ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರ ಹಾಕದಿದ್ದರೆ ಕಾಂಗ್ರೆಸ್​​ಗೆ ಉಳಿಗಾಲವಿಲ್ಲ : ರಮೇಶ್ ಜಾರಕಿಹೊಳಿ

ಸರಕಾರ ಬಿದ್ದಿರುವುದು ನಮ್ಮಿಂದಲ್ಲ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಂದ. ಆ ವ್ಯಕ್ತಿ ನಾಯಕನಾಗಿರುವ ವರೆಗೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಈಗ 80 ಶಾಸಕರು ಆಯ್ಕೆ ಆಗಿ ಬಂದಿದ್ದಾರೆ . ಆದರೆ, ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರೇ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ 30 ಜನ ಶಾಸಕರಾಗಿ ಆಯ್ಕೆ ಆಗುವದು ಕಷ್ಟ

G Hareeshkumar | news18-kannada
Updated:September 28, 2019, 3:53 PM IST
ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರ ಹಾಕದಿದ್ದರೆ ಕಾಂಗ್ರೆಸ್​​ಗೆ ಉಳಿಗಾಲವಿಲ್ಲ : ರಮೇಶ್ ಜಾರಕಿಹೊಳಿ
ರಮೇಶ್​ ಜಾರಕಿಹೊಳಿ ಹಾಗೂ ಸಿದ್ದರಾಮಯಗ್ಯ
  • Share this:
ಬೆಳಗಾವಿ(ಸೆ.28): ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿಂತ ಕಾಂಗ್ರೆಸ್ ನಲ್ಲಿ ಇಪ್ಪತ್ತು ವರ್ಷ ಹಿರಿಯವ ನಾನು. ಪಕ್ಷವನ್ನು ಅವರು ಹಾಳು ಮಾಡುತ್ತಿದ್ದಾರೆ ಹೀಗಾಗಿ ಅವರನ್ನು ಪಕ್ಷದಿಂದ ಕಿತ್ತು ಹಾಕದಿದ್ದರೆ ಕಾಂಗ್ರೆಸ್ ಗೆ ಉಳಿಗಾಲ ಇಲ್ಲ ಎಂದು ಕಾಂಗ್ರೆಸ್ ವಿರುದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು. 

ಒಬ್ಬರು ಪಕ್ಷವನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಪಕ್ಷ ಹಾಳು ಮಾಡುತ್ತಿದ್ದಾರೆ. ಹೈಕಮಾಂಡ್ ವಿಚಾರ ಮಾಡದಿದ್ದರೆ ಇನ್ನೂ ಕೆಟ್ಟ ಪರಿಸ್ಥಿತಿ ಕಾಂಗ್ರೆಸ್ ಗೆ ಬರಲಿದೆ.  ಎಂದು ಎಂದರು.

ಸರಕಾರ ಬಿದ್ದಿರುವುದು ನಮ್ಮಿಂದಲ್ಲ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಂದ. ಆ ವ್ಯಕ್ತಿ ನಾಯಕನಾಗಿರುವ ವರೆಗೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಈಗ 80 ಶಾಸಕರು ಆಯ್ಕೆ ಆಗಿ ಬಂದಿದ್ದಾರೆ . ಆದರೆ, ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರೇ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ 30 ಜನ ಶಾಸಕರಾಗಿ ಆಯ್ಕೆ ಆಗುವದು ಕಷ್ಟ ಎಂದರು.

ಇದನ್ನೂ ಓದಿ : ಹೈಕಮಾಂಡ್​ ಮಟ್ಟದಲ್ಲಿ ಕುಗ್ಗಿದ ರಮ್ಯಾ ವರ್ಚಸ್ಸು; ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸ್ಥಾನದಿಂದ ಔಟ್​​

ನಾಯಕ ಎನಿಸಿಕೊಳ್ಳುವವರು ಒಂದು ಕಡೆ ಸೋಲುತ್ತಾರೆ. ಇನ್ನೊಂದ ಕಡೆ ಅಳತಾ ಅಳುತಾ ಆರಿಸಿ ಬರುತಾರೆ. ಅಂತವರನ್ನ ಹೇಗೆ ನಾಯಕರಾದ್ರೋ ಗೊತ್ತಿಲ್ಲ. ಈ ನಾಯಕರು ನಮ್ಮನ್ನ ಕರೆದು ಒಂದು ದಿನವು ಸರಿಯಾಗಿ ಮಾತನಾಡಿಲ್ಲ. ಕರೆದರೂ ಸರಿಯಾಗಿ ಮಾತನಾಡಿಲ್ಲ. ಮಾತನಾಡಿದರೂ ನಮ್ಮನ್ನ ದಬಾಯಿಸೊದು. ನಮಗಿಂತ ಮೊದಲು ಸರಕಾರ ಅವರಿಗೆ ಬೀಳಬೇಕಾಗಿತ್ತು. ಹಾಗೇನಾದರೂ ಅವರು ಮಾತನಾಡಿದ್ದಾರೆ ಅಂದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸವಾಲ ಹಾಕಿದ್ದರು.

ವರದಿ : ಚಂದ್ರಕಾಂತ್​ ಸುಗಂಧಿ

First published:September 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading