• Home
  • »
  • News
  • »
  • state
  • »
  • Pushpa Amarnath: ಮತ್ತೆ ಜಗಜ್ಜಾಹೀರಾದ ಕಾಂಗ್ರೆಸ್ ಮಹಿಳಾ ಘಟಕದ ಕಿತ್ತಾಟ; ವೇದಿಕೆ ಮೇಲೆಯೇ ಗಲಾಟೆ

Pushpa Amarnath: ಮತ್ತೆ ಜಗಜ್ಜಾಹೀರಾದ ಕಾಂಗ್ರೆಸ್ ಮಹಿಳಾ ಘಟಕದ ಕಿತ್ತಾಟ; ವೇದಿಕೆ ಮೇಲೆಯೇ ಗಲಾಟೆ

ಪುಷ್ಪಾ ಅಮರನಾಥ್

ಪುಷ್ಪಾ ಅಮರನಾಥ್

ಈ ವೇಳೆ ಪುಷ್ಪಾ ಅವರ ಎದುರಿಗೆ ಸಲ್ಮಾ ಆಕ್ರೋಶ ಹೊರ ಹಾಕಿದರು. ಬಳಿಕ ಮಧ್ಯ ಪ್ರವೇಶಿಸಿದ ಮಾಜಿ ಪರಿಷತ್ ಸದಸ್ಯ ನಾರಾಯಣಸ್ವಾಮಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

  • Share this:

ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ (Indira Gandhi) ಅವರ 38 ನೇ ಪುಣ್ಯಸ್ಮರಣೆ  (Death Anniversary) ಹಿನ್ನೆಲೆ ಬೆಂಗಳೂರಿನ ಕಗ್ಗದಾಸಪುರದಲ್ಲಿ ರಾಜ್ಯ ಕಾಂಗ್ರೆಸ್ ನಿಂದ (Karnataka Congress) ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೆಎಚ್ ಮುನಿಯಪ್ಪ, ರಾಮಲಿಂಗ ರೆಡ್ಡಿ, ಸಲೀಂ ಅಹಮದ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಪ್ರತಿ ಬಾರಿ ಕೆಪಿಸಿಸಿ ಕಚೇರಿಯಲ್ಲಿಯೇ ಆಯೋಜನೆ ಮಾಡಲಾಗುತ್ತಿದ್ದ ಕಾರ್ಯಕ್ರಮವನ್ನು ಈ ವರ್ಷ ಡಿಕೆ ಶಿವಕುಮಾರ್ ಶಿಷ್ಯ ಮಾಜಿ ಮೇಯರ್ ಸಂಪತ್ ರಾಜು (Sampath Raj) ಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಕಿತ್ತಾಟ ಮತ್ತೆ ಜಗಜ್ಜಾಹೀರಾಗಿದೆ.


ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ (Pushpa Amarnath) ವೇದಿಕೆ ಏರುತ್ತಿದ್ದಂತೆ ಗಲಾಟೆ ಶುರುವಾಯ್ತು. ಪುಷ್ಪಾ ಅಮರನಾಥ್ ಬರುತ್ತಿದ್ದಂತೆ ಮತ್ತೋರ್ವ ನಾಯಕಿಯಾದ ಸಲ್ಮಾ ಗರಂ ಆದ್ರು. ಬೆಂಗಳೂರು ಜಿಲ್ಲಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದಕ್ಕೆ ಪುಷ್ಪಾ ಅಮರನಾಥ್ ವಿರುದ್ಧ ಸಲ್ಮಾ ಕಿಡಿಕಾರಿದ್ದಾರೆ. ನೂತನ ಜಿಲ್ಲಾಧ್ಯಕ್ಷೆ ಶಿಲ್ಪಾ ಕಶ್ಯಪ್ ಪಕ್ಕದಲ್ಲಿ ಪುಷ್ಪಾ ಅಮರನಾಥ್ ಕುಳಿತಿದ್ದರು.


ಈ ವೇಳೆ ಪುಷ್ಪಾ ಅವರ ಎದುರಿಗೆ ಸಲ್ಮಾ ಆಕ್ರೋಶ ಹೊರ ಹಾಕಿದರು. ಬಳಿಕ ಮಧ್ಯ ಪ್ರವೇಶಿಸಿದ ಮಾಜಿ ಪರಿಷತ್ ಸದಸ್ಯ ನಾರಾಯಣಸ್ವಾಮಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.


congress woman activist protest against pushpa amaranath mrq
ಸಿದ್ದರಾಮಯ್ಯ ಜೊತೆ ಪುಷ್ಪಾ ಅಮರನಾಥ್


ಎಲ್ಲರ ಅನುಮತಿ ಪಡೆದು ನಿರ್ಧಾರ


ಗಲಾಟೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಪುಷ್ಪಾ ಅಮರನಾಥ್, ಪಕ್ಷ ಮತ್ತು ಚುನಾವಣೆಗಾಗಿಯೇ ಕೆಲವು ಬದಲಾವಣೆ ಮಾಡಲಾಗಿದೆ. ಎಲ್ಲಾ ನಾಯಕರ ಅನುಮತಿ ಪಡೆದು ನಿರ್ಧಾರ ಮಾಡಲಾಗಿದೆ. ರಾಮಲಿಂಗಾರೆಡ್ಡಿ ಅವರು ನಮ್ಮ ಉಸ್ತುವಾರಿ ನಾಯಕರಾಗಿದ್ದು, ಅವರ ಅನುಮತಿ ಪಡೆದು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.


ತಮ್ಮ ಮೇಲಿರುವ ಆರೋಪ ತಳ್ಳಿ ಹಾಕಿದ ಪುಷ್ಪಾ ಅಮರನಾಥ್


ನಮ್ಮಲ್ಲಿ ಜಾತಿನೇ ಇಲ್ಲ. ನಮ್ಮ ಮನೆಯವರು ಬಂಟರು, ಈಗ ನಮ್ಮ ಕುಟುಂಬಕ್ಕೆ ಗೌಡ ಮನೆತನದಿಂದ ಮದುವೆ ಆಗ್ತಿದೆ. ನಾನು ಯಾವತ್ತು ಜಾತಿ ಇಟ್ಟುಕೊಂಡು ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗಮನಕ್ಕೆ ಬಾರದೇ ಏನು ಆಗಲ್ಲ. ಅವರ ಅನುಮತಿ ಪಡೆದೇ ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ ಎಂದು ತಮ್ಮ ಮೇಲಿರುವ ಆರೋಪಗಳನ್ನು ಅಲ್ಲಗಳೆದರು.


ಇದನ್ನೂ ಓದಿ:  Chitradurga: ಸೆಲ್ಫಿ ವಿಡಿಯೋ ಮಾಡಿ ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ; ಭಗತ್ ಸಿಂಗ್ ಪಾತ್ರಾಭಿನಯ ತಂದ ಸಾವು


ವಿರೋಧಿಗಳ ವಿರುದ್ಧ ವಾಗ್ದಾಳಿ


ಕೆಲವರು ಪ್ರಚಾರಕ್ಕೆ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ. ನಾನು ಕಾರ್ಯಕರ್ತೆಯಾಗಿ ಕೆಲಸ ಮಾಡ್ತಿದ್ದೇನೆ. ಚುನಾವಣೆ ವರ್ಷ ಆಗಿರೋದ್ರೀಂದ ಸಿದ್ದರಾಮಯ್ಯ ಅವರ ಅನುಮತಿ ಪಡೆದೇ ಕೆಲವು ಬದಲಾವಣೆ ಮಾಡಿದ್ದೇವೆ.  ನಾನು ಅಧ್ಯಕ್ಷೆಯಾಗಿ ಇರಬೇಕಾ ಅಥವಾ ಬೇಡವಾ ಅಂತ ಪಕ್ಷ, ಪಕ್ಷದ ನಾಯಕರು ತೀರ್ಮಾನ ಮಾಡ್ತಾರೆ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.


congress woman activist protest against pushpa amaranath mrq
ರಾಹುಲ್ ಗಾಂಧಿ ಜೊತೆ ಪುಷ್ಪಾ ಅಮರನಾಥ್


ಸೇಡಿನ ರಾಜಕಾರಣ ಮಾಡ್ತಿಲ್ಲ


ಈಗ ಐದಾರು ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿದ್ದೇವೆ. ಕೆಲಸ‌ ಮಾಡ್ತಿಲ್ಲ ಅಂತ ಬದಲಾವಣೆ ಮಾಡಿದ್ದೇವೆ ಅಷ್ಟೆ. ಮಹಿಳಾ ಕಾಂಗ್ರೆಸ್ ಗಾಗಿ ಹಗಲು ರಾತ್ರಿ ನಾನು ಕೆಲಸ ಮಾಡ್ತಿದ್ದೇನೆ. ಕುಟುಂಬ ಬಿಟ್ಟು ಕೆಲಸ ಮಾಡ್ತಿದ್ದೇನೆ. ನಾನು ಪಕ್ಷದ ಹಿತಕ್ಕಾಗಿ ಕೆಲಸ ಮಾಡ್ತಿದ್ದೇನೆ. ಯಾವುದೇ ಸೇಡಿನ ರಾಜಕೀಯ ಮಾಡ್ತಿಲ್ಲ ಎಂದು ಹೇಳಿದರು.


ಇದನ್ನೂ ಓದಿ: Gandhada Gudi: ಗಂಧದ ಗುಡಿ ಚಿತ್ರವನ್ನು ಶಾಲಾ ಮಕ್ಕಳಿಗೆ ತೋರಿಸಿ; ಚಿಂತಕರಿಂದ ಶಿಕ್ಷಣ ಸಚಿವರಿಗೆ ಮನವಿ


ಒಗ್ಗಟ್ಟಾಗಿ ಕೆಲಸ ಮಾಡಲು ಕರೆ


ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ 6 ತಿಂಗಳಿಂದ ನಡೆಯುತ್ತಿತ್ತು,  ಈಗ ಪೂರ್ಣ ಆಗಿದೆ. ಕೆಲವು ಕಡೆ ಮಹಿಳಾ ಅಧ್ಯಕ್ಷರೇ ಬರೋದಿಲ್ಲ. ಹೀಗಾಗಿ ಬದಲಾವಣೆ ಮಾಡಿದ್ದೇವೆ. ಯಾರನ್ನು ಕಿತ್ತು ಹಾಕಿ ಮನೆಯಿಂದ ಕಳಿಸೊಲ್ಲ. ಹೆಚ್ಚಿನ ಜವಾಬ್ದಾರಿ ಕೊಡ್ತೀವಿ. ಎಲ್ಲರೂ ಅಸಮಾಧಾನ ಬಿಟ್ಟು ಪಕ್ಷಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.

Published by:Mahmadrafik K
First published: