ಟ್ವಿಟರ್​ನಲ್ಲಿ 'ಹೌದೋ ಹುಲಿಯಾ' ಪದ ಬಳಸಿಕೊಂಡು ಅನರ್ಹರು, ಬಿಜೆಪಿ ಟೀಕೆ ಮಾಡಿದ ಕಾಂಗ್ರೆಸ್

ಸಭಿಕರ ಸಾಲಿನಿಲ್ಲಿದ್ದ ವ್ಯಕ್ತಿಯೊಬ್ಬರು ಹೌದು ಹುಲಿಯಾ ಎಂದು ಕೂಗುತ್ತಾರೆ. ಇದಕ್ಕೆ ಗರಂ ಆಗುವ ಸಿದ್ದರಾಮಯ್ಯ ಅವರು ಆ ವ್ಯಕ್ತಿಯನ್ನು ಗದರಿಸಿ ಸುಮ್ಮನಿರಿಸುತ್ತಾರೆ. ಆ ವಿಡಿಯೋ ಎಲ್ಲೆಡೆ ವೈರಲ್ ಆದ ಬಳಿಕ ಹೌದು ಹುಲಿಯಾ ಡೈಲಾಗ್ ಕೂಡ ಅಷ್ಟೇ ಫೇಮಸ್ ಆಗಿದೆ.

ಕಾಂಗ್ರೆಸ್ ಮಾಡಿರುವ ಟ್ವಿಟ್

ಕಾಂಗ್ರೆಸ್ ಮಾಡಿರುವ ಟ್ವಿಟ್

  • Share this:
ಬೆಂಗಳೂರು: 'ಹೌದೋ ಹುಲಿಯಾ' ಡೈಲಾಗ್ ಇದೀಗ ಕರ್ನಾಟಕದಲ್ಲಿ ಸಾಕಷ್ಟು ಟ್ರೆಂಡ್ ಸೃಷ್ಟಿಸಿದೆ. ಸಿದ್ದರಾಮಯ್ಯ ಅವರ ಭಾಷಣದ ವೇಳೆ ಅಭಿಮಾನಿಯೊಬ್ಬರು ಹೇಳಿದ ಹೌದೋ ಹುಲಿಯಾ ಎಲ್ಲರ ಫೇವರೆಟ್ ಆಗಿದ್ದು, ಟಿಕ್​ಟಾಕ್​ ಸ್ವಘೋಷಿತ ನಟ-ನಟಿಯರಂತು ಈ ಪದದ ಹಿಂದೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೇ. ಸ್ವತಃ ಕಾಂಗ್ರೆಸ್​ ಕೂಡ ಈ ಪದಕ್ಕೆ ಮಾರುಹೋಗಿ, ಅದೇ ಪದವನ್ನು ತನ್ನ ಟ್ವಟರ್ ಖಾತೆಯಲ್ಲಿ ಬಳಸಿಕೊಂಡಿದೆ.

ಅನರ್ಹ ಶಾಸಕರು, ಆಪರೇಷನ್ ಕಮಲ, ಸ್ವಾಭಿಮಾನಿ ಮತದಾರರು ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಹೌದೋ ಹುಲಿಯಾ ಪದವನ್ನು ಜಾಣ್ಮೆಯಿಂದ ಬಳಸಿಕೊಂಡಿದೆ. "ರಾಜ್ಯದ ಸ್ವಾಭಿಮಾನಿ ಮತದಾರರ, ಹಣ ಅಧಿಕಾರಕ್ಕಾಗಿ ತನ್ನನ್ನು ಬಿಜೆಪಿಗೆ ಮಾರಿಕೊಂಡ ಈ ಅನರ್ಹ ಬಂದಾಗ, ಛೀಮಾರಿ ಹಾಕಿದೆ, ಬಹಿಷ್ಕಾರ ಹಾಕಿದೆ, ಧಿಕ್ಕಾರ ಹಾಕಿದೆ, ಆಕ್ರೋಶ ವ್ಯಕ್ತಪಡಿಸಿದೆ, ಪ್ರಶ್ನೆಗಳ ಸುರಿಮಳೆಗೈದೆ, ಮತ ನೀಡುವುದಿಲ್ಲ ಎಂದೆ," ಎಂದು ಬರೆದು ಕೆಳಗೆ "ಹೌದೋ ಹುಲಿಯಾ" ಎಂಬ ಪದವನ್ನು ಬರೆದಿದೆ.ಇದನ್ನು ಓದಿ: Karnataka ByPolls : ಶ್ರೀರಾಮುಲು ನನ್ನ ಜೊತೆ ಮಾತೇ ಆಡುವುದಿಲ್ಲ; ಸಿದ್ದರಾಮಯ್ಯ ದೂರು

ಕಾಗವಾಡ ಉಪಚುನಾವಣೆಯ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಈ ಅಪರೂಪದ ಪದ ಚಾಲ್ತಿಗೆ ಬಂದಿತು. ಇಂದಿರಾ ಗಾಂಧಿ ಈ ದೇಶಕ್ಕೆ ಪ್ರಾಣ ಕೊಟ್ಟರು ಎಂದು ಸಿದ್ದರಾಮಯ್ಯ ಹೇಳಿದ ತಕ್ಷಣ ಸಭಿಕರ ಸಾಲಿನಿಲ್ಲಿದ್ದ ವ್ಯಕ್ತಿಯೊಬ್ಬರು ಹೌದು ಹುಲಿಯಾ ಎಂದು ಕೂಗುತ್ತಾರೆ. ಇದಕ್ಕೆ ಗರಂ ಆಗುವ ಸಿದ್ದರಾಮಯ್ಯ ಅವರು ಆ ವ್ಯಕ್ತಿಯನ್ನು ಗದರಿಸಿ ಸುಮ್ಮನಿರಿಸುತ್ತಾರೆ. ಆ ವಿಡಿಯೋ ಎಲ್ಲೆಡೆ ವೈರಲ್ ಆದ ಬಳಿಕ ಹೌದು ಹುಲಿಯಾ ಡೈಲಾಗ್ ಕೂಡ ಅಷ್ಟೇ ಫೇಮಸ್ ಆಗಿದೆ.

https://www.facebook.com/NammaUttaraKarnaataka/videos/577873619694243/
Published by:HR Ramesh
First published: