DCC Bank Election: ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಕಾಂಗ್ರೆಸ್​ ತೆಕ್ಕೆಗೆ; ಬಿಜೆಪಿಗೆ ತೀವ್ರ ಮುಖಭಂಗ

ಒಂದೂ ಸ್ಥಾನ ಗಳಿಸದೆ ಜೆಡಿಎಸ್ ಗೆ ತೀವ್ರ ನಿರಾಸೆಯಾಗಿದೆ. ಕೇವಲ ಒಂದು ಮತದ ಅಂತರದಿಂದ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಸೋಲನುಭವಿಸಿದ್ದಾರೆ.

ಕಾಂಗ್ರೆಸ್

ಕಾಂಗ್ರೆಸ್

  • Share this:
ಕಲಬುರ್ಗಿ(ನ.30): ಕಲಬುರ್ಗಿ - ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜಿದ್ದಾಜಿದ್ದಿ ವೇದಿಕೆಯಾಗಿ ಮಾರ್ಪಟ್ಟಿದ್ದ ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಪ್ರತಿಷ್ಟಿತ ಕಲಬುರ್ಗಿ - ಯಾದಗಿರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಆಡಳಿತಾರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಒಂದೂ ಸ್ಥಾನ ಪಡೆಯದೆ ಜೆಡಿಎಸ್ ನಿರಾಸೆಗೆ ಗುರಿಯಾಗಿದೆ. ಕಲಬುರ್ಗಿ - ಯಾದಗಿರಿ ಡಿಸಿಸಿ ಬ್ಯಾಂಕ್​​ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಒಟ್ಟು 13 ಸ್ಥಾನಗಳ ಪೈಕಿ ಒಂಬತ್ತು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಬಿಜೆಪಿ ಪಕ್ಷ ಕೇವಲ ನಾಲ್ಕು ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಮೂವರು ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿದರೂ ಬಿಜೆಪಿ ಅಧಿಕಾರಕ್ಕೆ ಬರುವುದು ಅನುಮಾನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಮುಂಚೆಯೇ ಏಳು ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗಿತ್ತು. ಈ ಪೈಕಿ ಐದು ಸ್ಥಾನ ಕಾಂಗ್ರೆಸ್ ಹಾಗೂ ಎರಡು ಸ್ಥಾನ ಬಿಜೆಪಿ ಗೆದ್ದುಕೊಂಡಿತ್ತು. ಆರು ಸ್ಥಾನಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಆರು ಸ್ಥಾನಗಳ ಪೈಕಿ ನಾಲ್ಕು ಕಾಂಗ್ರೆಸ್ ಹಾಗೂ ಎರಡು ಬಿಜೆಪಿ ಪಾಲಾಗಿವೆ.

ಪಟ್ಟಣ ಸಹಕಾರ ಬ್ಯಾಂಕ್ ಗಳಿಂದ ಕಾಂಗ್ರೆಸ್ ನ ಸೋಮಶೇಖರ ಗೋನಾಯಕ್, ಶಹಾಪುರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಕಾಂಗ್ರೆಸ್ ನ ಗುರುನಾಥರೆಡ್ಡಿ,   ಚಿಂಚೋಳಿ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಕಾಂಗ್ರೆಸ್ ನ ಗೌತಮ್ ಪಾಟೀಲ, ಚಿತ್ತಾಪುರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಕಾಂಗ್ರೆಸ್ ನ ಬಸವರಾಜ ಪಾಟೀಲ, ಟಿಎಪಿಸಿಎಂಎಸ್ ಹಾಗೂ ಸಂಸ್ಕರಣಾ ಸಹಕಾರ ಸಂಘದಿಂದ  ಬಿಜೆಪಿಯ ಶಿವಾನಂದ ಮಾನಕರ್, ಜೇವರ್ಗಿ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಬಿಜೆಪಿಯ ನಿಂಗಣ್ಣ ದೊಡ್ಮನಿ ಆಯ್ಕೆಯಾಗಿದ್ದಾರೆ.

ವಿಚಿತ್ರವೆಂದರೆ ಆರು ಸ್ಥಾನಗಳ ಪೈಕಿ ನಾಲ್ಕು ಸದಸ್ಯರು ಕೇವಲ ಒಂದು ಮತದ ಅಂತರದಿಂದ ಗೆದ್ದಿದ್ದಾರೆ. ನಿಂಗಪ್ಪ ದೊಡ್ಮನಿ, ಗೌತಮ ಪಾಟೀಲ, ಸೋಮಶೇಖರ ಗೋನಾಯಕ್, ಶಿವಾನಂದ ಮಾನಕರ್ ಕೇವಲ ಒಂದು ಮತದ ಅಂತರದಿಂದ ಗೆದ್ದಿದ್ದಾರೆ. ಇನ್ನು ಗುರುನಾಥರೆಡ್ಡಿ ಪರ್ವತರೆಡ್ಡಿ 13 ಮತ ಹಾಗೂ ಬಸವರಾಜ ಪಾಟೀಲ ಎರಡು ಮತಗಳ ಅಂತರದಿಂದ ಗೆದ್ದಿದ್ದಾರೆ.

ಇಂದು ಗ್ರಾ.ಪಂ.ಚುನಾವಣೆಗೆ ದಿನಾಂಕ ಘೋಷಣೆ ಸಾಧ್ಯತೆ; ಬಿಜೆಪಿ ಸಂಪೂರ್ಣ ಸಿದ್ದ ಎಂದ ಕಟೀಲ್

ಈ ಹಿಂದೆ ಏಳು ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಕಲಬುರ್ಗಿ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಬಿಜೆಪಿಯ ಶರಣಬಸಪ್ಪ ಪಾಟೀಲ ಅಷ್ಟಗಾ, ಆಳಂದ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಕಾಂಗ್ರೆಸ್ ನ ಅಶೋಕ ಸಾವಳೇಶ್ವರ್, ಯಾದಗಿರಿ ತಾಲೂಕು ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಕಾಂಗ್ರೆಸ್ ನ ಸಿದ್ಧರಾಮರೆಡ್ಡಿ ಕೌಳೂರ, ಸೇಡಂ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಕಾಂಗ್ರೆಸ್ ನ ಬಿ.ನಂದಕಿಶೋರ ರೆಡ್ಡಿ ಜನಾರ್ಧನರೆಡ್ಡಿ, ಸುರಪುರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಹಾಲಿ ನಿರ್ದೇಶಕ ಕಾಂಗ್ರೆಸ್ ನ ಬಾಪುಗೌಡ ದುಂಡಪ್ಪಗೌಡ ಮತ್ತು ಅಫಜಲಪುರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಕಾಂಗ್ರೆಸ್ ನ ಮಹಾಂತಗೌಡ ಸಿದ್ಧನಗೌಡ ಪಾಟೀಲ ಹಾಗೂ ಇತರೆ ಸಹಕಾರಿ ಸಂಘಗಳ ಕ್ಷೇತ್ರದಿಂದ ಬಿಜೆಪಿಯ ಸುರೇಶ್ ಸಜ್ಜನ್ ಅವಿರೋಧವಾಗಿ ಆಯ್ಕೆಯಾಗಿದ್ದರು

.

ಒಂದೂ ಸ್ಥಾನ ಗಳಿಸದೆ ಜೆಡಿಎಸ್ ಗೆ ತೀವ್ರ ನಿರಾಸೆಯಾಗಿದೆ. ಕೇವಲ ಒಂದು ಮತದ ಅಂತರದಿಂದ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಸೋಲನುಭವಿಸಿದ್ದಾರೆ. ಅಧ್ಯಕ್ಷ ಗಾದಿ ಏರಲು ಕಾಂಗ್ರೆಸ್ ದಾರಿಯನ್ನು ಸುಲಭ ಮಾಡಿಕೊಂಡಿದೆ. ಮೊದಲ ಬಾರಿಗೆ ಅಧಿಕಾರ ಗದ್ದುಗೆ ಏರಬೇಕೆಂದು ಶತ ಪ್ರಯತ್ನ ನಡೆಸಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಸರ್ಕಾರ ಮೂವರು ನಾಮನಿರ್ದೇಶಿತ ಸದಸ್ಯರನ್ನು ಮಾಡಿದರೂ ಬಿಜೆಪಿ ಅಧಿಕಾರ ಗದ್ದುಗೆ ಏರೋದು ಕಷ್ಟ ಎಂಬಂತಾಗಿದೆ.
Published by:Latha CG
First published: