದಲ್ಲಿಯೂ ತೀರಾ ಹಿಂದುಳಿದಿರುವ ರಾಯಚೂರು ಜಿಲ್ಲೆಯಲ್ಲಿ ಅಭಿವೃದ್ದಿಯಲ್ಲಿಯೂ ಹಿಂದುಳಿದಿದೆ. ಇಲ್ಲಿ ರಾಜಕೀಯ ಮೇಲಾಟಕ್ಕಾಗಿ ಜಿಲ್ಲೆಯ ಅಭಿವೃದ್ದಿ ಹಿನ್ನಡೆಯಾಗಿದೆ ಎಂಬ ಆರೋಪವಿದೆ. ಇದಕ್ಕೆ ರಾಯಚೂರು ಜಿಲ್ಲಾಡಳಿತ ಭವನವು ಬಲಿಯಾಗುತ್ತಿದೆ. ಇಂದಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲವೇ ಇಲಾಖೆಯ ಕಚೇರಿಗಳಿವೆ. ಬಹುತೇಕ ಕಚೇರಿಗಳು ಬಾಡಿಗೆಯಲ್ಲಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ರಾಯಚೂರಿಗೆ 56 ಕೋಟಿ ರೂಪಾಯಿಯಲ್ಲಿ ನೂತನ ಜಿಲ್ಲಾಡಳಿತ ಭವನ ನಿರ್ಮಿಸಲು ಅಡಿಗಲ್ಲು ಹಾಕಲಾಗಿದೆ. ಜೊತೆಗೆ ಕರ್ನಾಟಕ ಗೃಹ ಮಂಡಳಿಗೆ ಭವನ ನಿರ್ಮಿಸಲು ನೀಡಲಾಗಿದೆ.  ಈ ಹಿನ್ನಲೆಯಲ್ಲಿ ರಾಯಚೂರು ನಗರದಿಂದ ಸ್ವಲ್ಪ ದೂರದ ಏಕ್ಲಾಸಪುರ ಬಳಿಯಲ್ಲಿ ಜಿಲ್ಲಾಡಳಿತ ಭವನದ ನಿರ್ಮಾಣ ಕಾರ್ಯ ನಡೆದಿದೆ. ಈಗಾಗಲೇ 11 ಕೋಟಿ ರೂಪಾಯಿ ಖರ್ಚು ಮಾಡಿ ಕಾಮಗಾರಿ ಮುಂದುವರಿಸುತ್ತಿರುವಾಗ ಈಗಿನ ಆಡಳಿತ ಪಕ್ಷದವರು ಜಿಲ್ಲಾಡಳಿತ ಭವನದ ಸ್ಥಳ ಬದಲಾವಣೆಗೆ ಸಿದ್ದತೆ ನಡೆಸಿದ್ದಾರೆ.

ಇದು ನಗರದಿಂದ ದೂರವಾಗುತ್ತಿದೆ, ಅದಕ್ಕಾಗಿ ಬೇರೆಡೆ ಜಿಲ್ಲಾಡಳಿತ ಭವನ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ಮಾಡಿ ಸ್ಥಳ ನಿಗದಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. 11 ಕೋಟಿ ರೂಪಾಯಿ ಖರ್ಚು ಮಾಡಿರುವ ಭವನಕ್ಕೆ ಗುತ್ತಿಗೆದಾರರಿಗೆ ಈಗ 3 ಕೋಟಿ ರೂಪಾಯಿ ಹಣ ಪಾವತಿಸಲಾಗಿದೆ. ಉಳಿದ 8 ಕೋಟಿ ರೂಪಾಯಿ ಬಾಕಿ ನೀಡಬೇಕಾಗಿದೆ. ಈ ಮಧ್ಯೆ ಜಿಲ್ಲಾಡಳಿತ ಭವನ ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

Coronavirus India Updates: ಭಾರತದಲ್ಲಿ 58 ಲಕ್ಷ ದಾಟಿದ ಕೊರೋನಾ‌ ಸೋಂಕಿತರ ಸಂಖ್ಯೆ

ನಿರ್ಮಾಣ ಹಂತದ ಭವನ ಕಟ್ಟಡ ಸ್ಥಗಿತಗೊಳಿಸಿ ಬೇರೆಡೆ ಜಿಲ್ಲಾಡಳಿತ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ನೇರವಾಗಿ, ಆಡಳಿತ ಪಕ್ಷದ ಶಾಸಕರು, ಅದರಲ್ಲಿಯೂ ನಗರ ಶಾಸಕ ಶಿವರಾಜ ಪಾಟೀಲ ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ಜಿಲ್ಲಾಡಳಿತ ಭವನ ಸ್ಥಳಾಂತರಿಸಲು ಹೊರಟಿದ್ದಾರೆ. ಈಗಿರುವ ಸ್ಥಳದಲ್ಲಿಯೇ ಭವನ ನಿರ್ಮಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

217ರಲ್ಲಿ ಜಿಲ್ಲಾಡಳಿತ ಭವನ ಕಾಮಗಾರಿ ಆರಂಭಿಸುವಾಗಲು ಅಂದಿನ ಕಾಂಗ್ರೆಸ್ ಮುಖಂಡರ ಹಿತಾಶಕ್ತಿಗಾಗಿ ಎಕ್ಲಾಸಪುರ ಬಳಿ ಜಿಲ್ಲಾಡಳಿತ ಭವನ ನಿರ್ಮಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಈಗಿರುವ ಜಿಲ್ಲಾಧಿಕಾರಿ ಕಟ್ಟಡವು ಪ್ರಾಚ್ಯ ವಸ್ತುಗಳ ಹಳೆಯ ಕಟ್ಟಡವಾಗಿದೆ. ಹಾಗೆಯೇ ಉಳಿಸಿಕೊಂಡು ಆವರಣದಲ್ಲಿರುವ ಸುತ್ತಲು ಇರುವ ಜಾಗ ಬಳಸಿಕೊಂಡು ನೂತನ ಕಟ್ಟಡ ನಿರ್ಮಿಸಬೇಕು. ಅಥವಾ ಯರಮರಸ್ ಕಡೆಯೂ ಜಾಗ ನೋಡಿಕೊಂಡು ಅಲ್ಲಿ ನೂತನ ಜಿಲ್ಲಾಡಳಿತ ಭವನ ನಿರ್ಮಿಸಬೇಕೆಂಬ ಚಿಂತನೆ ಆರಂಭವಾಗಿದೆ. ಆದರೆ ನಿರ್ಮಾಣ ಹಂತದ ಕಟ್ಟಡ ಸ್ಥಳ ಬದಲಾವಣೆಯ ಬಗ್ಗೆ ಈಗ ಜಿಜ್ಞಾಸೆ ಆರಂಭವಾಗಿದೆ.
Published by: Latha CG
First published: September 25, 2020, 11:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading