• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Congress Protest: ಸೋನಿಯಾಗಾಂಧಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಪ್ರೊಟೆಸ್ಟ್, ಬೆಂಗಳೂರಲ್ಲಿ ಇಂದು ಟ್ರಾಫಿಕ್ ಜಾಮ್ ಫಿಕ್ಸ್!

Congress Protest: ಸೋನಿಯಾಗಾಂಧಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಪ್ರೊಟೆಸ್ಟ್, ಬೆಂಗಳೂರಲ್ಲಿ ಇಂದು ಟ್ರಾಫಿಕ್ ಜಾಮ್ ಫಿಕ್ಸ್!

ಕಾಂಗ್ರೆಸ್ ಪ್ರತಿಭಟನೆಯ ಸಂಗ್ರಹ ಚಿತ್ರ

ಕಾಂಗ್ರೆಸ್ ಪ್ರತಿಭಟನೆಯ ಸಂಗ್ರಹ ಚಿತ್ರ

ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ಬಳಿ ಹೋಗುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡಿ. ಯಾಕೆಂದ್ರೆ ಅಲ್ಲಿ ಇಂದು ಕಾಂಗ್ರೆಸ್‌ ಬಡಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಹೀಗಾಗಿ ಆ ಕಡೆ ಹೋದರೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುವ ಸಂಭವವಿದೆ!

 • News18 Kannada
 • 4-MIN READ
 • Last Updated :
 • Edacheri
 • Share this:

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಇಂದು ಮತ್ತೊಮ್ಮೆ ಟ್ರಾಫಿಕ್ ಜಾಮ್‌ನಿಂದ (Traffic Jam) ತತ್ತರಿಸಲಿದೆಯಾ? ಯಾಕೆಂದರೆ ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಇಂದು ಮತ್ತೊಂದು ಹೋರಾಟ ನಡೆಯಲಿದೆ. ನ್ಯಾಷನಲ್ ಹೆರಾಲ್ಡ್ (National Herald Case) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress President Sonia Gandhi) ಅವರಿಗೆ ಜಾರಿ ನಿರ್ದೇಶನಾಲಯ (Enforcement Directorate) ಜುಲೈ 12ರಂದು ವಿಚಾರಣೆಗೆ ಬರುವಂತೆ ಸಮನ್ಸ್ (Summons) ಜಾರಿ ಮಾಡಿದ್ದು, ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಲಿದ್ದಾರೆ. ಸೋನಿಯಾಗಾಂಧಿಯವರನ್ನು ವಿಚಾರಣೆಗೆ ಕರೆದಿರುವ ಇಡಿ ನಿರ್ಧಾರ ಖಂಡಿಸಿ ದೇಶಾದ್ಯಂತ ಇಂದು ಕಾಂಗ್ರೆಸ್ ಪ್ರತಿಭಟನೆ (Congress Protest) ಹಮ್ಮಿಕೊಂಡಿದೆ. ಅದರಂತೆ ಕೆಪಿಸಿಸಿ (KPCC) ಸಹ ರಾಜ್ಯದಲ್ಲಿ ಪ್ರತಿಭಟನೆಗೆ ಸಜ್ಜಾಗಿದೆ.


ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಹೋರಾಟ


ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಬೃಹತ್ ಹೋರಾಟ ಹಮ್ಮಿಕೊಂಡಿದೆ, ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಕೆಪಿಸಿಸಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಈಗಾಗಲೇ ಫ್ರೀಡಂಪಾರ್ಕ್ ಬಳಿ ಕಾಂಗ್ರೆಸ್ ಬಾವುಟಗಳು ರಾಜಾಜಿಸುತ್ತಿದ್ದು, ರಸ್ತೆಯುದ್ದಕ್ಕೂ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಕಟ್ಟಿದ್ದಾರೆ. ಫ್ರೀಡಂ ಪಾರ್ಕ್ ಬಳಿ ಈಗಾಗಲೇ ವೇದಿಕೆ ಸಿದ್ಧವಾಗಿದ್ದು ಬೆಳಗ್ಗೆ 11ಕ್ಕೆ ಪ್ರತಿಭಟನೆ ಶುರುವಾಗಲಿದೆ.


ರಾಜಭವನ ಮುತ್ತಿಗೆಗೆ ಕಾಂಗ್ರೆಸ್ ನಾಯಕರ ನಿರ್ಧಾರ


ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಬಳಿಕ ರಾಜಭವನಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಫ್ರೀಡಂ ಪಾರ್ಕ್ ನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ರಾಜಭವನ ಚಲೋ‌ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕರು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಹಾಕಲು ಪ್ಲಾನ್ ಮಾಡಿದ್ದಾರೆ.


ಇದನ್ನೂ ಓದಿ: National Herald Case: ಕೈ ಸುಡುತ್ತಿರುವುದೇಕೆ ನ್ಯಾಷನಲ್ ಹೆರಾಲ್ಡ್ ಕೇಸ್? ಅಷ್ಟಕ್ಕೂ ನೆಹರೂ ಕುಟುಂಬದ ವಿರುದ್ಧ ಏನಿದು ಆರೋಪ?


ಯಾವುದೇ ರ್ಯಾಲಿಗೆ ಅವಕಾಶವಿಲ್ಲ ಎಂದ ಪೊಲೀಸರು


ಇನ್ನು ಬೆಂಗಳೂರಲ್ಲಿ ಯಾವುದೇ ರ್ಯಾಲಿಗಳಿಗೆ ಅವಕಾಶ ಇಲ್ಲ ಅಂತ ಪೊಲೀಸರು ಹೇಳಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದ್ದು, ಎಲ್ಲಾ ಕಾಂಗ್ರೆಸ್ ನಾಯಕರು ಫ್ರೀಡಂ ಪಾರ್ಕ್‌ನಲ್ಲಿ ಸೇರಲು ಮಾತ್ರ ಅನುಮತಿ ನೀಡಲಾಗಿದ್ದು, ರ್ಯಾಲಿಗೆ ಅವಕಾಶ ನಿರಾಕಸಲಾಗಿದೆ ಎನ್ನಲಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆಯ ಸ್ಥಳದಲ್ಲಿ ಕೆಎಸ್ಆರ್‌ಪಿ ತುಕಡಿಗಳು ಬೀಡು ಬಿಟ್ಟಿವೆ.


ಪರಿಸ್ಥಿತಿ ನೋಡಿಕೊಂಡು ವಾಹನಗಳ ಡೈವರ್ಷನ್


ಪ್ರತಿಭಟನೆಗೆ ಎಷ್ಟು ಕಾಂಗ್ರೆಸ್ ಕಾರ್ಯಕರ್ತರು ಸೇರ್ತಾರೆ ಅಂತ ನೋಡಿಕೊಂಡು ಮಾರ್ಗ ಬದಲಾವಣೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು ವಾಹನಗಳ ಡೈವರ್ಷನ್ ಮಾಡಲು ನಿರ್ಧರಿಸಿದ್ದು, ಅದುವರೆಗೂ ಯಾವುದೇ ಮಾರ್ಗ ಬದಲಾವಣೆ ಇಲ್ಲ ಎನ್ನಲಾಗಿದೆ.


ಬೆಳಗ್ಗೆ 9 ಗಂಟೆ ಬಳಿಕ ಮಾರ್ಗ ಬದಲಾವಣೆ


ಬೆಳಗ್ಗೆ 9 ಗಂಟೆಯ ಬಳಿಕ ಮಾರ್ಗ ಬದಲಾವಣೆಗೆ ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ. ಮೆಜೆಸ್ಟಿಕ್ ನಿಂದ ಬರೋ ವಾಹನಗಳು ಮೌರ್ಯ ಸರ್ಕಲ್, ಹಳೇ ಜೆಡಿಎಸ್ ಕಚೇರಿ, ರೇಸ್ ಕೋರ್ಸ್ ರಸ್ತೆ, ಸಿಐಡಿ ಜಂಕ್ಷನ್, ಮಹಾರಾಣಿ ಜಂಕ್ಷನ್ , ಕೆ.ಆರ್ ಸರ್ಕಲ್ ಮೂಲಕ ಹೋಗುವಂತೆ ಸಿದ್ದತೆ ಮಾಡಲಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ರಸ್ತೆಯುದ್ದಕ್ಕೂ ಟ್ರಾಫಿಕ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.


ಇದನ್ನೂ ಓದಿ: National Herald Case: ಇಂದು ಇಡಿ‌ ವಿಚಾರಣೆಗೆ ಹಾಜರಾಗಲಿರುವ ಸೋನಿಯಾ ಗಾಂಧಿ


ಸಂಸತ್ ಕಲಾಪದ ವೇಳೆ ಕಾಂಗ್ರೆಸ್ ಪ್ರತಿಭಟನೆಗೆ ನಿರ್ಧಾರ


ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್  ನಾಯಕು ಸಂಸತ್ ಅಧಿವೇಶನದಲ್ಲೂ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಸಂಸತ್ ಕಲಾಪದ ವೇಳೆ ಪ್ರತಿಭಟನೆ ನಡೆಸಲಿರುವ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ನಡೆಯುತ್ತಿದೆ ಅಂತ ಆರೋಪಿಸಲಿದ್ದಾರೆ. ಸಂಸತ್ ಕಲಾಪದ ಬಳಿಕ ಎಐಸಿಸಿ ಕಚೇರಿಗೆ ತೆರಳಲಿರುವ ಕಾಂಗ್ರೆಸ್ ಸಂಸದರು, ಅಲ್ಲೂ ಕೂಡ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು