• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar Vs R Ashok: ಕನಕಪುರದಲ್ಲಿ ಸೈಲೆಂಟ್ ಆಪರೇಷನ್; ಅಶೋಕ್​ಗೆ ಠೇವಣಿಯೂ ಸಿಗದಂತೆ ಡಿಕೆ ಸೋದರರ ರಣತಂತ್ರ!

DK Shivakumar Vs R Ashok: ಕನಕಪುರದಲ್ಲಿ ಸೈಲೆಂಟ್ ಆಪರೇಷನ್; ಅಶೋಕ್​ಗೆ ಠೇವಣಿಯೂ ಸಿಗದಂತೆ ಡಿಕೆ ಸೋದರರ ರಣತಂತ್ರ!

ಡಿಕೆ ಸುರೇಶ್​/ ಡಿಕೆ ಶಿವಕುಮಾರ್​

ಡಿಕೆ ಸುರೇಶ್​/ ಡಿಕೆ ಶಿವಕುಮಾರ್​

Operation Congress: ಬಿಜೆಪಿ ನಾಯಕರ ಸಂಪರ್ಕಕ್ಕೆ ಜೆಡಿಎಸ್ ಮುಖಂಡರರು ಸಿಗದ ರೀತಿ ಅವರನ್ನು ಆಪರೇಷನ್ ಮಾಡಲಾಗುತ್ತಿದೆ.

  • Share this:

ಬೆಂಗಳೂರು: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ (Kanakapura Assembly Election) ಡಿಕೆ ಸೋದರರು (DK Brother) ಸೈಲೆಂಟ್ ಆಪರೇಷನ್​​ಗೆ ಮುಂದಾಗಿದ್ದು, ಸ್ಥಳೀಯ ಪ್ರಭಾವಿ ಮುಖಂಡರನ್ನು ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಸಚಿವ ಆರ್​​.ಅಶೋಕ್ (Minister R Ashok) ಅವರಿಗೆ ಠೇವಣಿ ಬರದಂತೆ ಮಾಡಲು ಕಾಂಗ್ರೆಸ್​ ಶತ ಪ್ರಯತ್ನ ಮಾಡುತ್ತಿದೆ. ತಮ್ಮ ಮತದ ಜೊತೆಗೆ ಜೆಡಿಸ್ ಮತಗಳ ಕ್ರೂಢೀಕರಣಕ್ಕೆ ಡಿಕೆ ಸೋದರರು ಮುಂದಾಗಿದ್ದು. ಕನಕಪುರದಲ್ಲಿ ಜೆಡಿಎಸ್ ಮುಖಂಡರನ್ನು ಸೆಳೆಯುತ್ತಿದ್ದಾರೆ. ಡಿಎಂ ವಿಶ್ವನಾಥ್ ಬೆನ್ನೆಲ್ಲೇ ಜೆಡಿಎಸ್​​ನ ಮತ್ತೊಬ್ಬ ನಾಯಕ ನಾರಾಯಣ ಗೌಡರನ್ನು (Narayan Gowda) ಸಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ತೆನೆ ಹೊರೆ ಇಳಿಸಿದ  ನಾರಾಯಣ ಗೌಡರು ಕಾಂಗ್ರೆಸ್ ಬಾವುಟ ಹಿಡಿದರು.


ಕಳೆದ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್​​ನಿಂದ ಸ್ಪರ್ಧಿಸಿದ್ದ ನಾರಾಯಣಗೌಡರು 47,643 ಮತಗಳನ್ನು ಪಡೆದುಕೊಂಡಿದ್ದರು. ಡಿಕೆ ಶಿವಕುಮಾರ್ 1,27,552 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು. ಎರಡನೇ ಸ್ಥಾನದಲ್ಲಿ ನಾರಾಯಣಗೌಡರಿದ್ದರು. ಇನ್ನೂ 6,273 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಮೂರನೇ ಸ್ಥಾನದಲ್ಲಿದ್ದರು.


ಮತಗಳ ಕ್ರೂಢೀಕರಣಕ್ಕೆ ಪ್ಲಾನ್!


ಡಿಕೆ ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ, ಈ ಬಾರಿ ಸಚಿವ ಆರ್ ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಲು ಡಿಕೆ ಸೋದರರು ಸೈಲೆಂಟ್​ ಆಗಿ ಆಪರೇಷನ್ ಕಾಂಗ್ರೆಸ್ ಮೂಲಕ ಮತಗಳ ಕ್ರೂಢೀಕರಣಕ್ಕೆ ಮುಂದಾಗಿದ್ದಾರೆ.




ಇದನ್ನೂ ಓದಿ: Karnataka Election: ಯುವಕರಿಗೆ ಉದ್ಯೋಗ ಕೊಡುವುದು ನನ್ನ ಗುರಿ: ಸಿಎಂ ಬೊಮ್ಮಾಯಿ


ಡಿಕೆ ಸುರೇಶ್ ನೇತೃತ್ವದಲ್ಲಿ ಆಪರೇಷನ್ ಕಾಂಗ್ರೆಸ್

top videos


    ಈ ಮೂಲಕ ಸಚಿವ ಆರ್ ಅಶೋಕ್ ಗೆ ಕನಕಪುರದಲ್ಲಿ ಠೇವಣಿ ಮತಗಳು ಬಾರದಂತೆ ನೋಡಿಕೊಳ್ಳಲು ಕಾಂಗ್ರೆಸ್ ರಣತಂತ್ರ ರಚಿಸುತ್ತಿದೆ. ಸಂಸದ ಡಿಕೆ ಸುರೇಶ್ ನೇತೃತ್ವದಲ್ಲಿಯೇ ಈ ಆಪರೇಷನ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ.  ಬಿಜೆಪಿ ನಾಯಕರ ಸಂಪರ್ಕಕ್ಕೆ ಜೆಡಿಎಸ್ ಮುಖಂಡರರು ಸಿಗದ ರೀತಿ ಅವರನ್ನು ಆಪರೇಷನ್ ಮಾಡಲಾಗುತ್ತಿದೆ.

    First published: