HOME » NEWS » State » CONGRESS WORKERS ASKS MP DK SURESH WHO IS LEADER TO CHANNAPATNA CONGRESS LG

ಚನ್ನಪಟ್ಟಣ ಕಾಂಗ್ರೆಸ್​​ಗೆ ನಾಯಕ ಯಾರು? ಸಂಸದ ಡಿ.ಕೆ.ಸುರೇಶ್​​​ಗೆ ಕಾರ್ಯಕರ್ತರ ನೇರ ಪ್ರಶ್ನೆ

ಪಕ್ಷಕ್ಕೆ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ ಸಹ ನಾಯಕತ್ವದ ಕೊರತೆಯಿಂದ ಕಾರ್ಯಕರ್ತರು ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮವಹಿಸಲಾಗುತ್ತೆ. ಚನ್ನಪಟ್ಟಣದಿಂದಲೂ ಸಹ ಕಾಂಗ್ರೆಸ್‌ನ ಶಾಸಕರು ಆಯ್ಕೆಯಾಗುತ್ತಾರೆಂದು ತಿಳಿಸಿದರು.

news18-kannada
Updated:December 8, 2020, 9:15 AM IST
ಚನ್ನಪಟ್ಟಣ ಕಾಂಗ್ರೆಸ್​​ಗೆ ನಾಯಕ ಯಾರು? ಸಂಸದ ಡಿ.ಕೆ.ಸುರೇಶ್​​​ಗೆ ಕಾರ್ಯಕರ್ತರ ನೇರ ಪ್ರಶ್ನೆ
ಸಂಸದ ಡಿ ಕೆ ಸುರೇಶ್
  • Share this:
ರಾಮನಗರ(ಡಿ.08): ರಾಮನಗರ ಜಿಲ್ಲೆ ಚನ್ನಪಟ್ಟಣ ಕಾರ್ಯಕರ್ತರ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಎದುರಲ್ಲಿಯೇ ಪಕ್ಷದ ಮುಖಂಡರು ಕಿತ್ತಾಡಿಕೊಂಡಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಚನ್ನಪಟ್ಟಣ ನಗರದ ಎಲ್.ಎನ್.ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನ ಕರೆಯಲಾಗಿತ್ತು. ಈ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು. ಆದರೆ ಸಭೆ ಮುಗಿದ ಬಳಿಕ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾಚಂದ್ರು ಹಾಗೂ ಮಹಾಲಿಂಗು, ಲೋಕೇಶ್ ಎಂಬುವರು ಪರಸ್ಪರ ಬೈದಾಡಿಕೊಂಡು ಜೋರು ಜಗಳ ಮಾಡಿಕೊಂಡರು. ಹೊಂಗನೂರು ಜಿಲ್ಲಾ ಪಂಚಾಯತ್‌ನಲ್ಲಿ ನಡೆದಿರುವ ಅಕ್ರಮದ ವಿಚಾರವಾಗಿ ಜಗಳ ನಡೆದಿದೆ ಎಂದು ಕಾಂಗ್ರೆಸ್‌ನ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇನ್ನು ಸ್ಥಳದಲ್ಲಿ ಡಿ.ಕೆ.ಸುರೇಶ್ ಇದ್ದರೂ ಕೇರ್ ಮಾಡದ ಮುಖಂಡರ ಜಗಳ ಕೈಕೈಮಿಲಾಯಿಸುವ ಹಂತಕ್ಕೂ ತಲುಪಿತು. ಇನ್ನು ಸಭೆಯ ವಿಚಾರವಾಗಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಗ್ರಾಮಪಂಚಾಯತ್ ಚುನಾವಣೆಯ ಹಿನ್ನೆಲೆ ಸಭೆಯನ್ನ ಆಯೋಜನೆ ಮಾಡಿದ್ದೇವೆ. ಚನ್ನಪಟ್ಟಣದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಳ್ಳುವವರು ಯಾರು ಎಂಬ ಪ್ರಶ್ನೆಯನ್ನ ಕಾರ್ಯಕರ್ತರು ಕೇಳ್ತಿದ್ದಾರೆ. ಆದರೆ ಸಾರ್ವತ್ರಿಕ ಚುನಾವಣೆಗೆ ಇನ್ನು ಎರಡೂವರೆ ವರ್ಷ ಬಾಕಿಯಿರುವ ಕಾರಣ ಭವಿಷ್ಯದಲ್ಲಿ ನಾವು ಅದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಪಕ್ಷಕ್ಕೆ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ ಸಹ ನಾಯಕತ್ವದ ಕೊರತೆಯಿಂದ ಕಾರ್ಯಕರ್ತರು ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮವಹಿಸಲಾಗುತ್ತೆ. ಚನ್ನಪಟ್ಟಣದಿಂದಲೂ ಸಹ ಕಾಂಗ್ರೆಸ್‌ನ ಶಾಸಕರು ಆಯ್ಕೆಯಾಗುತ್ತಾರೆಂದು ತಿಳಿಸಿದರು.

Bharat Bandh: ಭಾರತ್​ ಬಂದ್​; ಬೆಂಗಳೂರಿನಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗೆ ಡಿಕೆ ಶಿವಕುಮಾರ್ ಸಾಥ್

ಚನ್ನಪಟ್ಟಣ ಕಾಂಗ್ರೆಸ್ ಕಾರ್ಯಕರ್ತರಾದ ಮತ್ತಿಕೆರೆ ಹನುಮಂತಯ್ಯ, ಅಕ್ಕೂರು ಶೇಖರ್ ಸಭೆಯಲ್ಲಿ ಮಾತನಾಡಿ ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೆಸ್ ಕಾರ್ಯಕ್ರಮಗಳು ನಡೆಯುತ್ತವೆ. ಉಳಿದ ಸಮಯದಲ್ಲಿ ಕಾರ್ಯಕರ್ತರ ಕಷ್ಟಸುಖಗಳನ್ನ ಕೇಳುವ ನಾಯಕ ಯಾರಿದ್ದಾರೆಂದು ನೇರವಾಗಿ ಪ್ರಶ್ನಿಸಿದರು. ಚನ್ನಪಟ್ಟಣದಲ್ಲಿ ಪಕ್ಷಕ್ಕೆ ಹೆಚ್ಚಿನ ಮತದಾರರಿದ್ದಾರೆ. ಆದರೆ ಪಕ್ಷಕ್ಕೆ ಬಲತುಂಬಲ ಸಮರ್ಥ ನಾಯಕನಿಲ್ಲದ ಕಾರಣ ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನರಳುತ್ತಿದ್ದಾರೆಂದು ಸಂಸದ ಡಿ.ಕೆ.ಸುರೇಶ್ ಎದುರಲ್ಲೇ ಬೇಸರ ಹೊರಹಾಕಿದರು.
Youtube Video

ಡಿ.ಕೆ.ಶಿವಕುಮಾರ್ ರವರು ಕೆ.ಪಿ.ಸಿ.ಸಿ ಅಧ್ಯಕ್ಷರಾಗಿದ್ದಾರೆ, ಅವರು ಭವಿಷ್ಯದಲ್ಲಿ ಸಿಎಂ ಆಗುವ ಸಂದರ್ಭದಲ್ಲಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಬಲ ಇಲ್ಲದಿದ್ದರೆ ರಾಜ್ಯಕ್ಕೆ ಕೆಟ್ಟ ಸಂದೇಶ ಹೋಗಲಿದೆ. ಹಾಗಾಗಿ ಮುಂದಿನ 2023 ರ ಸಾರ್ವತ್ರಿಕ ಚುನಾವಣೆ ಸಮಯಕ್ಕೆ ತಯಾರಾಗಲು ನೀವು ಕೂಡಲೇ ಈ ಕುರಿತಾಗಿ ಚಿಂತನೆ ನಡೆಸಿ. ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಸಮರ್ಥ ನಾಯಕನನ್ನ ಕರೆತನ್ನಿ ಎನ್ನುವ ಕೂಗು ಕಾಂಗ್ರೆಸ್ ಸಭೆಯಲ್ಲಿ ಹೆಚ್ಚಾಗಿ ಕೇಳಿಬಂತು.

(ವರದಿ : ಎ.ಟಿ.ವೆಂಕಟೇಶ್)
Published by: Latha CG
First published: December 8, 2020, 9:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories