• Home
 • »
 • News
 • »
 • state
 • »
 • Congress Tweet: ಬಿಜೆಪಿ ಕೆಟ್ಟು ನಿಂತಿರುವ ಡಕೋಟ ಇಂಜಿನ್​, ರಾಮುಲು ಹೋರಾಟದ ಬಗ್ಗೆಯೂ ಕಾಂಗ್ರೆಸ್​ ವ್ಯಂಗ್ಯ

Congress Tweet: ಬಿಜೆಪಿ ಕೆಟ್ಟು ನಿಂತಿರುವ ಡಕೋಟ ಇಂಜಿನ್​, ರಾಮುಲು ಹೋರಾಟದ ಬಗ್ಗೆಯೂ ಕಾಂಗ್ರೆಸ್​ ವ್ಯಂಗ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕ್ಯಾಬಿನೆಟ್ ಸಚಿವರು ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಸ್ಥಿತಿ ಬಂದಿದ್ದೇಕೆ? ಎಂದು ಟ್ವೀಟ್​ ಮೂಲಕ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

 • News18 Kannada
 • Last Updated :
 • Karnataka, India
 • Share this:

  ಕೇಂದ್ರದಲ್ಲೂ ಬಿಜೆಪಿ (BJP), ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ತಮ್ಮದು ಡಬಲ್ ಇಂಜಿನ್ ಸರ್ಕಾರ, ಡಬಲ್ ಇಂಜಿನ್ (Double Engine) ಹಾಗೇ ಕೆಲಸ ಮಾಡುತ್ತೇವೆ, ಸ್ವರ್ಗವನ್ನೇ ಧರೆಗಿಳಿಸುತ್ತೇವೆ ಎಂದು ಮಾತನಾಡುತ್ತಾರೆ. ಆದರೆ ವಾಸ್ತವದಲ್ಲಿ ಬಿಜೆಪಿ ಡಬಲ್ ಅಲ್ಲ, ಸಿಂಗಲ್ ಇಂಜಿನ್ ಆಗಿಯೂ ಕೆಲಸ ಮಾಡುತ್ತಿಲ್ಲ. ಇದೊಂದು ಕೆಟ್ಟು ನಿಂತಿರುವ ಡಕೋಟ ಇಂಜಿನ್ ಎಂದು ಕಾಂಗ್ರೆಸ್​ ಕಿಡಿಕಾರಿದೆ. ಟ್ವೀಟ್​ ಮೂಲಕ ಕಿಡಿಕಾರಿದ ಕಾಂಗ್ರೆಸ್, ಬಿಜೆಪಿ (Congress BJP) ಮುಂದೆ ಹಲವು ಪ್ರಶ್ನೆ ಮುಂದಿಟ್ಟಿದೆ.

  ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಹಣದಾಸೆ


  ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಆಪರೇಷನ್ ಕಮಲ ಮೂಲಕ ಭ್ರಷ್ಟಾಚಾರದ ಹಣದಿಂದ ಖರೀದಿಸಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಹಣ ಮಾಡಿಕೊಳ್ಳುವ ಉದ್ದೇಶದ ಹೊರತಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಬದ್ಧತೆ ಇರಲು ಹೇಗೆ ಸಾಧ್ಯ? ಹಾಗಾಗಿ ರಾಜ್ಯದಲ್ಲಿ ಯಾವುದಾದರೂ ಸಮಸ್ಯೆ ಬಂತೆಂದರೆ ಸರ್ಕಾರವಾಗಿ ನಿರ್ಣಯಾತ್ಮಕವಾಗಿ ತೀರ್ಮಾನಗಳನ್ನು ಕೈಗೊಂಡು ಅವುಗಳನ್ನು ಪರಿಹರಿಸುವ ಬದಲಿಗೆ, ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಹೇಳುತ್ತಾರೆ.


  ರಾಮುಲು ಪ್ರತಿಭಟನೆ ಬಗ್ಗೆ ವ್ಯಂಗ್ಯ


  ಇಲ್ಲವೇ ತಾವೇ ಅಸಹಾಯಕರಂತೆ ಪ್ರತಿಭಟನೆಗೆ ಇಳಿಯುತ್ತಾರೆ. ಅದರಲ್ಲೂ ಸಂಪುಟ ಸಚಿವರಾಗಿರುವ  B ಶ್ರೀರಾಮುಲು ಅವರು ಬಳ್ಳಾರಿ ತಾಲೂಕಿನ ಭೈರದೇವನಹಳ್ಳಿ ಬಳಿಯ ಎಲ್‌ಎಲ್‌ಸಿ ಕಾಲುವೆಯ ಪಿಲ್ಲರ್ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಸ್ಥಳದಲ್ಲೇ ಧರಣಿ ನಡೆಸಿದ್ದಾರೆ.


  * ಶ್ರೀರಾಮುಲು ಅವರು ಧರಣಿ ನಡೆಸಿದ್ದು ಯಾರ ವಿರುದ್ಧ?
  * ಅವರದೇ ಸರ್ಕಾರದ ವಿರುದ್ಧವೇ?
  * ಅವರದೇ ಸರ್ಕಾರದ ಮುಖ್ಯಮಂತ್ರಿಗಳ ವಿರುದ್ಧವೇ?
  * ಕೇಂದ್ರದಲ್ಲಿ ಅಧಿಕಾರದಲ್ಲಿರುವ ಅವರದೇ ಸರ್ಕಾರದ ಪ್ರಧಾನಮಂತ್ರಿಗಳ ವಿರುದ್ಧವೇ?
  * ಕ್ಯಾಬಿನೆಟ್ ಸಚಿವರು ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಸ್ಥಿತಿ ಬಂದಿದ್ದೇಕೆ?
  ಶ್ರೀರಾಮುಲು ಅವರೇ ಇಡೀ ಆಡಳಿತ ಯಂತ್ರವೇ ನಿಮ್ಮ ಬಳಿ ಇದೆ, ನೀವು ಸಂಪುಟ ಸಚಿವರು, ಹೀಗಿದ್ದರೂ ತಮ್ಮ ಮಾತನ್ನು ಯಾರೂ ಕೇಳುತ್ತಿಲ್ಲವೇ? ಅಥವಾ ನಿಮ್ಮದೇ ಸರ್ಕಾರದ ಸಚಿವರಾದ ಮಾಧುಸ್ವಾಮಿ ಅವರು ಹೇಳಿರುವಂತೆ ಇದು ಕೇವಲ ತಳ್ಳುವ ಸರ್ಕಾರವೇ?
  ಸಂಪುಟ ಸಚಿವರ ಸ್ಥಿತಿಯೇ ಹೀಗಿದೆ ಎಂದರೆ ರಾಜ್ಯದ ಜನರ ಸ್ಥಿತಿ ಹೇಗಿರಬಹುದು? ಎಂದು ಕಾಂಗ್ರೆಸ್​ ಪ್ರಶ್ನೆ ಮಾಡಿದೆ.


  ಇದನ್ನೂ ಓದಿ: DK Shivakumar: ಡಿಕೆಶಿಗೆ ಕೊಂಚ ನಿರಾಳ; ದೆಹಲಿ ಹೈಕೋರ್ಟ್​​ನಿಂದ EDಗೆ ನೋಟಿಸ್
  ದುರ್ಬಲ ಸರ್ಕಾರದ, ದುರ್ಬಲ ಸಚಿವರು


  ಕೆಲವೊಮ್ಮೆ ಬಿಜೆಪಿಯವರ ನಡವಳಿಕೆಗಳನ್ನು ನೋಡಿದರೆ ರಾಜ್ಯದಲ್ಲಿ ಆಡಳಿತದಲ್ಲಿರುವುದು ಬಿಜೆಪಿ ಪಕ್ಷ ಹೌದೊ, ಅಲ್ಲವೋ ಎನ್ನುವ ಅನುಮಾನ ಬಂದುಬಿಡುತ್ತದೆ. ಸಚಿವರಾಗಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಥವಾ ಅಧಿಕಾರಯುತವಾಗಿ ಅವರನ್ನು ಕೆಲಸಕ್ಕೆ ಹಚ್ಚಿ, ಆಗಬೇಕಾದ ಕೆಲಸವನ್ನು ಮಾಡಿಕೊಳ್ಳಲೂ ಆಗದಿರುವಷ್ಟು ದುರ್ಬಲ ಸರ್ಕಾರದ, ದುರ್ಬಲ ಸಚಿವರು ನಮ್ಮ ರಾಜ್ಯದಲ್ಲಿದ್ದಾರೆ. ಇಂತವರಿಂದ ರಾಜ್ಯದ ಜನತೆ ಇನ್ನೇನು ನಿರೀಕ್ಷಿಸಲು‌ ಸಾಧ್ಯ? ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.


  ಸಾರಿಗೆ ಸಚಿವ ಬಿ.ಶ್ರೀರಾಮುಲು ಮಂಗಳವಾರ ಬಳ್ಳಾರಿ ತಾ. ಪಿಡಿ ಹಳ್ಳಿ ಬಳಿ ವೇದಾವತಿ ನದಿಗೆ ನಿರ್ಮಿಸಿರುವ ಸೇತುವೆ ಸ್ಥಳಕ್ಕೆ ಭೇಟಿ ನೀಡಿದರು. ಸೇತುವೆ ಪಿಲ್ಲರ್ ದುರಸ್ತಿ ಹಿನ್ನೆಲೆ ಕಾಲುವೆಗೆ ನೀರು ಹರಿಯೋದು ಸ್ಥಗಿತಗೊಂಡಿತ್ತು. ಕಾಲುವೆಗೆ ನೀರು ಹರಿಯೋದು ಸ್ಥಗಿತಗೊಂಡಿರುವ ಪರಿಣಾಮ ಲಕ್ಷಾಂತರ ಎಕರೆ ಬೆಳೆ ಹಾನಿ ಆಗಿದೆ ಎಂದು ರೈತರು ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದರು.


  ಇದನ್ನೂ ಓದಿ: DK Shivakumar: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ; ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಿ, ವಲಸಿಗರಿಗೂ ಮುಕ್ತ ಆಹ್ವಾನ- ಡಿಕೆಶಿ


  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಶ್ರೀರಾಮುಲು ಅವರು, ಕಾಮಗಾರಿ ಪೂರ್ಣ ಮುಗಿಯೋವರೆಗೂ ಅಲ್ಲೇ ವಾಸ್ತವ್ಯಕ್ಕೆ ನಿರ್ಧರಿಸಿ ಅಲ್ಲಿಯೇ ರಾತ್ರಿ ಕಳೆದಿದ್ದಾರೆ. ನೀರು ಬಂದ್ ಆಗಿದ್ದು, 20ಕ್ಕೂ ಹೆಚ್ಚು ಹಳ್ಳಿಗಳಿಗೆ ತೊಂದರೆಯಾಗುತ್ತಿದೆ. ರೈತರು ಬೆಳೆದ ಭತ್ತ ಮತ್ತಿತರ ಬೆಳೆ ಒಣಗುತ್ತಿದೆ. ಈ ಹಿನ್ನೆಲೆ ಕಾಮಗಾರಿ ಮುಗಿಯುವರೆಗೂ ಇಲ್ಲಿಯೇ ಇರುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.  Published by:ಪಾವನ ಎಚ್ ಎಸ್
  First published: