• Home
  • »
  • News
  • »
  • state
  • »
  • Karnataka Congress: ರಾಜ್ಯ ಮಹಿಳಾ ಕಾಂಗ್ರೆಸ್​ನಲ್ಲಿ ಕೋಲಾಹಲ; ಸಿದ್ದು ನಿವಾಸಕ್ಕೆ ಫೋಟೋ ಹಿಡಿದು ಬಂದ ಕಾರ್ಯಕರ್ತೆಯರು

Karnataka Congress: ರಾಜ್ಯ ಮಹಿಳಾ ಕಾಂಗ್ರೆಸ್​ನಲ್ಲಿ ಕೋಲಾಹಲ; ಸಿದ್ದು ನಿವಾಸಕ್ಕೆ ಫೋಟೋ ಹಿಡಿದು ಬಂದ ಕಾರ್ಯಕರ್ತೆಯರು

ಪುಷ್ಪಾ ಅಮರನಾಥ್

ಪುಷ್ಪಾ ಅಮರನಾಥ್

ಸಿದ್ದರಾಮಯ್ಯ ನಿವಾಸದಿಂದ ಹೊರ ಬರುತ್ತಿದ್ದಂತೆ ನಾಯಕರನ್ನು ಮುತ್ತಿಕೊಂಡ ಮಹಿಳೆಯರು ಪುಷ್ಮಾ ಅಮರನಾಥ್ ಅವರ ವಜಾಗೆ ಆಗ್ರಹಿಸಿದರು.  ಇವತ್ತೇ ಈಗಲೇ ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡುತ್ತೇನೆ ಎಂದು ಫೋಟೋ ಹಿಡಿದು ಬಂದ ಮಹಿಳಾಮಣಿಗಳಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.

  • Share this:

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ (Pushpa Amaranath) ವಿರುದ್ದ ಭಿನ್ನಮತ ಸ್ಪೋಟಗೊಂಡಿದೆ. ಪುಷ್ಪಾ ಅಮರನಾಥ್ ಕೆಳಗಿಳಿಸಿ, ಪ್ರಾಮಾಣಿಕರಿಗೆ ಅವಕಾಶ ನೀಡುವಂತೆ ಪುಷ್ಪಾ ಅಮರನಾಥ್ ವಿರುದ್ದ ಪೋಸ್ಟರ್ ವಾರ್ (Poster War) ಶುರುವಾಗಿದೆ. ಮಹಿಳಾ ಕಾರ್ಯಕರ್ತೆಯರು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ನಿವಾಸಕ್ಕೆ ಪೋಸ್ಟರ್ ಹಿಡಿದು ಆಗಮಿಸಿದ್ರು. ಕಳೆದ ಕೆಲ ದಿನಗಳ ಹಿಂದೆ ಏಕಾಏಕಿ ಜಿಲ್ಲಾ ಘಟಕಗಳ ಅಧ್ಯಕ್ಷೆಯರನ್ನು ಬದಲಾಯಿಸಲಾಗಿತ್ತು. ಅದ್ರ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ಗೂ ಮಾಹಿತಿ ನೀಡಿರಲಿಲ್ಲ. ಆದ್ದರಿಂದ ಪುಷ್ಪಾ ಅಮರನಾಥ್ ಕೆಳಗಿಳಿಸುವಂತೆ ಆಗ್ರಹಿಸಲಾಯ್ತು.


ಸಿದ್ದರಾಮಯ್ಯ ಭರವಸೆ


ಸಿದ್ದರಾಮಯ್ಯ ನಿವಾಸದಿಂದ ಹೊರ ಬರುತ್ತಿದ್ದಂತೆ ನಾಯಕರನ್ನು ಮುತ್ತಿಕೊಂಡ ಮಹಿಳೆಯರು ಪುಷ್ಮಾ ಅಮರನಾಥ್ ಅವರ ವಜಾಗೆ ಆಗ್ರಹಿಸಿದರು.  ಇವತ್ತೇ ಈಗಲೇ ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡುತ್ತೇನೆ ಎಂದು ಫೋಟೋ ಹಿಡಿದು ಬಂದ ಮಹಿಳಾಮಣಿಗಳಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.


ಕಾಂಗ್ರೆಸ್ ಭವನದ ಮುಂಭಾಗ ಪ್ರತಿಭಟನೆ


ಸಿದ್ಧರಾಮಯ್ಯ ಅವರ ನಿವಾಸದಿಂದ ಕಾಂಗ್ರೆಸ್ ಭವನಕ್ಕೆ ತೆರಳಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪುಷ್ಪಾ ಅಮರನಾಥ್ ಬದಲಾಯಿಸುವಂತೆ ಪ್ರತಿಭಟನಾನಿರತರು ಘೋಷಣೆ ಕೂಗಿದರು.


congress woman activist protest against pushpa amaranath mrq
ಸಿದ್ದರಾಮಯ್ಯ ಜೊತೆ ಪುಷ್ಪಾ ಅಮರನಾಥ್


ಚುನಾವಣೆ ಗೆಲ್ಲಲು ‘JDS ಪಂಚರತ್ನ’


ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಭರ್ಜರಿ ತಯಾರಿ ಮಾಡಿಕೊಳ್ತಿದೆ. ಇಂದು ಬೆಳಗ್ಗೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪಂಚರತ್ನ ಯೋಜನೆಗೆ ಚಾಲನೆ ಸಿಕ್ಕಿದೆ. ಪಂಚರತ್ನ ಯಾತ್ರೆಯ ವಾಹನಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದ್ರು.


ಮಧ್ಯಾಹ್ನ JDS ಕಾರ್ಯಕಾರಣಿ ನಡೆಯಲಿದ್ದು, ಚುನಾವಣಾ ಸಿದ್ದತೆ, ಅಭ್ಯರ್ಥಿಗಳ ಲಿಸ್ಟ್ ಫೈನಲ್ ಮಾಡಲಾಗುತ್ತೆ. ನವೆಂಬರ್ 1ರಂದು ಕೋಲಾರದ ಮುಳಬಾಗಿಲಿನಲ್ಲಿ ಪಂಚರತ್ನ ಕಾರ್ಯಕ್ರಮದ ಮೊದಲ ಸಮಾವೇಶ ನಡೆಸಿ, ಅಂದೇ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡೋ ನಿರೀಕ್ಷೆ ಇದೆ.


ಡಿಕೆಶಿ-ಸಿದ್ದು ಪ್ರತ್ಯೇಕ ಪ್ರವಾಸಕ್ಕೆ ಒಪ್ಪಿಗೆ


ರಾಜ್ಯ ಕಾಂಗ್ರೆಸ್ ನಾಯಕರ ಪ್ರತ್ಯೇಕ ಪ್ರವಾಸಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪ್ರವಾಸಕ್ಕೆ ಹೋಗಲು ಅನುಮತಿ ಸಿಕ್ಕಿದೆ. ಪ್ರತ್ಯೇಕ ಪ್ರವಾಸ ಬೇಡ ಎಂದು ಕೆಲವು ನಾಯಕರು ಸಲಹೆ ನೀಡಿದ್ದರು.


congress woman activist protest against pushpa amaranath mrq
ರಾಹುಲ್ ಗಾಂಧಿ ಜೊತೆ ಪುಷ್ಪಾ ಅಮರನಾಥ್


ನಿನ್ನೆ ಖರ್ಗೆ, ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ತಲಾ ಇಬ್ಬರು ನಾಯಕರು 14 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಸೂಚನೆ ಬಂದಿದೆ.


ಮಲ್ಲಿಕಾರ್ಜುನ ರಾಜಕೀಯ ತಂತ್ರಗಳೇನು ?


ಬುಧವಾರವಷ್ಟೇ ಕಾಂಗ್ರೆಸ್​ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಸ್ವೀಕಾರ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ತವರು ರಾಜ್ಯ ಕರ್ನಾಟದಲ್ಲಿ ಚುನಾವಣೆ (Karnataka Election) ಗೆಲ್ಲುವ ಬಹುದೊಡ್ಡ ಸವಾಲು ಇದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಯಾವೆಲ್ಲ ರಾಜಕೀಯ ತಂತ್ರಗಳನ್ನು ಪ್ರಯೋಗಿಸ್ತಾರೆ ಎಂಬುದರ ಬಗ್ಗೆ ಕೈ (Congress) ಅಂಗಳದಲ್ಲಿ ಚರ್ಚೆಗಳು ನಡೆಯುತ್ತಿವೆ.


ಜೆಡಿಎಸ್ ತಂತ್ರ  ಪ್ರಯೋಗಿಸ್ತಾ ಇದೆಯಾ ಕಾಂಗ್ರೆಸ್?


ಇತ್ತ ವಿಧಾನಸಭಾ ಚುನಾವಣೆ ತಯಾರಿಯಲ್ಲಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಸಾಲು ಸಾಲು ಯಾತ್ರೆ, ಉತ್ಸವಗಳನ್ನು ಆಯೋಜನೆ ಮಾಡುತ್ತಿದೆ. ಈ ನಡುವೆ ಚುನಾವಣಾ ತಂತ್ರಗಾರಿಕೆ ರಚನೆಯಲ್ಲಿ ಜೆಡಿಎಸ್ (JDS)​ ಪಕ್ಷವನ್ನು ಫಾಲೋ ಮಾಡುತ್ತಿದೆಯಾ ಎಂಬ ಚರ್ಚೆಗಳು ಶುರುವಾಗಿವೆ. ಆದ್ರೆ ಈ ತಂತ್ರಗಾರಿಕೆ ಪ್ರಯೋಗಿಸಿದ್ರೆ ಕೈ ಅಂಗಳದಲ್ಲಿಯ ಗೊಂದಲ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿವೆ.

Published by:Mahmadrafik K
First published: