'ಬಿಎಸ್​ವೈ ಸಿಎಂ ಅಭ್ಯರ್ಥಿಯೆಂದು ಘೋಷಣೆಯಾದಾಗಿನಿಂದ ಸಮಾಜ ಒಡೆಯುವ ಹುನ್ನಾರ ನಡೆದಿದೆ'


Updated:July 6, 2018, 9:33 AM IST
'ಬಿಎಸ್​ವೈ ಸಿಎಂ ಅಭ್ಯರ್ಥಿಯೆಂದು ಘೋಷಣೆಯಾದಾಗಿನಿಂದ ಸಮಾಜ ಒಡೆಯುವ ಹುನ್ನಾರ ನಡೆದಿದೆ'

Updated: July 6, 2018, 9:33 AM IST
ನ್ಯೂಸ್ 18 ಕನ್ನಡ

ಬೆಂಗಳೂರು(ಜು.06): ಭಾರೀ ವಿವಾದ ಸೃಷ್ಟಿಸಿದ್ದ ವೀರಶೈವ ಲಿಂಗಾಯತ ಧರ್ಮದ ವಿಚಾರ ಇದೀಗ ಮತ್ತೆ ಸದ್ದು ಮಾಡಿದೆ. ಉಪ ಪಂಗಡಗಳನ್ನು ಹಿಡಿದು ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಿದ್ದರು ಎಂದು ಸಚಿವ ಶಿವನಾಂದ್ ಪಾಟೀಲ್ ಎಂ.ಬಿ.ಪಾಟೀಲ್​ಗೆ ಟಾಂಗ್ ನೀಡಿದ್ದಾರೆ. ಯಡಿಯೂರಪ್ಪ ಯಾವಾಗ ಸಿಎಂ ಅಭ್ಯರ್ಥಿಯೆಂದು ಘೋಷಣೆಯಾಯಿತೋ ಅಂದೇ ಸಮಾಜ ಒಡೆಯುವ ಕೆಲಸಕ್ಕೆ ಕಾಂಗ್ರೆಸ್​ ಮುಂದಾಯ್ತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ವೀರಶೈವ ಲಿಂಗಾಯತ ಧರ್ಮದ ವಿಚಾರ ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ಬೆಳವಣಿಗೆಯಿಂದ ವೀರಶೈವ ಲಿಂಗಾಯತ ಧರ್ಮ ಇರುತ್ತದೋ ಇಲ್ಲವೋ ಎಂಬ ಅನುಮಾನ ಉಂಟಾಗಿತ್ತು ಎಂದು ಸಚಿವ ಶಿವಾನಂದ್ ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ಲಿಂಗಾಯತ ಶಾಸಕರು, ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಾನಂದ್ ಪಾಟೀಲ್, ವೀರಶೈವ ಲಿಂಗಾಯಿತ ಧರ್ಮ ಒಡೆಯುವ ಸಣ್ಣತನ ಬಿಟ್ಟರೆ, ಸಮಾಜಕ್ಕೆ ಗತ ವೈಭವ ಮರುಕಳಿಸುತ್ತದೆ ಅಂತ ಎಂ ಬಿ ಪಾಟೀಲ್ ಗೆ ಟಾಂಗ್ ನೀಡಿದರು.

ಬಿ.ಎಸ್ ಯಡಿಯೂರಪ್ಪರನ್ನ ಯಾವಾಗ ಸಿಎಂ ಅಭ್ಯರ್ಥಿಯೆಂದು ಘೋಷಿಸಲಾಯ್ತು ಅಂದೇ ಸಮಾಜ ಒಡೆಯುವ ಹುನ್ನಾರ ನಡೆದಿದೆ, ಸ್ವಾಮೀಜಿಗಳು ಬೀದಿಗೆ ಬರುವಂತಾಯ್ತು. ಸಮಾಜ ಉಳಿಯಬೇಕಾದ್ರೆ ನಾವೆಲ್ಲರೂ ಒಟ್ಟಾಗಿರಬೇಕು, ನಾವೆಲ್ಲರೂ ಜಾಗೃತರಾಗಿರಬೇಕು ಜಗದೀಶ್ ಶೆಟ್ಟರ್ ಎಂದರು.

ಸಮಾಜದ ಒಗ್ಗಟ್ಟು ರಕ್ಷಿಸಿಕೊಳ್ಳದೆ ಇದ್ದರೆ ನಾವು ದರ್ಬಲರಾಗುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಒಟ್ಟಾರೆಯಾಗಿ ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೇ ಪಕ್ಷಾತೀತ ಭಾಷಣಕ್ಕೆ ವೇದಿಕೆಯಾಗಿತ್ತು ಎಂಬುವುದು ಗಮನಾರ್ಹ ವಿಚಾರ.
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ