• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi Politics: ಕಾಂಗ್ರೆಸ್​ ಪಕ್ಷಕ್ಕೆ ಖುಷಿಯಿಂದ ಬಂದ ಶೆಟ್ಟರ್​​ಗೆ ಆರಂಭಿಕ ವಿಘ್ನ

Hubballi Politics: ಕಾಂಗ್ರೆಸ್​ ಪಕ್ಷಕ್ಕೆ ಖುಷಿಯಿಂದ ಬಂದ ಶೆಟ್ಟರ್​​ಗೆ ಆರಂಭಿಕ ವಿಘ್ನ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಸವಾಲು ಹಾಕಿದ ಗದಿಗೆಪ್ಪಗೌಡ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ. ಪಂಚಮಸಾಲಿ ಸಮುದಾಯದ ಸಭೆ ಮಾಡ್ತೀನಿ. ಶೆಟ್ಟರ್ ಸೋಲಿಗೆ ರಣತಂತ್ರ ರೂಪಿಸ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

  • News18 Kannada
  • 3-MIN READ
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ: ಖುಷಿಯಿಂದ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಅವರಿಗೆ ಆರಂಭಿಕ ವಿಘ್ನ ಎದುರಾಗಿದೆ. ಶೆಟ್ಟರ್ ಅವರಿಗೆ ಲೋಕಲ್ ಬಂಡಾಯದ ಭೀತಿ ಎದುರಾಗಿದೆ. ಕಾಂಗ್ರೆಸ್ ಟಿಕೆಟ್ (Congress Ticket) ಆಕಾಂಕ್ಷಿಗಳು ಶೆಟ್ಟರ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ಪಂಚಮಸಾಲಿ ಸಮುದಾಯದ ಮುಖಂಡ (Panchamasali Leders) ಮತ್ತು ಮುಸ್ಲಿಂ ಮುಖಂಡನ (Muslim Leader) ಬಂಡಾಯ ಖುಷಿಯಿಂದ ಬಂದ ಶೆಟ್ಟರ್ ಅವರಿಗೆ ಕಹಿ ಅನುಭವ ನೀಡಿದೆ. ಶೆಟ್ಟರ್ ಅವರನ್ನು ಸೋಲಿಸ್ತೇವೆ ಎಂದು ಪಂಚಮಸಾಲಿ ಮುಖಂಡ ಚಾಲೆಂಜ್ ಹಾಕಿದ್ದಾರೆ. ದಮ್ಮು, ತಾಕತ್ ಇದ್ರೆ ಶೆಟ್ಟರ್ ಗೆದ್ದು ತೋರಿಸಲಿ ಎಂದು ಪಂಚಮಸಾಲಿ ಸಮುದಾಯದ ಮುಖಂಡ ಗಿರೀಶ್ ಗದಿಗೆಪ್ಪಗೌಡ ಓಪನ್ ಚಾಲೆಂಜ್ ಹಾಕಿದ್ದಾರೆ.


ಹೀಗೆ ಸವಾಲು ಹಾಕಿದ ಗದಿಗೆಪ್ಪಗೌಡ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ. ಪಂಚಮಸಾಲಿ ಸಮುದಾಯದ ಸಭೆ ಮಾಡ್ತೀನಿ. ಶೆಟ್ಟರ್ ಸೋಲಿಗೆ ರಣತಂತ್ರ ರೂಪಿಸ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.


ಗದಿಗೆಪ್ಪಗೌಡರಿಗೆ ಉಚ್ಛಾಟನೆ ಶಿಕ್ಷೆ


ಶೆಟ್ಟರ್ ಬೆಂಬಲಿಗರ ಕಾರುಬಾರು ನೋಡಿ ಗಿರೀಶ್ ಗದಿಗೆಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದ್ದರೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡ್ತೀವಿ ಎಂಬ ಪಿ.ವಿ.ಮೋಹನ್ ಹೇಳಿಕೆಯನ್ನು ಖಂಡಿಸಿದ್ದಾರೆ. ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ. ಅದನ್ನು ಬಿಟ್ಟು ಈಗ ಬಂದ ಶೆಟ್ಟರ್ ಅವರನ್ನು ಸಿಎಂ ಮಾಡ್ತೀವಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗದಿಗೆಪ್ಪಗೌಡರಿಗೆ ಉಚ್ಛಾಟನೆ ಶಿಕ್ಷೆ ವಿಧಿಸಲಾಗಿದೆ.


ಕಾಂಗ್ರೆಸ್​​ನಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಇದರಿಂದ ಕೋಪಗೊಂಡಿರುವ ಗದಿಗೆಪ್ಪಗೌಡ, ಶೆಟ್ಟರ್ ಸೋಲಿಸೋ ಸಂಕಲ್ಪ ಕೈಗೊಂಡಿದ್ದಾರೆ. ಗದಿಗೆಪ್ಪಗೌಡ ಪಂಚಮಸಾಲಿ ಸಮುದಾಯದ ಪ್ರಭಾವಿ ಮುಖಂಡರಾಗಿದ್ದಾರೆ.




ನಾಮಪತ್ರ ಸಲ್ಲಿಸಿರುವ ಅಲ್ತಾಫ್ ಕಿತ್ತೂರ


ಮತ್ತೊಂದೆಡೆ ಅಂಜುಮನ್ ಸಂಸ್ಥೆ ಮಾಜಿ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ನಾಮಪತ್ರ ಸಲ್ಲಿಸಿರೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಲ್ತಾಫ್, ಏಕಾಏಕಿ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಶೆಟ್ಟರ್ ಅವರಿಗೆ ಪಂಚಮಸಾಲಿ ಮತ್ತು ಮುಸ್ಲಿಂ ಸಮುದಾಯದ ಮತಗಳು ಡೈವರ್ಟ್ ಭೀತಿ ಸೃಷ್ಟಿಯಾಗಿದೆ.


ಇದನ್ನೂ ಓದಿ:  Karnataka Election: ಸಿಎಂ ರೇಸ್​ನಲ್ಲಿರೋ ಬಿಜೆಪಿ ನಾಯಕರ ಹೆಸರು ಬಿಚ್ಚಿಟ್ಟ ಸುರ್ಜೇವಾಲಾ


ಬಂಡಾಯ ಉಪಶಮನಕ್ಕೆ ಯತ್ನ


ಗಿರೀಶ್ ಗದಿಗೆಪ್ಪಗೌಡಗೆ ಪಕ್ಷದಿಂದ ಉಚ್ಛಾಟಿಸಲಾಗಿದೆ. ನಾಮಪತ್ರ ವಾಪಸ್ ಪಡೆಯದೇ ಇದ್ದಲ್ಲಿ ಅಲ್ತಾಫ್ ಕಿತ್ತೂರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಎಚ್ಚರಿಕೆ ನೀಡಿದ್ದಾರೆ. ಬಂಡಾಯ ಉಪಶಮನಕ್ಕೆ ಶೆಟ್ಟರ್ ಕಾಂಗ್ರೆಸ್ ನಾಯಕರ ಮೊರೆ ಹೋಗಿದ್ದಾರೆ.

First published: