ಬಿಜೆಪಿಯ ರಮೇಶ್ ಕತ್ತಿಗೆ ಕಾಂಗ್ರೆಸ್ ಗಾಳ; ಬೆಳಗಾವಿ, ಚಿಕ್ಕೋಡಿ ಎರಡನ್ನೂ ಒಂದೇ ಕಲ್ಲಿನಿಂದ ಹೊಡೆಯಲು ಕೈ ಯತ್ನ

ರಮೇಶ್ ಕತ್ತಿ ಕಾಂಗ್ರೆಸ್​ಗೆ ಬಂದರೆ ಚಿಕ್ಕೋಡಿ ಟಿಕೆಟ್ ಕೊಟ್ಟು, ಪ್ರಕಾಶ್ ಹುಕ್ಕೇರಿ ಅವರನ್ನು ಬೆಳಗಾವಿಯಿಂದ ಕಣಕ್ಕಿಳಿಸುವುದು. ಈ ಮೂಲಕ ಉಮೇಶ್ ಕತ್ತಿಯ ಬೆಂಬಲವನ್ನೂ ಪಡೆದು ಎರಡೂ ಕ್ಷೇತ್ರಗಳನ್ನ ಗೆಲ್ಲುವುದು ಕೈ ತಂತ್ರವಾಗಿದೆ.

Vijayasarthy SN | news18
Updated:March 30, 2019, 8:49 PM IST
ಬಿಜೆಪಿಯ ರಮೇಶ್ ಕತ್ತಿಗೆ ಕಾಂಗ್ರೆಸ್ ಗಾಳ; ಬೆಳಗಾವಿ, ಚಿಕ್ಕೋಡಿ ಎರಡನ್ನೂ ಒಂದೇ ಕಲ್ಲಿನಿಂದ ಹೊಡೆಯಲು ಕೈ ಯತ್ನ
ಉಮೇಶ್ ಕತ್ತಿ ಜೊತೆ ಅಣ್ಣಾ ಸಾಹೇಬ್ ಜೊಲ್ಲೆ
 • News18
 • Last Updated: March 30, 2019, 8:49 PM IST
 • Share this:
ಬೆಳಗಾವಿ(ಮಾ. 30): ಚಿಕ್ಕೋಡಿ ಮತಕ್ಷೇತ್ರದಲ್ಲಿ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್ ಸಿಗುತ್ತಿದ್ದಂತೆಯೇ ಪಕ್ಷದೊಳಗೆ ಒಳಗೊಳಗೆ ಬಂಡಾಯದ ಕಾವು ಏರುತ್ತಿದೆ. ಶಾಸಕ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಟಿಕೆಟ್ ಸಿಗುತ್ತದೆಂದು ಅದಮ್ಯ ಆತ್ಮವಿಶ್ವಾಸದಲ್ಲಿದ್ದರು. ಅದರೆ, ಬಿಜೆಪಿ ನಾಯಕರ ತಲೆಯಲ್ಲಿ ಬೇರೆಯೇ ಕಾರ್ಯತಂತ್ರವಿದ್ದು, ಜೊಲ್ಲೆ ಅವರಿಗೆ ಮಣೆಹಾಕಿದೆ. ಆದರೆ, ರಮೇಶ್ ಕತ್ತಿ ಅವರಿಗೆ ಟಿಕೆಟ್ ನಿರಾಕರಿಸಿರುವುದು ಬೆಳಗಾವಿಯ ಪ್ರಬಲ ಕತ್ತಿ ಕುಟುಂಬಕ್ಕೆ ಇರಿಸುಮುರುಸು ತಂದಿದೆ.

ರಮೇಶ್ ಕತ್ತಿಗೆ ಟಿಕೆಟ್ ನಿರಾಕರಿಸಿದಾಗಿನಿಂದಲೂ ಅವರನ್ನು ಕಾಂಗ್ರೆಸ್​ನತ್ತ ಸೆಳೆದುಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆದಿರುವುದು ಸುಳ್ಳಲ್ಲ. ರಮೇಶ್ ಕತ್ತಿ ಕಾಂಗ್ರೆಸ್​ಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಬೆಳಗಾವಿಯ ಪ್ರಬಲ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಕೆಲ ಮೂಲಗಳ ಪ್ರಕಾರ, ರಮೇಶ್ ಕತ್ತಿ ಅವರು ನಾಳೆ ರಾಹುಲ್ ಗಾಂಧಿ ಉಪಸ್ಥಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ. ಆದರೆ, ಉಮೇಶ್ ಕತ್ತಿ ಅವರು ತಮ್ಮ ಸೋದರನಿಗೆ ಬಿಜೆಪಿ ಟಿಕೆಟ್ ದೊರಕಿಸಿಕೊಡಲು ಇನ್ನೂ ಪ್ರಯತ್ನ ಮಾಡುತ್ತಲೇ ಇದ್ದಾರೆ. ಏಪ್ರಿಲ್ 4ರವರೆಗೂ ಅವಕಾಶ ಇದೆ. ಅಲ್ಲಿಯವರೆಗೂ ಕಾದು ನೋಡಲು ನಿರ್ಧರಿಸಿರುವುದಾಗಿ ಉಮೇಶ್ ಕತ್ತಿ ನಿನ್ನೆ ಹೇಳಿದ್ದರು.

ಇದನ್ನೂ ಓದಿ: ಉಪೇಂದ್ರ ನೇತೃತ್ವದ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ; ಏ. 1ರಿಂದ ಉಪ್ಪಿ ಪ್ರಚಾರ

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೈ ತಂತ್ರ:

ಒಂದು ವೇಳೆ, ರಮೇಶ್ ಕತ್ತಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಅವರಿಗೆ ಚಿಕ್ಕೋಡಿ ಕ್ಷೇತ್ರದ ಕೈ ಟಿಕೆಟ್ ಕೊಡುವ ಸಾಧ್ಯತೆ ಇದೆ. ಈಗಾಗಲೇ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಕಾಶ್ ಹುಕ್ಕೇರಿ ಅವರನ್ನು ಬೆಳಗಾವಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಂತೆ ಮಾಡಬಹುದು. ಬೆಳಗಾವಿಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದಿರುವ ಸಾಧುನವರ್ ಅವರನ್ನ ಮನವೊಲಿಸಿ ಪ್ರಕಾಶ್ ಹುಕ್ಕೇರಿಗೆ ಬೆಂಬಲ ಕೊಡುವಂತೆ ಮಾಡುವುದು ಕಾಂಗ್ರೆಸ್ ತಂತ್ರ.

ಇದನ್ನೂ ಓದಿ: ದೇವೇಗೌಡರ ಬಗ್ಗೆ ಗೌರವವಿದೆಯೇ ವಿನಃ ನಂಬಿಕೆಯಿಲ್ಲ; ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್​

ಒಂದು ವೇಳೆ, ಚಿಕ್ಕೋಡಿಯಲ್ಲಿ ತನ್ನ ಸೋದರ ರಮೇಶ್ ಕತ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದೇ ಆದಲ್ಲಿ, ಬೆಳಗಾವಿಯಲ್ಲಿ ಕಾಂಗ್ರೆಸ್​ಗೆ ಬೆಂಬಲವಾಗಿ ನಿಲ್ಲಲು ಉಮೇಶ್ ಕತ್ತಿ ನಿರ್ಧರಿಸಿರುವುದು ತಿಳಿದುಬಂದಿದೆ. ಬೆಳಗಾವಿಯಲ್ಲಿ ಪ್ರಕಾಶ್ ಹುಕ್ಕೇರಿ ಅವರಿಗೆ ಟಿಕೆಟ್ ನೀಡಿದರೆ ತಾವು ಅವರನ್ನು ಬೆಂಬಲಿಸುತ್ತೇನೆ ಎಂದು ಕತ್ತಿ ತಿಳಿಸಿದ್ದಾರೆ. ಈ ಮೂಲಕ ಚಿಕ್ಕೋಡಿ ಮತ್ತು ಬೆಳಗಾವಿ ಎರಡೂ ಕ್ಷೇತ್ರಗಳನ್ನ ಗೆಲ್ಲಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.ಇದೇ ವೇಳೆ, ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ ಅವರು ಉಮೇಶ್ ಕತ್ತಿ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ರಮೇಶ್ ಕತ್ತಿ ಬಂಡಾಯವೇಳದಂತೆ ತಡೆಯಲು ಜೊಲ್ಲೆ ಪ್ರಯತ್ನ ಮಾಡುತ್ತಿದ್ದಾರೆ. ಅಂತಿಮವಾಗಿ, ಜೊಲ್ಲೆಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಚಿಕ್ಕೋಡಿ ಮತ್ತು ಬೆಳಗಾವಿ ಎರಡರಲ್ಲೂ ಸಂಕಷ್ಟ ತಂದುಕೊಳ್ಳುತ್ತದಾ ಕಾದು ನೋಡಬೇಕು.

(ವರದಿ: ಶ್ರೀನಿವಾಸ ಹಳಕಟ್ಟಿ)
First published:March 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres