ಭೂ ಸುಧಾರಣೆ ಕಾಯ್ದೆಗೆ ಮೊದಲು ಬದಲಾವಣೆ ತಂದಿದ್ದೇ ಕಾಂಗ್ರೆಸ್; ಕಂದಾಯ ಸಚಿವ ಆರ್.ಅಶೋಕ್

ವಿಧಾನ ಪರಿಷತ್ ಗೆ ನಮ್ಮ ಕಾರ್ಯಕರ್ತರೂ ಹೋಗುತ್ತಾರೆ, ಸರ್ಕಾರ ಬರಲು ಸಹಾಯ ಮಾಡಿದವರೂ ಹೋಗುತ್ತಾರೆ. ಸಚಿವ ಸ್ಥಾನ ತ್ಯಾಗ ‌ಮಾಡಿದವರನ್ನೂ ನೆನಪು ಮಾಡಿಕೊಳ್ಳುತ್ತೇವೆ. ಅವರ ಋಣ ತೀರಿಸುವ ಕೆಲಸ ಕೂಡ ಮಾಡುತ್ತೇವೆ ಎಂದು ಹೇಳಿದರು.

news18-kannada
Updated:June 13, 2020, 3:34 PM IST
ಭೂ ಸುಧಾರಣೆ ಕಾಯ್ದೆಗೆ ಮೊದಲು ಬದಲಾವಣೆ ತಂದಿದ್ದೇ ಕಾಂಗ್ರೆಸ್; ಕಂದಾಯ ಸಚಿವ ಆರ್.ಅಶೋಕ್
ಸಚಿವ ಆರ್​.ಅಶೋಕ್​
  • Share this:
ಬೆಂಗಳೂರು: ಎಲ್ಲರಿಗೂ ಮನಸ್ಸಿನಲ್ಲಿಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬೇಕು ಅಂತಾನೇ ಇದೆ. ಕಾಂಗ್ರೆಸ್ ಈ ಕಾಯ್ದೆಗೆ 1992 ರಲ್ಲೇ ಮೊದಲು ಬದಲಾವಣೆ ತಂದಿತ್ತು.  ಸಿದ್ಧರಾಮಯ್ಯ ಸರ್ಕಾರದಲ್ಲಿ ಮಿತಿಯನ್ನು 25 ಲಕ್ಷಕ್ಕೆ ಏರಿಸಿ ಮತ್ತೊಂದು ಬದಲಾವಣೆ ತರಲಾಗಿತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ಕಾಯ್ದೆ ತಿದ್ದುಪಡಿಯಿಂದ ಉದ್ಯೋಗಿಗಳು ವಾಪಸ್ ಹಳ್ಳಿಗೆ ಹೋಗಿ ಕೃಷಿ ಮಾಡಲು ಸಹಾಯವಾಗಲಿದೆ. ಪಾಳು ಬಿದ್ದ ಜಮೀನನ್ನು ಮತ್ತೆ ಕೃಷಿಗೆ ತರುವುದರಿಂದ ಕೃಷಿಗೆ ಬೆಲೆ ಬರಲಿದೆ. ಕಾಂಗ್ರೆಸ್​ನವರು ಕೋವಿಡ್​ ಸಮಯನಲ್ಲಿ ಹುಳುಕು ಹುಡುಕುವ ಯತ್ನ ಮಾಡುತ್ತಿದ್ದಾರೆ. ಅವರು ಮೊಸರಿನಲ್ಲಿ ಕಲ್ಲು ಹುಡುಕುತ್ತಾರೆ. ಕಲ್ಲು ಇಲ್ಲದಿದ್ದರೂ ಚಮಚ ಹಾಕಿ ಹುಡುಕುತ್ತಾರೆ. ಸಿಗದಿದ್ದರೆ ಕೈ ಹಾಕಿ ಹುಡುಕುತ್ತಾರೆ. ಕಲ್ಲು ಸಿಗದೇ ಇದ್ದರೂ ಸಿಕ್ಕಿತು ಅಂತಾ ಹೇಳುವ ಪರಿಪಾಠ ಕಾಂಗ್ರೆಸ್ ನದ್ದು. ಯಾರು ಕಾಂಗ್ರೆಸ್​ನಲ್ಲಿ ಪ್ರಮುಖರು ಎಂಬ ಫೈಟ್ ಕಾಂಗ್ರೆಸ್​ನಲ್ಲಿ ನಡೆಯುತ್ತಿದೆ. ನಾನು ಮೊದಲು ಹೇಳಿಕೆ ಕೊಡಬೇಕು ಅಂತಾ ಫೈಟ್ ನಡೆಯುತ್ತಿದೆ. ಅವರೆಲ್ಲರ ಮನಸ್ಸಿನಲ್ಲೂ ಕಾಯ್ದೆ ಬೇಕು ಅಂತಾನೇ ಇದೆ ಎಂದು ಕಾಂಗ್ರೆಸ್ಸಿರಿಗೆ ತಿರುಗೇಟು ನೀಡಿದರು.

ದೇಶದ ಎಲ್ಲಾ ರಾಜ್ಯಗಳಲ್ಲೂ ಇದೇ ಕಾಯ್ದೆ ಇದೆ. ಅವರು ಕೃಷಿಯಲ್ಲಿ ನಮ್ಮಿಂದ ಮುಂದೆ ಇಲ್ವಾ? ಹಳೇ ಕಾಯ್ದೆ ಎಸಿಗಳಿಗೆ ಹಣ ಮಾಡಿಲು ಒಂದು ದಂಧೆ ಆಗಿತ್ತು ಅಷ್ಟೇ. ಎಸಿ ಕಚೇರಿಗಳಲ್ಲಿ ನಡೆಯುತ್ತಿರುವ ದಂಧೆಗೆ ಅಂತ್ಯ ಹಾಡಲು ಈ ಕಾಯ್ದೆ ತರಲಾಗಿದೆ. ನಾವೂ ಕೂಡ ಕೈ ಬಿಟ್ಟೇ ಬೇರೆ ರಾಜ್ಯಗಳ ಜೊತೆ ಸ್ಫರ್ಧೆ ಮಾಡಬೇಕು. ಒಂದು ಕುಟುಂಬದಲ್ಲಿ5 ಜನ ಇದ್ದರೆ ಮಾತ್ರ 108 ಎಕರೆ ಮಾತ್ರ ಖರೀದಿ ಮಾಡಬಹುದು ಎಂದು ಹೇಳಿದರು.

ಬೆಂಗಳೂರು ಮತ್ತು ನಗರ ಪ್ರದೇಶಗಳಲ್ಲಿ ಮನೆ ಅಕ್ರಮ ಸಕ್ರಮ ಮಾಡಲು ಕಾಯುತ್ತಿದ್ದಾರೆ. ಕರ್ನಾಟಕ ನಗರ ಮತ್ತು ರೂರಲ್ ಪ್ಲಾನಿಂಗ್ ಆಕ್ಟ್ ನಲ್ಲಿ ಬದಲಾವಣೆ ತರಲು ಮುಂದಾಗಿದ್ದೇವೆ. ಅದಕ್ಕಾಗಿ ಅಧಿಕಾರಿಗಳ ತಂಡ ರಚನೆ ಮಾಡಿದ್ದೇವೆ. ಕಟ್ಟಡ, ನಿವೇಶನ, ಮನೆ ಅಕ್ರಮ ಸಕ್ರಮ ಮಾಡಲು ಶೀಘ್ರ ತಿದ್ದುಪಡಿ ಮಾಡುವವರಿದ್ದೇವೆ ಎಂದು ತಿಳಿಸಿದರು.

ಇದನ್ನು ಓದಿ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಎಲ್ಲರಿಗೂ ಅನುಕೂಲ, ಮುಂದೆ ಸಿದ್ದರಾಮಯ್ಯರಿಗೂ ಇದು ಗೊತ್ತಾಗುತ್ತದೆ; ಸಿಎಂ ಬಿಎಸ್​ವೈ

ವಿಧಾನಪರಿಷತ್ ಚುನಾವಣೆ ಟಿಕೆಟ್ ಅನ್ನು ಕಾರ್ಯಕರ್ತರಿಗೂ ಕೊಡಬೇಕು ಎಂಬ ಸಚಿವ ಸಿ.ಟಿ. ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಆರ್.ಅಶೋಕ್ ಅವರು, ಸಿ.ಟಿ. ರವಿ ನನ್ನ ತಮ್ಮ ಇದ್ದ ಹಾಗೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಿನ್ನೆ ಹೇಳಿಕೆ ನೀಡುವ ಮೊದಲು ನನ್ನ ಜೊತೆ ಸಿ ಟಿ ರವಿ ಮಾತಾಡಿದ್ದಾರೆ. ರವಿ ಹೇಳಿಕೆಯಲ್ಲಿ ಏನೂ ರಿವರ್ಸ್ ಇಲ್ಲ. ಕಾರ್ಯಕರ್ತರನ್ನೂ ಪರಿಗಣಿಸಬೇಕು ಎಂಬುದು ಅವರ ದೃಷ್ಟಿ. ಆದರೆ ಸರ್ಕಾರ ಬರಲು ಕಾರಣರಾದವರು ಕೂಡ ಇದ್ದಾರೆ. ಅಂದು ನಾವು ಮಾತು ಕೊಟ್ಟಿದ್ದೇವೆ. ಮಾತು ತಪ್ಪಿದ ಮಗ ಎಂಬ ಆಪಾದನೆಗೆ ನಾವು ಸಿಲುಕಲ್ಲ. ಏನು ಮಾತು ಕೊಟ್ಟಿದ್ದೇವೋ ಅದನ್ನು ನಡೆಸಿಕೊಳ್ಳುತ್ತೇವೆ.  ವಿಧಾನ ಪರಿಷತ್ ಗೆ ನಮ್ಮ ಕಾರ್ಯಕರ್ತರೂ ಹೋಗುತ್ತಾರೆ, ಸರ್ಕಾರ ಬರಲು ಸಹಾಯ ಮಾಡಿದವರೂ ಹೋಗುತ್ತಾರೆ. ಸಚಿವ ಸ್ಥಾನ ತ್ಯಾಗ ‌ಮಾಡಿದವರನ್ನೂ ನೆನಪು ಮಾಡಿಕೊಳ್ಳುತ್ತೇವೆ. ಅವರ ಋಣ ತೀರಿಸುವ ಕೆಲಸ ಕೂಡ ಮಾಡುತ್ತೇವೆ ಎಂದು ಹೇಳಿದರು.
First published: June 13, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading