20 ವರ್ಷಗಳ ಬಳಿಕ ಆನೇಕಲ್ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಗುರುವಾರ ನಡೆದ ಚುನಾವಣೆಯಲ್ಲಿ ಸಂಸದ ಡಿ ಕೆ ಸುರೇಶ್ ಮತ್ತು ಶಾಸಕ ಬಿ ಶಿವಣ್ಣ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರಿಂದ ಪ್ರತಿಸ್ಪರ್ಧಿ ಬಿಜೆಪಿಯ ಶ್ರೀಕಾಂತ್ 10 ಮತಗಳನ್ನು ಪಡೆದರೆ, ಕೈ ಅಭ್ಯರ್ಥಿ 19 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗೆದ್ದ ಕಾಂಗ್ರೆಸ್ ಅಭ್ಯರ್ಥಿ

ಗೆದ್ದ ಕಾಂಗ್ರೆಸ್ ಅಭ್ಯರ್ಥಿ

  • Share this:
ಆನೇಕಲ್(ಅ.30): ಕಮಲದ ಭದ್ರಕೋಟೆಯಾಗಿದ್ದ ಬೆಂಗಳೂರು ಹೊರವಲಯದ ಆನೇಕಲ್ ಪುರಸಭೆ ಮೊದಲ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಕೈ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಧ್ಯಕ್ಷರಾಗಿ ಕಾಂಗ್ರೆಸ್​​ನ ಎನ್ ಎಸ್ ಪದ್ಮನಾಭ್ ಉಪಾಧ್ಯಕ್ಷರಾಗಿ ಲಲಿತ ಆಯ್ಕೆಯಾಗಿದ್ದಾರೆ. 27 ಸದಸ್ಯ ಬಲದ ಆನೇಕಲ್ ಪುರಸಭೆಯಲ್ಲಿ ಕಾಂಗ್ರೆಸ್ 17 ವಾರ್ಡ್​​​​ಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 10 ವಾರ್ಡ್​​​​ಗಳಲ್ಲಿ ಗೆಲುವು ಸಾಧಿಸಿತ್ತು. ಆದ್ರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಯ ಮೀಸಲಾತಿ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಇತ್ತೀಚೆಗೆ ಕೋರ್ಟ್ ಸಹ ಚುನಾವಣೆಗೆ ಅಸ್ತು ಎಂದಿತ್ತು. ಹಾಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಸಂಸದ ಡಿ ಕೆ ಸುರೇಶ್ ಮತ್ತು ಶಾಸಕ ಬಿ ಶಿವಣ್ಣ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರಿಂದ ಪ್ರತಿಸ್ಪರ್ಧಿ ಬಿಜೆಪಿಯ ಶ್ರೀಕಾಂತ್ 10 ಮತಗಳನ್ನು ಪಡೆದರೆ, ಕೈ ಅಭ್ಯರ್ಥಿ 19 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

ಇನ್ನೂ ಪುರಸಭೆ ಚುನಾವಣೆ ಬಳಿಕ ಮಾಧ್ಯಮಗಳೊಂದಿಗೆ ಸಂಸದ ಡಿ ಕೆ ಸುರೇಶ್ ಮಾತನಾಡಿ, ಆರ್ ಆರ್ ನಗರದಲ್ಲಿ ಬಿಜೆಪಿಗರಿಂದ ಗೂಂಡಾಗಿರಿ ಬಗ್ಗೆ ಡಿ ಕೆ ಸುರೇಶ್ ಪುನರುಚ್ಚರಿಸಿದ್ದು, ಬೆರಳೆಣಿಕೆಯಷ್ಟು ಮಂದಿ ಕಾಂಗ್ರೆಸ್ ನಾಯಕರ ಪ್ರಚಾರ ಸಭೆಗೆ ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ಆರ್ ಆರ್ ನಗರದಲ್ಲಿ ಶಾಂತಿಯುತ ವಾತವರಣ ನೆಲೆಸಲು ಕಾಂಗ್ರೆಸ್ ಅಭ್ಯರ್ಥಿಗೆ ಮತದಾರ ಮತ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜೋಡೆತ್ತುಗಳಂತಿದ್ದ ಡಿಕೆಶಿ ಮತ್ತು ಕುಮಾರಸ್ವಾಮಿ ಕುಂಟೆತ್ತುಗಳಾಗಿದ್ದಾರೆ ಎಂಬ ಆರ್ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿರುವ ಸುರೇಶ್ ಹೇಳುವಂತಹವರೇ ಸರ್ಟಿಪೈ ಮಾಡಬೇಕು ಯಾರು ಕುಟೆಂತ್ತು? ಯಾರು ಮುದಿ ಎತ್ತು? ಅಂತಾ. ಹಿರಿಯರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಅಲ್ಲದೆ ಹಿರಿಯರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಿಲ್ಲ. ಇದು ಬಿಜೆಪಿ ಪಕ್ಷದ ಆಚಾರ-ವಿಚಾರ ಸಂಸ್ಕೃತಿಯನ್ನು ತೋರಿಸುತ್ತದೆ. ನಾಳೆ ಅವರಿಗೂ ವಯಸ್ಸು ಆಗಲಿದೆ ಎಂದು ತಿರುಗೇಟು‌ ಕೊಟ್ಟಿದ್ದಾರೆ.

ಅರಬ್ಬಿಸಮುದ್ರಕ್ಕೆ ಇಳಿದ ಅತ್ಯಾಧುನಿಕ ವೇವ್​ ರೈಡರ್​ ಬಾಯ್​; ಸಮುದ್ರದಾಳದ ಮಾಹಿತಿ ನೀಡಲು ಸಹಕಾರಿ

ಮುಂದುವರಿದು, ಮುನಿರತ್ನ ಕಣ್ಣೀರು ಹಾಕಿರುವ ಬಗ್ಗೆ ಮಾತನಾಡಿ ಸಿನಿಮಾ ರಂಗದಿಂದ ಬಂದ ಕೆಲವರು ಕಥೆ ಹೇಳೋದ್ರಲ್ಲಿ, ಅಳಿಸೋದ್ರಲ್ಲಿ, ನಗಿಸೋದ್ರಲ್ಲಿ, ಹೊಡೆಸೋದ್ರಲ್ಲಿ ಪರಿಣಿತರಿರುತ್ತಾರೆ. ಜೊತೆಗೆ ಕಟ್​- ಪೇಸ್ಟ್​​ ಮಾಡಿ ಹಿಂದಿದ್ದು ಮುಂದಕ್ಕೆ ಮುಂದಿದ್ದು ಹಿಂದಕ್ಕೆ ಹಾಕ್ತಾರೆ. ಅಂತಹ ಪ್ರವೃತ್ತಿ ಇರುವವರ ಬಗ್ಗೆ ನಾನೇನು ಮಾತನಾಡಲಿ ಎಂದ ಡಿ ಕೆ ಸುರೇಶ್ ಗೇಲಿ ಮಾಡಿದ್ದಾರೆ.

ಜೊತೆಗೆ ದೊಡ್ಡ ಬಂಡೆ, ಚಿಕ್ಕ ಬಂಡೆ ಚುನಾವಣೆ ಬಳಿಕ ಛಿದ್ರ ಆರ್ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಂಡೆ ಸಿಡಿದರೆ ಸುತ್ತಮುತ್ತಲಿನವರಿಗೆ ಆಪತ್ತು. ಬಂಡೆ ಹೊಡೆದರೆ ಟುಸ್ ಎನ್ನುವುದಿಲ್ಲ ಸಿಡಿಯುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. ಅಲ್ಲದೆ ಡೈನಾಮೇಟ್​​ಗಳ ಖರೀದಿ ಹೇಳಿಕೆಗೂ ಖಾರವಾಗಿ ಪ್ರತಿಕ್ರಿಯಿಸಿದ ಸುರೇಶ್, ಖರೀದಿ ಬಿಜೆಪಿಯ ವೃತ್ತಿ, ಎಂಎಲ್ಎಗಳನ್ನೂ ಖರೀದಿ ಮಾಡ್ತಾರೆ, ಜನರನ್ನೂ ಖರೀದಿ ಮಾಡ್ತಾರೆ, ಸಿಕ್ಕರೆ ಬೇರೆಯವರನ್ನು ಖರೀದಿ ಮಾಡ್ತಾರೆ ಎಂದು ಬಿಜೆಪಿ ನಾಯಕರ ವಿರುದ್ದ ಆನೇಕಲ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
Published by:Latha CG
First published: