• Home
  • »
  • News
  • »
  • state
  • »
  • Police Letter: ಹುಡುಗಿ ನೋಡೋದಕ್ಕೂ ಕಾನ್ಸ್‌ಟೇಬಲ್‌ಗೆ ಸಿಗ್ತಿಲ್ಲ ರಜೆ! ಬ್ರಹ್ಮಚಾರಿ ಹನುಮಂತಪ್ಪನಿಂದ ಹಿರಿಯ ಅಧಿಕಾರಿಗೆ ಪತ್ರ!

Police Letter: ಹುಡುಗಿ ನೋಡೋದಕ್ಕೂ ಕಾನ್ಸ್‌ಟೇಬಲ್‌ಗೆ ಸಿಗ್ತಿಲ್ಲ ರಜೆ! ಬ್ರಹ್ಮಚಾರಿ ಹನುಮಂತಪ್ಪನಿಂದ ಹಿರಿಯ ಅಧಿಕಾರಿಗೆ ಪತ್ರ!

ಪತ್ರ ಬರೆದ ಪೊಲೀಸ್ ಪೇದೆ

ಪತ್ರ ಬರೆದ ಪೊಲೀಸ್ ಪೇದೆ

ಹುಡುಗಿ ಮನೆಯವರು ಹುಡುಗನ ಮನೆಗೆ ಬರಲು ನಿರ್ಧರಿಸಿದ್ದಾರೆ. ಆದರೆ ಕಾನ್ಸ್‌ಟೇಬಲ್ ಹನುಮಂತಪ್ಪಗೆ ಕನಿಷ್ಠ ವಾರದ ರಜೆಯೂ ಲಭ್ಯವಾಗಿಲ್ಲ. ಇದರಿಂದ ಕಂಗೆಟ್ಟ ಹನುಮಂತಪ್ಪ ನೇರವಾಗಿ ಜಿಲ್ಲಾ ಪೊಲೀಸ್ ನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ

  • News18 Kannada
  • Last Updated :
  • Karnataka, India
  • Share this:

ದಾವಣಗೆರೆ (ನ.13): ಪೊಲೀಸರು (Police) ದೇಶದಲ್ಲಿ ಕಾನೂನು ಸುವ್ಯವಸ್ಥೆ (Law And Order) ಕಾಪಾಡುವ ದೃಷ್ಟಿಯಲ್ಲಿ ಕೆಲಸ ಮಾಡುತ್ತಾರೆ. ಸದಾ ಒತ್ತಡದಲ್ಲಿರುವ ಪೊಲೀಸರು ಅನೇಕ ಬಾರಿ ಮನೆಗೆ ಹೋಗಲು ಸಮಯವಿಲ್ಲದಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ತನಿಖೆ, ವಿಐಪಿ ಬಂದೋಬಸ್ತ್​ ಅಂದ್ರೆ ಪೊಲೀಸರಿಗೆ ರಜೆ (Leave) ಇರಲಿ ವಾರದ ರಜೆ ಕೂಡ ಸಿಗೋದಿಲ್ಲ. ಮನೆ ಮಂದಿಯ ಜತೆಗೂ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ದೂರದ ಊರುಗಳಿಂದ ಬಂದು ನಗರದಲ್ಲಿ ಕೆಲಸ ಮಾಡುವ ಪೊಲೀಸರ ಕಥೆ ಹೇಳತೀರದು. ದಾವಣಗೆರೆ (Davanagere) ಪೊಲೀಸರೊಬ್ಬರು ವಾರದ ರಜೆಗಾಗಿ ಪೊಲೀಸ್ ನಿರೀಕ್ಷಕ ಸಿ.ಬಿ ರಿಷ್ಯಂತ್ ಅವರಿಗೆ ಪತ್ರ ಬರೆದಿದ್ದಾರೆ.


ಹುಡುಗಿ ಮನೆಯವರು ಬರ್ತಾರೆ ವಾರದ ರಜೆ ಕೊಡಿ


ದಾವಣಗೆರೆಯ ಪೊಲೀಸರೊಬ್ಬರಿಗೆ ವಾರದ ರಜೆಯೂ ಸಿಗದೆ ಚಿಂತೆಗೀಡಾಗಿದ್ದಾರೆ. ಜಿಲ್ಲೆಯ ಹನುಮಂತಪ್ಪ ನೀಲಗುಂದ ಎಂಬವರು ರಜೆಗಾಗಿ ಪತ್ರ ಬರೆದಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್  ಹನುಮಂತಪ್ಪ ನೀಲಗುಂದ ಅವರಿಗೆ ಮನೆಯಲ್ಲಿ ಮದುವೆ ಮಾಡಲು ಮುಂದಾಗಿದ್ದಾರೆ. ಹುಡುಗಿವೊಬ್ಬರನ್ನು ನೋಡಿದ್ದಾರೆ. ಹೀಗಾಗಿ ಹುಡುಗಿ ಮನೆಯವರು ಹುಡುಗನ ಮನೆಗೆ ಬರಲು ನಿರ್ಧರಿಸಿದ್ದಾರೆ. ಈ ವೇಳೆ ಕಾನ್ಸ್‌ಟೇಬಲ್‌ಗೆ ಊರಿಗೆ ತೆರಳಬೇಕಾಗಿದೆ. ಆದರೆ ಕಾನ್ಸ್‌ಟೇಬಲ್ ಹನುಮಂತಪ್ಪಗೆ ಕನಿಷ್ಠ ವಾರದ ರಜೆಯೂ ಲಭ್ಯವಾಗಿಲ್ಲ. ಇದರಿಂದ ಕಂಗೆಟ್ಟ ಹನುಮಂತಪ್ಪ ನೇರವಾಗಿ ಜಿಲ್ಲಾ ಪೊಲೀಸ್ ನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ.


constable wrote a letter to the superintendent of police seeking leave pvn
ಪತ್ರ ಬರೆದ ಪೊಲೀಸ್ ಪೇದೆ


ಪೊಲೀಸ್​ ಪೇದೆ ಬರೆದ ಪತ್ರದಲ್ಲೇನಿದೆ?


ಮಾನ್ಯರೇ, ನನಗೆ ಒಂದು ದಿನದ ವಾರದ ರಜೆ ಕೋರಿ ಮನವಿ ಪತ್ರವನ್ನು ಬರೆಯುತ್ತಿದ್ದೇನೆ. ನನ್ನ ಮದುವೆಯಾಗಲು ಇಚ್ಛಿಸುವ ಹುಡುಗಿ ಮನೆಯವರು ನನ್ನ ಮನೆಗೆ ಬರುವ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ತಾವುಗಳು 13-11-22ರಂದು ಒಂದು ದಿನದ ವಾರದ ರಜೆಯನ್ನು ಮಂಜೂರು ಮಾಡಬೇಕೆಂದು ಕೋರುತ್ತಿದ್ದೇನೆ ಎಂದು ಹನುಮಂತಪ್ಪ ನೀಲಗುಂದ ಪತ್ರ ಬರೆದಿದ್ದಾರೆ.


ದಾವಣಗೆರೆ ಪೊಲೀಸ್ ನಿರೀಕ್ಷಕರಿಗೆ ಈ ಪತ್ರ ತಲುಪುತ್ತಿದ್ದಂತೆ ರಜೆ ನೀಡಿದ್ದಾರೆ. ಇದಲ್ಲದೆ, ನೀವು ಮದುವೆಯಾಗಲು ಇಚ್ಛಿಸಿರುವಹುಡುಗಿ ಒಪ್ಪಿಕೊಂಡು, ಶೀಘ್ರದಲ್ಲಿ ನಿಮ್ಮನ್ನು ಮದುವೆ ಆಗಲಿ ಎಂದು ಪೊಲೀಸ್ ನಿರೀಕ್ಷಕ ಸಿ.ಬಿ.ರಿಷ್ಯಂತ್ ಐಪಿಎಸ್ ಶುಭಹಾರೈಸಿದ್ದಾರೆ.


ರಜೆ ಕೊಡಿ ಎಂದು ಹೊಸ ಮದುವೆ ಗಂಡು ಪತ್ರ


ಕೆಲ ತಿಂಗಳ ಹಿಂದೆ ಹೊಸದಾಗಿ ಮದುವೆಯಾದ ಪೇದೆ ಕೂಡ ರಜೆಗಾಗಿ ಪತ್ರ ಬರೆದಿದ್ದರು. ನಾನು ಹೊಸದಾಗಿ ಮದುವೆ ಆಗಿದ್ದೀನಿ. ಅಲ್ಲದೇ ಹೊಸ ಹುರುಪಿನಲ್ಲಿ ಇದ್ದೀನಿ. ಹಾಗಾಗಿ ನನಗೆ 10 ದಿನ ಪರಿವರ್ತಿತ ರಜೆ ಅಥವಾ ಗಳಿಕೆ ರಜೆ ನೀಡಿ ಎಂದು ಪೇದೆಯೊಬ್ಬರು ವಿನೂತನವಾಗಿ ರಜೆ ಪತ್ರವನ್ನು ಬರೆದಿದ್ದಾರೆ. ಪೇದೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಇದನ್ನೂ ಓದಿ: Assembly Election: ಚುನಾವಣೆ ಟಿಕೆಟ್​ ಘೋಷಣೆಗೂ ಮುನ್ನವೇ ಕುಕ್ಕರ್ ಸೀಟಿ ಸದ್ದು; ಛಬ್ಬಿ ಬೆಂಬಲಿಗರಿಂದ ಭರಪೂರ ಗಿಫ್ಟ್!


ಹೊಸ ಮದುವೆ ಗಂಡಿಗೆ ರಜೆ ನೀಡಿ


ಅಲ್ಲದೇ ಹೊಸ ಮದುವೆ ಗಂಡಿಗೆ ರಜೆ ನೀಡಿ ಎಂದು ಹಾಸ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಬೇಗೂರು ಪೊಲೀಸ್​ ಠಾಣೆ ಪೇದೆ ಮಾರುತಿ ಎಚ್​.ಬಿ. ಅವರು, ತಮ್ಮ ಇನ್​ಸ್ಪೆ​ಕ್ಟರ್​ಗೆ 10 ದಿನ ರಜೆ ಕೋರಿ ಬರೆದಿರುವ ಪತ್ರದಲ್ಲಿ ಸ್ವಲ್ಪ ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಹೊಸದಾಗಿ ಮದುವೆ ಆಗಿದ್ದೀನಿ, ಹೊಸ ಹುರುಪಿನಲ್ಲಿ ಇದ್ದೀನಿ. ನಮ್ಮ ಮನೆಯಲ್ಲಿ ದೇವರ ಪೂಜಾ ಕಾರ್ಯಕ್ರಮ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಮಾರುತಿ, ಇವೆಲ್ಲವನ್ನೂ ಪರಿಗಣಿಸಿ ಹತ್ತು ದಿನ ರಜೆ ನೀಡಬೇಕು ಎಂದು ಮನವಿ ಮಾಡಿದ್ದರು.

Published by:ಪಾವನ ಎಚ್ ಎಸ್
First published: