ನಿರುದ್ಯೋಗಿಗಳಾಗಿದ್ದರೆ ಮಿಸ್ಡ್ ಕಾಲ್ ಕೊಡಿ: ಯುವ ಕಾಂಗ್ರೆಸ್​ನಿಂದ ವಿನೂತನ ಅಭಿಯಾನ

ಬಿಜೆಪಿ ಸರ್ಕಾರದ ದೂರದೃಷ್ಟಿ ಕೊರತೆಯಿಂದ ಆರ್ಥಿಕತೆ ಕುಸಿದಿದ್ದು, ಉದ್ಯೋಗ ಸೃಷ್ಟಿ ಮರೀಚಿಕೆಯಾಗಿದೆ. ಇದರ ಜೊತೆ ನಿರುದ್ಯೋಗ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಕೆಲಸವಿಲ್ಲದೇ ಯುವಕರು ಭಯೋತ್ಪಾದನೆಯಂತಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನುತ್ತದೆ ಯುವ ಕಾಂಗ್ರೆಸ್​

Seema.R | news18-kannada
Updated:January 23, 2020, 6:40 PM IST
ನಿರುದ್ಯೋಗಿಗಳಾಗಿದ್ದರೆ ಮಿಸ್ಡ್ ಕಾಲ್ ಕೊಡಿ: ಯುವ ಕಾಂಗ್ರೆಸ್​ನಿಂದ ವಿನೂತನ ಅಭಿಯಾನ
Jobs
  • Share this:
ಬೆಂಗಳೂರು (ಜ.23): 10 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂಬ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದರಲ್ಲಿ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಿದ್ದು, ಯುವಕರು ಕೆಲಸವಿಲ್ಲದಂತಾಗಿದೆ. ಈ ಅಸ್ತ್ರವನ್ನು ಬಳಸಿಕೊಳ್ಳಲು ಮುಂದಾಗಿರುವ ಯುವ ಕಾಂಗ್ರೆಸ್​ ಈಗ ನಿರುದ್ಯೋಗದ ವಿರುದ್ಧ ಅಭಿಯಾನ ಆರಂಭಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿರುವ ಯುವ ಕಾಂಗ್ರೆಸ್​, ನಿರುದ್ಯೋಗ ಸಮಸ್ಯೆಯ ಕುರಿತು ಜನಸಾಮಾನ್ಯರ ಗಮನ ಸೆಳೆಯಲು ಯತ್ನಿಸುತ್ತಿದೆ.

ಇದಕ್ಕಾಗಿ ಕಾಂಗ್ರೆಸ್​ ನಾಯಕರು ಮಿಸ್ಡ್​​ ಕಾಲ್​ ಅಭಿಯಾನ ಆರಂಭಿಸಿದ್ದು, ನಿರುದ್ಯೋಗಿಗಳ ಲೆಕ್ಕ ಪಡೆಯಲು ತಯಾರಿ ನಡೆಸಿದೆ. ಯುವ ಕಾಂಗ್ರೆಸ್​ನ ಈ ಅಭಿಯಾನಕ್ಕೆ ಬೆಂಬಲ ನೀಡಲು 8151994411 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಲು ಕಾಂಗ್ರೆಸ್​ ಎಲ್ಲಾ ಹಿರಿಯ ಮತ್ತು ಕಿರಿಯ ನಾಯಕರು ಕರೆ ನೀಡಿದ್ದಾರೆ.ಬಿಜೆಪಿ ಸರ್ಕಾರದ ದೂರದೃಷ್ಟಿ ಕೊರತೆಯಿಂದ ಆರ್ಥಿಕತೆ ಕುಸಿದಿದ್ದು, ಉದ್ಯೋಗ ಸೃಷ್ಟಿ ಮರೀಚಿಕೆಯಾಗಿದೆ. ಇದರ ಜೊತೆ ನಿರುದ್ಯೋಗ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಕೆಲಸವಿಲ್ಲದೇ ಯುವಕರು ಭಯೋತ್ಪಾದನೆಯಂತಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಯುವ ಕಾಂಗ್ರೆಸ್​​ ಆರೋಪಿಸಿದೆ.ಈ ನಡುವೆ ದೇಶದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು, 370ನೇ ವಿಧಿ ರದ್ಧತಿ, ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿಯಂತಹ ನಿಯಮಗಳನ್ನು ಜಾರಿಗೆ ತರುವ ಮೂಲಕ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದೆ. ಆಡಳಿತಾತ್ಮಕ ವಿಷಯಗಳಲ್ಲಿ ಬಿಜೆಪಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಯುವಜನತೆಯನ್ನು ಕಂಗೆಡಿಸಿದ್ದು, ಅಭದ್ರತೆ ಸೃಷ್ಟಿಯಾಗಿದೆ. ಈ ವಿಷಯಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಹೋರಾಡಬೇಕಿದೆ ಎಂದು ಕಾಂಗ್ರೆಸ್ ಕರೆ ನೀಡಿದೆ.

ಇದನ್ನು ಓದಿ: ಮೌಢ್ಯ ವಿರೋಧಿ ಕಾಯ್ದೆ ಜಾರಿಗೊಳಿಸಿದ ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಅಭಿನಂದನೆ; ಬಿಜೆಪಿಗೆ ಈಗ ಜ್ಞಾನದೋಯವಾಗಿದೆ ಎಂದ ಮಾಜಿ ಸಿಎಂ

ಈ ರೀತಿ ಪ್ರತಿಭಟನೆ ನಡೆಸಬೇಕು ಎಂದರೆ ದೇಶದಲ್ಲಿ ಎಷ್ಟು ಜನ ನಿರುದ್ಯೋಗಿಗಳು ಇದ್ದಾರೆ ಎಂಬುದರ ಬಗ್ಗೆ ಅರಿವಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಿರುದ್ಯೋಗಿಗಳು ಮಿಸ್​ ಕಾಲ್​ ನೀಡುವ ಮೂಲಕ ಅಭಿಯಾನಕ್ಕೆ ಮುಂದಾಗಬೇಕು ಎಂದು ಕಾಂಗ್ರೆಸ್​ ಆಗ್ರಹಿಸಿದೆ.
First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ