HOME » NEWS » State » CONGRESS TO AGGRESSIVELY RAISE QUESTIONS ABOUT CAA AND FLOOD VICTIMS BUDGET SESSION GNR

ಫೆ.17ಕ್ಕೆ ಜಂಟಿ ಅಧಿವೇಶನ; ಮಾ.5ಕ್ಕೆ ಬಜೆಟ್ ಮಂಡನೆ; ಬಿಜೆಪಿ ಕಟ್ಟಿಹಾಕಲು ಮುಂದಾದ ಕಾಂಗ್ರೆಸ್

ಇತ್ತ ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಲಿದೆ. ಪ್ರತಿಪಕ್ಷಗಳ ಸದಸ್ಯರು ಎತ್ತುವ ಪ್ರತಿಯೊಂದು ವಿಷಯಕ್ಕೂ ಸದನದಲ್ಲೇ ಉತ್ತರ ನೀಡಬೇಕು. ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರಿಗೆ ಸೂಚನೆ ನೀಡಿದ್ದಾರೆ.

news18-kannada
Updated:March 4, 2020, 7:52 PM IST
ಫೆ.17ಕ್ಕೆ ಜಂಟಿ ಅಧಿವೇಶನ; ಮಾ.5ಕ್ಕೆ ಬಜೆಟ್ ಮಂಡನೆ; ಬಿಜೆಪಿ ಕಟ್ಟಿಹಾಕಲು ಮುಂದಾದ ಕಾಂಗ್ರೆಸ್
ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು(ಫೆ.15): ಮುಖ್ಯಮಂತ್ರಿ ಬಿ.ಎಸ್​​​ ಯಡಿಯೂರಪ್ಪ ನೇತೃತ್ವದ ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವೂ ಫೆ.17ರಿಂದ ಶುರುವಾಗಲಿದೆ. ಮೊದಲ ದಿನದ ವಿಧಾನಮಂಡಲ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಮಾಡಲಿದ್ದಾರೆ. ನಂತರ ಫೆ.17ರಿಂದ ಫೆ.20ರವರೆಗೂ ಅಧಿವೇಶನ ನಡೆಯಲಿದೆ. ಇದಾದ ಬಳಿಕ ಮಾರ್ಚ್​​ 5ನೇ ತಾರೀಕು ರಾಜ್ಯ ಬಜೆಟ್​​ ಮಂಡನೆಯಾಗಲಿದೆ. ಈ ಅಧಿವೇಶನದಲ್ಲಿ ಹೇಗಾದರೂ ಸರಿಯೇ ಆಡಳಿತರೂಢ ಬಿಜೆಪಿಯನ್ನು ಕಟ್ಟಿ ಹಾಕಲೇಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಣತೊಟ್ಟಿದೆ.

ಮಾರ್ಚ್​​​ 5ನೇ ತಾರೀಕು ಸಿಎಂ ಯಡಿಯೂರಪ್ಪ ಬಜೆಟ್​​​ ಮಂಡಿಸಲಿದ್ಧಾರೆ. ಈ ಸಂದರ್ಭದಲ್ಲಿ ಲೋಕಾಯುಕ್ತ(ತಿದ್ದುಪಡಿ), ನಾವೀನ್ಯತಾ ಪ್ರಾಧಿಕಾರ, ರಾಷ್ಟ್ರೀಯ ಕಾನೂನು ವಿವಿ(ತಿದ್ದುಪಡಿ), ರಾಜ್ಯ ಭಾಷಾ(ತಿದ್ದುಪಡಿ), ನಗರ ಪಾಲಿಕೆಗಳ(ತಿದ್ದುಪಡಿ) ಮತ್ತು ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ) ಸೇರಿದಂತೆ 6 ವಿಧೇಯಕಗಳ ಮಂಡನೆಯಾಗಲಿದೆ ಎನ್ನಲಾಗುತ್ತಿದೆ. ಈ ಸುಧೀರ್ಘ ಅಧಿವೇಶನದಲ್ಲಿ ಬಿಜೆಪಿಗೆ ಚಳಿ ಬಿಡಿಸಲು ಕಾಂಗ್ರೆಸ್​​​ ಮತ್ತು ಜೆಡಿಎಸ್​​​ ತಂತ್ರ ಹೆಣೆಯುತ್ತಿದೆ. ಅದಕ್ಕಾಗಿ ಸಾಕಷ್ಟು ಪ್ರಶ್ನೆಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ.

ಕಳೆದ ವರ್ಷ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಉಂಟಾದ ನೆರೆ ಹಾವಳಿ ವಿಚಾರವನ್ನು ವಿರೋಧ ಪಕ್ಷಗಳು ಪ್ರಸ್ತಾಪಿಸಲಿವೆ. ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡದಿರುವುದು; ಕೊಟ್ಟ ಪರಿಹಾರದ ಚೆಕ್‍ ಬೌನ್ಸ್ ಆಗಿರುವುದು; ಮೈತ್ರಿ ಸರ್ಕಾರದ ಅನುದಾನ ಹಿಂಪಡೆದಿರುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ವಿಚಾರಗಳನ್ನು ಮುಂದಿಟ್ಟು ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳು ಹವಣಿಸುತ್ತಿವೆ.

ಇದನ್ನೂ ಓದಿ: ವಿಧಾನಮಂಡಲ ಅಧಿವೇಶನ ದಿನಾಂಕ ಘೋಷಿಸಿದ ಸ್ಪೀಕರ್​; ಮಾರ್ಚ್​5ಕ್ಕೆ ರಾಜ್ಯ ಬಜೆಟ್​ ಮಂಡಿಸಲಿರುವ ಬಿಎಸ್​ವೈ

ಜತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ನಡೆದ ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಪ್ರಸ್ತಾಪಿಸಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.

ಇತ್ತ ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಲಿದೆ. ಪ್ರತಿಪಕ್ಷಗಳ ಸದಸ್ಯರು ಎತ್ತುವ ಪ್ರತಿಯೊಂದು ವಿಷಯಕ್ಕೂ ಸದನದಲ್ಲೇ ಉತ್ತರ ನೀಡಬೇಕು. ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರಿಗೆ ಸೂಚನೆ ನೀಡಿದ್ದಾರೆ.
Youtube Video
First published: February 15, 2020, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories