• Home
  • »
  • News
  • »
  • state
  • »
  • Karnataka Tweet: ರಾಮುಲು ಪೆದ್ದ ಎಂದು ಅವ್ರೇ ಒಪ್ಪಿಕೊಂಡಿದ್ದಾರೆ; ಸಿದ್ದು ಹೇಳಿದ್ದು ಅಪ್ಪಟ ಸತ್ಯ ಎಂದು ಕಾಂಗ್ರೆಸ್​ ಟ್ವೀಟ್​

Karnataka Tweet: ರಾಮುಲು ಪೆದ್ದ ಎಂದು ಅವ್ರೇ ಒಪ್ಪಿಕೊಂಡಿದ್ದಾರೆ; ಸಿದ್ದು ಹೇಳಿದ್ದು ಅಪ್ಪಟ ಸತ್ಯ ಎಂದು ಕಾಂಗ್ರೆಸ್​ ಟ್ವೀಟ್​

ಸಿದ್ದರಾಮಯ್ಯ, ಶ್ರೀರಾಮುಲು

ಸಿದ್ದರಾಮಯ್ಯ, ಶ್ರೀರಾಮುಲು

ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಹಾಗಾದ್ರೆ ಯತ್ನಾಳ್ ಯಾವ ಪಕ್ಷದ ನಾಯಕರು?, ಯತ್ನಾಳರನ್ನು ಉಚ್ಛಾಟನೆ ಮಾಡುವಿರಾ? ಎಂದು ಕಾಂಗ್ರೆಸ್ ಟ್ವೀಟ್​ ಮೂಲಕ ಪ್ರಶ್ನೆ ಮಾಡಿದ್ದಾರೆ.

  • Share this:

ರಾಮುಲು ಪೆದ್ದ ಎಂಬುದನ್ನು ಸ್ವತಃ ಶ್ರೀರಾಮುಲು (Sri Ramulu) ಅವರೇ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್​ (Congress Tweet) ಮೂಲಕ ಲೇವಡಿ ಮಾಡಿದ್ದಾರೆ.  ರಾಜ್ಯ ಕಾಂಗ್ರೆಸ್ ಹಾಗೂ ಸಿದ್ಧರಾಮಯ್ಯ ಹೇಳಿದ್ದು ಅಪ್ಪಟ ಸತ್ಯ ಅಲ್ಲವಾ? ಬುದ್ದಿ ಇಲ್ಲದವರನ್ನು ಪೆದ್ದ ಎಂದೇ ಕರೆಯುವುದು. ಹೀಗಾಗಿಯೇ ಬಿಜೆಪಿಯನ್ನು(BJP) ಗಾಂಪರ ಗುಂಪು ಎಂದು ಕರೆಯುತ್ತೇವೆ ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್ ಮೂಲಕ ಲೇವಡಿ ಮಾಡಿದೆ.  


ಯತ್ನಾಳ್ ಯಾವ ಪಕ್ಷದ ನಾಯಕರು?


ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ನಮ್ಮ ಪಕ್ಷದವರಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ಸಿಂಗ್​ ಹೇಳಿದ್ರು. ಇದಕ್ಕೆ ಕಾಂಗ್ರೆಸ್​ ಟ್ವೀಟ್  ಮೂಲಕ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ. ಯತ್ನಾಳ್ ಯಾವ ಪಕ್ಷದ ನಾಯಕರು ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ನಾಯಕರಿಗೆ ಟ್ವೀಟ್ ಮೂಲಕ ಪ್ರಶ್ನೆ ಕೇಳಿದೆ.ಯತ್ನಾಳರನ್ನು ಉಚ್ಛಾಟನೆ ಮಾಡುವಿರಾ?


ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಹಾಗಾದ್ರೆ ಯತ್ನಾಳ್ ಯಾವ ಪಕ್ಷದ ನಾಯಕರು?, ಯತ್ನಾಳರನ್ನು ಉಚ್ಛಾಟನೆ ಮಾಡುವಿರಾ?, ಅವರು ಶಾಸಕರು ಅಷ್ಟೇ ಎಂದಿದ್ದಾರೆ ಅರುಣ್ ಸಿಂಗ್, ಅಂದರೆ ಶಾಸಕರೆಂದರೆ ಬಿಜೆಪಿಗೆ ಕೇವಲವೇ ಯತ್ನಾಳರನ್ನು ನಿಯಂತ್ರಿಸಲಾಗದಷ್ಟು ರಾಜ್ಯ ಬಿಜೆಪಿ ಅಸಹಾಯಕವಾಗಿದೆಯೇ ಎಂದು ಟ್ವಿಟ್ಟರ್​ನಲ್ಲಿ ಬಿಜೆಪಿ ನಾಯಕರ ಕಾಲೆಳೆದಿದೆ.


ಕಾಂಗ್ರೆಸ್​ನಿಂದ ಸೇಸಿಎಂ ಕ್ಯಾಂಪೇನ್​


ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪೇಸಿಎಂ ಕ್ಯಾಂಪೇನ್ ಆಯ್ತು, ಈಗ ಕಾಂಗ್ರೆಸ್‌ ನಾಯಕರು ‘ಸೇ ಸಿಎಂ ಕ್ಯಾಂಪೇನ್‌’ (SayCM Campaign) ಶುರು ಮಾಡಿದ್ದಾರೆ. ಪ್ರಣಾಳಿಕೆ ಭರವಸೆಗಳ ಬಗ್ಗೆ ನಿಮ್ಮತ್ರ ಉತ್ತರ ಇದ್ಯಾ ಸಿಎಂ ಬೊಮ್ಮಾಯಿಯವರೇ ಅಂತ ಟ್ವೀಟ್‌ ಮೂಲಕ ಕ್ಯಾಂಪೇನ್ ಶುರು ಮಾಡಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ (Priyank Kharge) ಮಾತನಾಡಿದ್ದು, ಬಿಜೆಪಿ ಪ್ರಣಾಳಿಕೆಯಲ್ಲಿ‌ ನೀಡಿದ್ದ 10% ಭರವಸೆ ಈಡೇರಿಸಿಲ್ಲ, ಬಿಜೆಪಿ (BJP) ಅವ್ರು ಪ್ರಣಾಳಿಕೆಯಲ್ಲಿ 600ಕ್ಕೂ ಹಚ್ಚು ಭರವಸೆ ನೀಡಿದ್ರು. ಆದ್ರೆ ಈಡೇರಿಸುವ ಕೆಲಸ ಮಾಡಿಲ್ಲ ಅಂತ ಕಿಡಿಕಾರಿದ್ರು.


ಅಭಿಯಾನದ ಮೂಲಕ 50 ಪ್ರಶ್ನೆ ಕೇಳಿದ ಕಾಂಗ್ರೆಸ್​


ಕಾಂಗ್ರೆಸ್ ಪಕ್ಷ ಅಭಿಯಾನದ ಮೂಲಕ ಇಂದು 50ನೇ ಪ್ರಶ್ನೆ ಕೇಳುತ್ತಿದ್ದು, ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಪೇಸಿಎಂ ಅಭಿಯಾನದ ಜತೆಗೆ ನಾವು SayCM ಆಂದೋಲನವನ್ನು ನಡೆಸಬೇಕಿದೆ. ಸರ್ಕಾರ ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ. ನೀವು ಈ ಪ್ರಣಾಳಿಕೆ ಮೂಲಕ ಜನರಿಂದ ಮತ ಹಾಕಿಸಿಕೊಂಡಿದ್ದೀರಿ. ಹೀಗಾಗಿ ನೀವು ಜನರಿಗೆ ಉತ್ತರಿಸಬೇಕು.


ಇದನ್ನೂ ಓದಿ: Potholes in Bengaluru: ಅಪಘಾತ ತಪ್ಪಿಸಲು ಅಖಾಡಕ್ಕಿಳಿದ ಖಾಕಿ! ಟ್ರಾಫಿಕ್ ಪೊಲೀಸರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ


ಹೆಣದ ಮೇಲೆ ರಾಜಕೀಯ ಮಾಡಲು ನಾಚಿಕೆಯಾಗಲ್ವಾ?


ಹೆಣದ ಮೇಲೆ ರಾಜಕೀಯ ಮಾಡಲು ನಾಚಿಕೆಯಾಗುವುದಿಲ್ಲವೇ? ನೀವು ರಾಜಕೀಯಕ್ಕಾಗಿ ಯಾರನ್ನು ಬೇಕಾದರೂ ಬಲಿ ತೆಗೆದುಕೊಳ್ಳುತ್ತೀರಾ? ಯುವಕರ ಭವಿಷ್ಯಕ್ಕೆ ಕಿಮ್ಮತ್ತಿಲ್ಲವೇ? ನೀವೆಂತಾ ನಾಯಕರು? ನಿಮ್ಮ ಪ್ರತ್ರಿಕಾ ಹೇಳಿಕೆಯಲ್ಲಿ ಪರೇಶ್ ಹತ್ಯೆಯ ಬಗ್ಗೆ ಗ್ರಾಫಿಕ್ ಡೀಟೇಲ್ಸ್ ಎಂದು ಹೇಳಿದ್ದೀರಿ. ಈ ಮಾಹಿತಿಯನ್ನು ಸಿಬಿಐಗೆ ನೀಡಿಲ್ಲ ಏಕೆ? ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾಹಿತಿ ಹೇಳಿದರೆ ನನಗೆ ನೊಟೀಸ್ ನೀಡಿದ್ದರು, ಪೇಸಿಎಂ ಪೋಸ್ಟರ್ ಅಂಟಿಸಿದವರಿಗೆ ಸಿಸಿಬಿ ಪ್ರಕರಣ. ಆದರೆ ಹಿಂದೂ ಕಾರ್ಯಕರ್ತ ಸಾವು ಹೇಗಾಗಿದೆ ಎಂದು ಗೊತ್ತಿರುವಾಗ ಅವರಿಗೆ ಸಾಕ್ಷಿ ನೀಡಿ ಎಂದು ಈ ಸರ್ಕಾರ ಕೇಳಿಲ್ಲ. ನಾನು ಅತ್ತಂಗೆ ಮಾಡುತ್ತೇನೆ, ನೀನು ಚಿವುಟಿದಂತೆ ಮಾಡುವ ಪ್ರಯತ್ನವೇ?

Published by:ಪಾವನ ಎಚ್ ಎಸ್
First published: