ಮೈಸೂರು: ಹರಿಯಾಣದ ಕರ್ನಾಲ್ನಲ್ಲಿ (Karnal) ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) - ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ 'ತಳಿ ಸಂರಕ್ಷಣೆ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಮೈಸೂರು ರೈತನಿಗೆ ಪ್ರಶಸ್ತಿ ಒಲಿದು ಬಂದಿದೆ. ಬಂಡೂರು ಕುರಿಗಳ ಸಂರಕ್ಷಣೆಗಾಗಿ ಮೈಸೂರಿನ ಯಡಹಳ್ಳಿ ಗ್ರಾಮದ ಯಶೋಧವನ ಗೋಟ್ ಫಾರ್ಮ್ನ ಮಾಲೀಕ ಯು.ಕೆ. ಶ್ರೀನಿವಾಸ್ ಆಚಾರ್ಯ (Srinivasa Acarya) ತೃತೀಯ ಬಹುಮಾನ ಪಡೆದಿದ್ದಾರೆ. ಸ್ಥಳೀಯ ಬಂಡೂರು ಕುರಿಗಳ ಸಂರಕ್ಷಣೆಗಾಗಿ ವೈಯಕ್ತಿಕ (Personal) ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿದ ಶ್ರೀನಿವಾಸ್ ಆಚಾರ್ಯ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಂಡೂರು ಕುರಿ ಮಾಂಸದ ಪ್ರಮುಖ ಬ್ರಾಂಡ್ (Brand) ಆಗಿದೆ. ಉಣ್ಣೆ ಮತ್ತು ಮಾಂಸಕ್ಕಾಗಿ ಜನಪ್ರಿಯವಾಗಿರುವ ಬಂಡೂರಿನಲ್ಲಿ ಕುಬ್ಜ ಕುರಿಗಳನ್ನು ಪ್ರತ್ಯೇಕವಾಗಿ ಸಾಕಲಾಗುತ್ತದೆ ಎಂದು ಕುರಿ ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿದರು.
50 ಎಕರೆ ಭೂಮಿಯಲ್ಲಿ ಕುರಿ ಫಾರ್ಮ್
ನಾನು ಮೈಸೂರು ಭಾಗದ ರೈತರಿಗೆ ಈ ತಳಿಯ ಕುರಿಗಳನ್ನು ವಿತರಿಸಲು 85 ತಳಿ ಪ್ರಾಣಿಗಳೊಂದಿಗೆ ಪ್ರಾರಂಭಿಸಿದೆ ಮತ್ತು ಅವುಗಳೀಗ 400ಕ್ಕೂ ಹೆಚ್ಚು ಶುದ್ಧ ಬಂಡೂರು ತಳಿಯ ಕುರಿಗಳಾಗಿವೆ. 2012ರಲ್ಲಿ 2,500 ಕುರಿಗಳಿದ್ದು, ಆಯ್ದ ತಳಿ ಮತ್ತು ತಳಿಗಳ ಉನ್ನತೀಕರಣದಿಂದಾಗಿ ಈಗ ಸುಮಾರು ನಮ್ಮಲ್ಲಿ 25,000 ಕುರಿಗಳನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು. 50 ಎಕರೆ ಸಾವಯವ ಕೃಷಿ ಭೂಮಿಯಲ್ಲಿ ಅವರು ಯಶೋಧವನ ಗೋಟ್ ಫಾರ್ಮ್ ಅನ್ನು 2012 ರಲ್ಲಿ ಪ್ರಾರಂಭಿಸಿದ್ದಾಗಿ ಆಚಾರ್ಯ ಹೇಳಿದರು.
ಕುರಿ ಸಾಕಾಣಿಕೆ ಕೃಷಿ ಲಾಭದಾಯಕವಾಗಿದೆ
“ನಾವು ಮೇಕೆಗಳು ಮತ್ತು ಇತರ ಜಾನುವಾರುಗಳ ಉತ್ತಮ ಗುಣಮಟ್ಟದ ತಳಿಗಳನ್ನು ಸಾಕುತ್ತಿದ್ದೇವೆ. ಮೇಕೆ ಹಾಲು, ತುಪ್ಪ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಭಿನ್ನಮತ? ಶೆಟ್ಟರ್, ಜೋಶಿ ಮುಸುಕಿನ ಗುದ್ದಾಟ
ಸರಿಯಾದ ವಿಧಾನ ಮತ್ತು ನಿರ್ವಹಣೆಯೊಂದಿಗೆ, ಮೇಕೆ ಸಾಕಣೆಯು ವಾಣಿಜ್ಯಿಕವಾಗಿ ಕಾರ್ಯಸಾಧ್ಯ ಮತ್ತು ಲಾಭದಾಯಕ ವ್ಯವಹಾರವಾಗಿದೆ" ಎಂದು ಕುರಿ ಸಾಕಾಣಿಕೆ ಕೃಷಿ ಬಗ್ಗೆ ಅವರು ತಿಳಿಸಿದರು
ವಿದೇಶಿಯರಿಗೂ ತರಬೇತಿ
ನೈಜೀರಿಯಾ, ಭೂತಾನ್ ಮತ್ತು ಶ್ರೀಲಂಕಾ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ 25,000 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೇಕೆ ಸಾಕಾಣಿಕೆ ಕುರಿತು ತರಬೇತಿ ನೀಡಿದ್ದೇವೆ ಎಂದು ಐಸಿಎಆರ್ ಪ್ರಶಸ್ತಿ ವಿಜೇತ ಶ್ರೀನಿವಾಸ್ ಆಚಾರ್ಯ ತಿಳಿಸಿದರು.
ರೈತರ ದಿನದಂದು ಪ್ರಶಸ್ತಿ
ಆಚಾರ್ಯ ಅವರು ಡಿಸೆಂಬರ್ 23 ರಂದು ಕಿಸಾನ್ ದಿವಸ್ನಲ್ಲಿ 15,000 ರೂಪಾಯಿ ನಗದು ಬಹುಮಾನ ಮತ್ತು ಪ್ರಮಾಣಪತ್ರದೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬಂಡೂರು ಕುರಿಗೆ ಭಾರಿ ಬೇಡಿಕೆ
ಮಂಡಿಯಲ್ಲಿ ದಟ್ಟ ಕೂದಲು, ಉದ್ದನೆಯ ಮತ್ತು ಅಗಲ ಶರೀರ, ಕುಳ್ಳನೆ ದೇಹ ಹೊಂದಿರುವ ಬಿಳಿ ಬಣ್ಣದ ಬಂಡೂರು ಕುರಿ ನೋಡಲು ಸಾಕಷ್ಟು ದಷ್ಟಪುಷ್ಟವಾಗಿರುತ್ತವೆ. ಕುರಿ ಬೆಲೆ ಕೂಡು ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಬಂಡೂರು ಈ ಕುರಿಯ ಮೂಲ.
ಬಂಡೂರು ಕುರಿಗಳ ರಕ್ಷಣೆಗೆ ಒತ್ತು
ಬಂಡೂರು ಕುರಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಶು ಸಂಗೋಪನಾ ಇಲಾಖೆ ವಿಶೇಷ ರೀತಿಯ ಮಾಂಸಕ್ಕೆ ಹೆಸರುವಾಸಿಯಾಗಿರುವ ತಳಿಯನ್ನು ಸಂರಕ್ಷಿಸಲು ಕ್ರಮಕೈಗೊಳ್ಳುತ್ತಿದೆ.
ಈ ಹಿಂದೆ ರಾಜ್ಯ ಸರ್ಕಾರವು ಪ್ರೀಮಿಯಂ ಬಂಡೂರ್ ಕುರಿ ತಳಿಗಳ ಹೆಚ್ಚಿನ ಸಂಖ್ಯೆಗಾಗಿ ವೀರ್ಯ ಬ್ಯಾಂಕ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು.
ಮಳವಳ್ಳಿಯಲ್ಲಿರುವ ಪಶುಸಂಗೋಪನಾ ಇಲಾಖೆಯ ಬಂಡೂರು ಕುರಿ ಫಾರಂನಲ್ಲಿ ಹಲವಾರು ಕುರಿಗಳಿಗೆ ಪ್ರಾಯೋಗಿಕವಾಗಿ ಕೃತಕ ಗರ್ಭಧಾರಣೆಯನ್ನು ಸಹ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ