ಬಿಜೆಪಿ ಸರ್ಕಾರದ ವಿರುದ್ಧ ಜೂ. 29ರಂದು ಕಾಂಗ್ರೆಸ್ ಪ್ರತಿಭಟನೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಹಿತಿ

ಕಾಂಗ್ರೆಸ್ ಪಕ್ಷ 29ರಂದು ಪ್ರತಿಭಟನೆ ನಡೆಸಲಿದೆ. ಕೇಂದ್ರ ಸರ್ಕಾರದ ಕಚೇರಿ ಮುಂದೆ ಎರಡು ಗಂಟೆಗಳ ಧರಣಿ ನಡೆಸಲು ತೀರ್ಮಾನ ಮಾಡಲಾಗಿದೆ. ಜೂನ್ 30ರಿಂದ ಜುಲೈ 4ರ ವರೆಗೆ ತಾಲ್ಲೂಕು ಕೇಂದ್ರ ಗಳಲ್ಲಿ ಧರಣಿ ನಡೆಸಲಾಗುವುದು.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಬೆಂಗಳೂರು (ಜೂ. 25): ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೊರೋನಾ ಚಿಕಿತ್ಸೆಗೆ ವಿಪರೀತ ಹಣ ವಸೂಲಿ ಮಾಡಲಾಗುತ್ತಿದೆ. ಇದೆಲ್ಲದರ ವಿರುದ್ಧ ಜೂ. 29ರಂದು ಕಾಂಗ್ರೆಸ್​ನವರು ಪ್ರತಿಭಟನೆ ನಡೆಸಲಿದ್ದೇವೆ. ಕೇಂದ್ರ ಸರ್ಕಾರದ ಕಚೇರಿ ಎದುರು ಸಾಮಾಜಿಕ ಅಂತರ ಕಾಯ್ದುಕೊಂಡು, 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿ.ಕೆ. ಶಿವಕುಮಾರ್, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದೆ. ರಾಹುಲ್ ಗಾಂಧಿ ಎಲ್ಲ ರಾಜ್ಯಾಧ್ಯಕ್ಷರ ಜೊತೆ ಸಭೆ ನಡೆಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮೌನಾಚರಣೆ ನಡೆಸಲಾಗುವುದು. ಜೂ. 27ರಂದು ಹಿರಿಯ ನಾಯಕರ ಸಭೆ ಕರೆಯಲಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.

ಕಾಂಗ್ರೆಸ್ ಪಕ್ಷ 29ರಂದು ಪ್ರತಿಭಟನೆ ನಡೆಸಲಿದೆ. ಕೇಂದ್ರ ಸರ್ಕಾರದ ಕಚೇರಿ ಮುಂದೆ ಎರಡು ಗಂಟೆಗಳ ಧರಣಿ ನಡೆಸಲು ತೀರ್ಮಾನ ಮಾಡಲಾಗಿದೆ. ಜೂನ್ 30ರಿಂದ ಜುಲೈ 4ರ ವರೆಗೆ ತಾಲ್ಲೂಕು ಕೇಂದ್ರ ಗಳಲ್ಲಿ ಧರಣಿ ನಡೆಸಲಾಗುವುದು. ನಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Bangalore Lockdown: ಬೆಂಗಳೂರು ಲಾಕ್​ಡೌನ್?; ನಾಳೆ ನಗರದ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಸಭೆ

ಕೊರೋನಾ ಚಿಕಿತ್ಸೆಗೆ ಸರ್ಕಾರ ವಿಪರೀತ ಹೆಚ್ಚು ದರ ನಿಗದಿ ಮಾಡಿದೆ. ನಾನೂ ಕೂಡ ವೈದ್ಯಕೀಯ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೇನೆ. ಬಡ ಕುಟುಂಬಗಳಿಗೆ ಐದು ಲಕ್ಷದವರೆಗೂ ಉಚಿತ ಚಿಕಿತ್ಸೆ ಕೊಡಬೇಕು ಎಂದು ನಾನು ಅಧಿಕಾರದಲ್ಲಿದ್ದಾಗ ಆದೇಶ ಮಾಡಿದ್ದೆ. ಬಡತನ ರೇಖೆಗಿಂತ ಮೇಲೆ ಇರುವವರಿಗೆ ಒಂದೂವರೆ ಲಕ್ಷದವರೆಗೂ ಉಚಿತ ಚಿಕಿತ್ಸೆ ಕೊಡಬೇಕು ಎಂದು ಆದೇಶ ಮಾಡಿದ್ದೆ. ಕೆಂದ್ರ ಸರ್ಕಾರದ ಸಹಯೋಗದಲ್ಲಿ ಈ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೆವು. ಸರ್ಕಾರದಲ್ಲಿ ಹಣ ಇದೆ. ಆದರೂ ಯಾಕೆ ಬಡವರ ಬಳಿ ಹಣ ವಸೂಲಿ ಮಾಡುತ್ತಿದ್ದೀರಿ? ಆಯುಷ್ಮಾನ್ ಭಾರತ ದಂತಹ ಸ್ಕೀಮ್ ಗಳಿದ್ದರೂ ಜನರ ಬಳಿ ಹಣ ವಸೂಲಿ ಮಾಡಲಾಗುತ್ತಿದೆ. ಜನರು ಅವರಾಗೇ ಕಾಯಿಲೆಯನ್ನು ಹೊತ್ತು ಬಂದಿಲ್ಲ. ಸರ್ಕಾರಗಳು ಕೊರೋನಾವನ್ನು ನಿಯಂತ್ರಣ ಮಾಡದೆ ಸೋತಿವೆ. ನೀವು ಮಾಡಿದ ತಪ್ಪಿಗೆ ಜನರ ಬಳಿ ಯಾಕೆ ಹಣ ವಸೂಲಿ ಮಾಡುತ್ತಿದ್ದೀರಿ? ಈಗ ನಾವು ಜನಪರ ಹೋರಾಟಕ್ಕೆ ಇಳಿಯಬೇಕಿದೆ. ಹಾಗಾಗಿ ಜೂ. 29ರಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.

ಕೊರೋನಾ ಕುರಿತು ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಬೆಂಗಳೂರಿನ ಶಾಸಕರ ಸಭೆಯನ್ನು ಕರೆದಿದ್ದಾರೆ. ಆ ಸಭೆಗೆ ನಮ್ಮ ಪಕ್ಷದವರೂ ಹೋಗುತ್ತೇವೆ. ಅಲ್ಲಿ ನಮ್ಮ ಅಭಿಪ್ರಾಯವನ್ನೂ ತಿಳಿಸುತ್ತೇವೆ. ಕೊರೋನಾಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಬೇಕು. ಅದಕ್ಕೆ ಸರ್ಕಾರ ಏನು ಮಾಡುತ್ತೋ ಮಾಡಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
First published: