ಡಿಕೆಶಿ ಕೆಪಿಸಿಸಿ ಪಟ್ಟ; ಹಾಸನ, ರಾಮನಗರ, ಮಂಡ್ಯ, ಹಳೆ ಮೈಸೂರು ಭಾಗದಲ್ಲಿ ಮಂಕಾಗಲಿದೆಯಾ ಬಿಜೆಪಿ ಪಕ್ಷ ಸಂಘಟನೆ?

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್​ ಬಿಜೆಪಿ ಪಕ್ಷವನ್ನು ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರಿಸುವ ಕನಸು ಕಂಡಿದ್ದರು. ಅಲ್ಲದೆ, ಕಪಾಲ ಬೆಟ್ಟದ ಏಸು ಪ್ರತಿಮೆಯನ್ನು ವಿರೋಧಿಸಿ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಿದ್ದ ಹಿಂದೂ ಜಾಗೃತ ಮೆರವಣಿಗೆ ಡಿಕೆಶಿಗೆ ಹಿನ್ನಡೆಯಾಗಲಿದೆ ಎಂದೇ ಹೇಳಲಾಗಿತ್ತು.

MAshok Kumar | news18-kannada
Updated:March 14, 2020, 9:30 AM IST
ಡಿಕೆಶಿ ಕೆಪಿಸಿಸಿ ಪಟ್ಟ; ಹಾಸನ, ರಾಮನಗರ, ಮಂಡ್ಯ, ಹಳೆ ಮೈಸೂರು ಭಾಗದಲ್ಲಿ ಮಂಕಾಗಲಿದೆಯಾ ಬಿಜೆಪಿ ಪಕ್ಷ ಸಂಘಟನೆ?
ಡಿ.ಕೆ. ಶಿವಕುಮಾರ್
  • Share this:
ಕಾಂಗ್ರೆಸ್​ ಟ್ರಬಲ್ ಶೂಟರ್​ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿರುವ ಪರಿಣಾಮ ರಾಮನಗರ ಮಾತ್ರವಲ್ಲ, ಮೈಸೂರು-ಮಂಡ್ಯ- ಹಾಸನ ಸೇರಿದಂತೆ ಹಳೆ ಮೈಸೂರು ಭಾಗದ ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ಪಕ್ಷ ಸಂಘಟನೆ ಕೆಲಸಕ್ಕೆ ಹಿನ್ನಡೆಯಾಗಲಿದೆ ಎಂದು ರಾಜ್ಯ ರಾಜಕೀಯ ವಠಾರದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಈಗಾಗಲೇ ರಾಮನಗರ, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳದ್ದೇ ಪಾರುಪತ್ಯ. ಆದರೆ, ಕೆ.ಆರ್​.ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಪಕ್ಷದಲ್ಲಿ ಒಂದು ಹೊರ ಹುರುಪು ಕಂಡು ಬಂದಿತ್ತು. ಅಲ್ಲದೆ, ಕಾಂಗ್ರೆಸ್​-ಜೆಡಿಎಸ್​ ತೆಕ್ಕೆಯಲ್ಲಿರುವ ಈ ನಾಲ್ಕೂ ಜಿಲ್ಲೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಅದಕ್ಕೆ ಕೆ.ಆರ್​. ನಗರ ಉಪ ಚುನಾವಣಾ ಗೆಲುವೇ ಟ್ರಂಪ್​ ಕಾರ್ಡ್​ ಎಂದು ಬಿಜೆಪಿ ನಾಯಕರು ಭಾವಿಸಿದ್ದರು.

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್​ ಬಿಜೆಪಿ ಪಕ್ಷವನ್ನು ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರಿಸುವ ಕನಸು ಕಂಡಿದ್ದರು. ಅಲ್ಲದೆ, ಕಪಾಲ ಬೆಟ್ಟದ ಏಸು ಪ್ರತಿಮೆಯನ್ನು ವಿರೋಧಿಸಿ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಿದ್ದ ಹಿಂದೂ ಜಾಗೃತ ಮೆರವಣಿಗೆ ಡಿಕೆಶಿಗೆ ಹಿನ್ನಡೆಯಾಗಲಿದೆ ಎಂದೇ ಹೇಳಲಾಗಿತ್ತು.

ಆದರೆ, ಇದೀಗ ಬಿಜೆಪಿ ಪಕ್ಷದಲ್ಲೇ ಸಿ.ಪಿ. ಯೋಗೇಶ್ವರ್ ಮೂಲೆ ಗುಂಪಾಗಿರುವುದು ಮತ್ತು ಡಿಕೆಶಿ ಅವರಿಗೆ ಪಕ್ಷದಲ್ಲಿ ಪ್ರಬಲ ಸ್ಥಾನ ನೀಡಿರುವುದು ಈ ನಾಲ್ಕೂ ಜಿಲ್ಲೆಗಳಲ್ಲಿ ಮತ್ತೆ ಕಾಂಗ್ರೆಸ್​ ಏಳಿಗೆಗೆ ಕಾರಣವಾಗಲಿದೆ. ಸದ್ಯ ಡಿಕೆಶಿ ಮಟ್ಟಕ್ಕೆ ಚಾರ್ಮ್ ಇರೋ ಬಿಜೆಪಿ ನಾಯಕ ಹಳೇ ಮೈಸೂರು ಭಾಗದಲ್ಲಿ ಯಾರು ಇಲ್ಲ. ಹೀಗಾಗಿ ಇದು ಈ ಭಾಗದಲ್ಲಿ ಪಕ್ಷ ಸಂಘಟನೆ ಕೆಲಸದಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ.

(ವರದಿ - ಎ.ಟಿ. ವೆಂಕಟೇಶ್, ರಾಮನಗರ)

ಇದನ್ನೂ ಓದಿ : ಅಮೆರಿಕದಲ್ಲಿ ತುರ್ತು ಪರಿಸ್ಥಿತಿ ಘೋಷಣೆ; ಕೊರೋನಾ ವಿರುದ್ಧದ ಹೋರಾಟಕ್ಕೆ 50 ಬಿಲಿಯನ್ ಡಾಲರ್ ಮೀಸಲಿಟ್ಟ ಟ್ರಂಪ್
First published: March 14, 2020, 9:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading