Karnataka By Election Results 2021: ಹಾನಗಲ್ ನಲ್ಲಿ ಗೆದ್ದ ಕಾಂಗ್ರೆಸ್; ಸಿಎಂ ತವರು ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಗೆಲುವಿನ ಸೀಕ್ರೆಟ್ ಏನು?

ಸಮೀಪದ ಸ್ಪರ್ಧಿ ಬಿಜೆಪಿಯ ಶಿವರಾಜ್ ಸಜ್ಜನ್ (Shivaraj Sajjan) ಅವರನ್ನು ಏಳು ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. 19 ಸುತ್ತುಗಳ ಮತ ಎಣಿಕೆ ಮುಕ್ತಾಯಗೊಂಡಿದೆ. ಶ್ರೀನಿವಾಸ್ ಮಾನೆ 87,113 ಮತ ಪಡೆದ್ರೆ, ಬಿಜೆಪಿ 79515 ವೋಟ್ ಪಡೆದಿದೆ. ಜೆಡಿಎಸ್ 921 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದೆ

ಶ್ರೀನಿವಾಸ್ ಮಾನೆ

ಶ್ರೀನಿವಾಸ್ ಮಾನೆ

  • Share this:
ಹಾವೇರಿ: ಎರಡೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ (Karnataka By Election Results 2021) ಪ್ರಕಟವಾಗಿದೆ. ಹಾನಗಲ್ (Hangal) ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ (Sriniva V mane) ಗೆಲುವಿನ ನಗೆ ಬೀರಿದ್ದಾರೆ. ಸಮೀಪದ ಸ್ಪರ್ಧಿ ಬಿಜೆಪಿಯ ಶಿವರಾಜ್ ಸಜ್ಜನ್ (Shivaraj Sajjan) ಅವರನ್ನು ಏಳು ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. 19 ಸುತ್ತುಗಳ ಮತ ಎಣಿಕೆ ಮುಕ್ತಾಯಗೊಂಡಿದೆ. ಶ್ರೀನಿವಾಸ್ ಮಾನೆ 87,113 ಮತ ಪಡೆದ್ರೆ, ಬಿಜೆಪಿ 79515 ವೋಟ್ ಪಡೆದಿದೆ. ಜೆಡಿಎಸ್ 921 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದೆ. 10 ಸುತ್ತುಗಳಲ್ಲಿ ಶ್ರೀನಿವಾಸ್ ಮಾನೆ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದರು.

ಹಾನಗಲ್ ನಲ್ಲಿ ಜನಬಲಕ್ಕೆ ಗೆಲುವು

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಬಹುತೇಕ ನಿಶ್ಚಿತವಾಗುತ್ತಲೇ  ಮತಗಟ್ಟೆಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ವಿ, ಮಾನೆ ನ್ಯೂಸ್ 18 ಜೊತೆ ಮಾತನಾಡಿದರು. ಹತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿತ್ತು. ಅದು ಫಲಿತಾಂಶದಲ್ಲಿ ಪ್ರತಿಬಿಂಬಿತವಾಗ್ತಿದೆ. ಮುಖ್ಯಮಂತ್ರಿ ಆದಿಯಾಗಿ ಸಚಿವ ಸಂಪುಟವೇ ಇಲ್ಲಿತ್ತು . ಆದರೂ ಜನಬಲಕ್ಕೆ ಗೆಲುವಾಗಿದೆ. ಕಾಂಗ್ರೆಸ್ ಗೆಲುವು ನಮ್ಮ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ . ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಹೋರಾಡುತ್ತೇನೆ. ಪ್ರಣಾಳಿಕೆಯ ಅಂಶಗಳನ್ನು ಜಾರಿಗೆ ತರಲು ಯತ್ನಿಸುತ್ತೇನೆ ಎಂದರು.

ಇದನ್ನೂ ಓದಿ:  Karnataka By Election Result 2021; ಸಿಂದಗಿಯಲ್ಲಿ ಅರಳಿದ ಕಮಲ; ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲುವು ಬಹುತೇಕ ಖಚಿತ

ಮಾನೆ ಗೆಲುವಿನತ್ತ ಹೋಗ್ತಿದ್ದಂತೆ ಎಪ್ಪತ್ತೈದು ತೆಂಗಿನಕಾಯಿ ಒಡೆದು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿರೋ ಮಾಲತೇಶ ದೇವಸ್ಥಾನದ ಬಳಿ ಕಾಯಿ ಒಡೆದ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಧ್ವಜ ಹಿಡಿದು ಗ್ರಾಮದ ತುಂಬೆಲ್ಲ ಘೋಷಣೆ ಕೂಗುತ್ತಾ ಸಂಚರಿಸುತ್ತಿದ್ದಾರೆ.

ಶ್ರೀನಿವಾಸ್ ಮಾನೆ ಗೆಲುವಿಗೆ ಕಾರಣ ಏನು?

  • 2018ರ ಚುನಾವಣೆಯಲ್ಲಿ ಶ್ರೀನಿವಾಸ್  ಮಾನೆ ಸೋತಿದ್ದರು. ಸೋತರೂ ಕ್ಷೇತ್ರದಲ್ಲಿಯೇ ಇದ್ದರು.

  • ಕ್ಷೇತ್ರದಲ್ಲಿಯೇ ಉಳಿದು ತಮ್ಮದೇ ಯುವಕರ ಪಡೆ ರಚಿಸಿಕೊಂಡಿದ್ದರು.

  • ಕೋವಿಡ್ ಸಂದರ್ಭದಲ್ಲಿ ಜನರ ನೆರವಿಗೆ ತಮ್ಮ ಯುವ ಪಡೆ ಮೂಲಕ ನೆರವಾಗಿದ್ದರು.

  • 2018ರ ಸೋಲಿನ ಅನುಕಂಪ

  • ಅಹಿಂದ ಮತಗಳನ್ನು ಒಟ್ಟುಗೂಡಿಸುವ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದರು.

  • 2018ರಲ್ಲಿ ಗೆದ್ದಿದ್ದ ಸಿ.ಎಂ.ಉದಾಸಿ ಕ್ಷೇತ್ರದ ಸಂಪರ್ಕ ಕಳೆದುಕೊಂಡಿದ್ದರು.

  • ಹಾನಗಲ್ ನಲ್ಲಿ ಕಾಂಗ್ರೆಸ್ ವ್ಯವಸ್ಥಿತವಾಗಿ ಪ್ರಚಾರ ನಡೆಸಿತ್ತು.

  • ಹಾನಗಲ್ ನಲ್ಲಿ ಭಿನ್ನಮತ ಶಮನ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿ

  • ಚುನಾವಣೆಯಲ್ಲಿ ಸೋತರೂ ಕ್ಷೇತ್ರದಲ್ಲಿಯೇ ಉಳಿದುಕೊಂಡು ವರ್ಚಸ್ಸು ಹೆಚ್ಚಿಸಿಕೊಂಡಿದ್ದರು.


ಸಿಂದಗಿಯಲ್ಲಿ ಬಿಜೆಪಿ ಗೆಲುವು

ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಮಲ ಅರಳಿದೆ. 22 ಸುತ್ತುಗಳ ಮತ ಎಣಿಕೆ ಅಂತ್ಯವಾಗಿದ್ದು, ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ, ಬಿಜೆಪಿ ರಮೇಶ್ ಭೂಸನೂರು ಜಯದ ಹಾರವನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62,680 ಮತ ಪಡೆದ್ರೆ, ಜೆಡಿಎಸ್ ನ ನಾಜೀಯಾ ಅಂಗಡಿ 4,353 ಮತ ಪಡೆದ್ರೆ, ಗೆದ್ದ ಅಭ್ಯರ್ಥಿ ರಮೇಶ್ ಭೂಸನೂರು 93,865 ಮತ ಪಡೆದಿದ್ದಾರೆ. ಬರೋಬ್ಬರಿ  31,185 ಮತಗಳ ಭಾರೀ ಅಂತರದಲ್ಲಿ ಗೆದ್ದಿದ್ದಾರೆ.

ಇದನ್ನೂ ಓದಿ:  HD Devegowda : ಉಪ ಸಮರದಲ್ಲೂ ಚುಕ್ಕಾಣಿ ಹಿಡಿಯದ `ದಳಪತಿ’ಗಳು: ಇನ್ನೂ ಜೀವಂತವಾಗಿದ್ದೇನೆ ಎಂದ ದೇವೇಗೌಡ

ರಮೇಶ್ ಭೂಸನೂರು ಮೊದಲ ಪ್ರತಿಕ್ರಿಯೆ

ಗೆಲುವುನ ಬಳಿಕ ವಿಕ್ಟರಿ ಸಿಂಬಲ್ ತೋರಿಸಿರುವ ರಮೇಶ್ ಭೂಸನೂರು, ಚುನಾವಣೆಯನ್ನು ಗೆಲ್ಲುತ್ತೇನೆ ಎಂದು ಮೊದಲೇ ಹೇಳಿದ್ದೆ. ಪಕ್ಷದ ಅಧ್ಯಕ್ಷರು, ಸಚಿವರು ಸೇರಿದಂತೆ ಎಲ್ಲ ಕಾರ್ಯರ್ತರು ನಿರಂತರವಾಗಿ ಪ್ರಚಾರ ನಡೆಸಿದರು. ಕ್ಷೇತ್ರದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಜನರು ನನ್ನನ್ನು ಗೆಲ್ಲಿಸುವ ಪ್ರಾಮಾಣಿಕತೆಯಿಂದ ಮತ ನೀಡಿದ್ದಾರೆ. ನನ್ನ ಮೂವತ್ತು ವರುಷದ ರಾಜಕೀಯ ಜೀವನ ಮತ್ತು ಸರಕಾರದ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಮತ ನೀಡಿದ್ದಾರೆ.

ಶಾಸಕ ರಾಜೂಗೌಡ ಪ್ರತಿಕ್ರಿಯೆ

ಹಾನಗಲ್ ಸೋಲನ್ನ ಒಪ್ಪಿದ್ದೇವೆ.  ಇದು ಸಿಎಂರವರಿಗೆ ಒಪ್ಪಿಸೋದಲ್ಲ. ಕೆಲ ಉಸ್ತುವಾರಿ ಹೊತ್ತುವರು ಹಾಗೂ ನಮ್ಮ ಎಡವಟ್ಟಿನಿಂದ ಸಮಸ್ಯೆ ಆಯ್ತು.  ಶ್ರೀನಿವಾಸ್ ಮಾನೆ ಮೊದಲಿಂದಲೂ ಜನರಿಗೆ ಹತ್ತಿರವಾಗಿದ್ರೂ, ಅವರ ಗೆಲುವಿನ ನಿರೀಕ್ಷೆ ಇತ್ತು..ಕೋವಿಡ್ ಟೈಮಲ್ಲಿ ಕೆಲಸ ಮಾಡಿದ್ರು ಜನರಿಗೆ ಹತ್ತಿರವಾಗಿದ್ರು.. ಕೊನೆ ಕ್ಷಣದವರೆಗೂ ಟಿಕೆಟ್ ಅನೌನ್ಶ್ ಆಗದಿರೋದು ಸಹ ಸಮಸ್ಯೆ ಆಯ್ತು...ಇದರಿಂದ ಒಳ್ಳೆಯ ನೀತಿ ಪಾಠ ಕಲಿತಿದ್ದೇವೆ ಎಂದು ಹೇಳಿದ್ದಾರೆ .
Published by:Mahmadrafik K
First published: