ಬೆಂಗಳೂರು (ಜೂನ್ 25); "ದೇಶದ ಜನರ ಮೇಲೆ ವಿನಾಃಕಾರಣ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಇಡೀ ದೇಶದ ಜನರ ಕ್ಷಮೆ ಕೇಳಬೇಕು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಇಂದಿರಾ ಗಾಂಧಿ 1975 ಜೂನ್ 25 ರಂದು ಭಾರತದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಪತ್ರಿಕಾ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಿದ್ದರು. ತುರ್ತು ಪರಿಸ್ಥಿತಿಯ ವಾರ್ಷಿಕ ದಿನವನ್ನು ಕಳೆದ ನಾಲ್ಕು ದಶಕಗ ಳಿಂದ ಬಿಜೆಪಿ ಆಚರಿಸುತ್ತಾ ಬಂದಿದೆ. ಹೀಗಾಗಿ ಇಂದು ರಾಜ್ಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ತುರ್ತು ಪರಿಸ್ಥಿತಿ ತರ್ತು ಪರಿಸ್ಥಿತಿ ಕರಾಳ ದಿನ ಆಚರಿಸಲಾಗಿತ್ತು. ಈ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಯಡಿಯೂರಪ್ಪ "ಕಾಂಗ್ರೆಸ್ ಇಡೀ ದೇಶದ ಕ್ಷಮೆ ಕೇಳಬೇಕು" ಎಂದು ಒತ್ತಾಯಿಸಿದ್ದಾರೆ.
ತುರ್ತು ಪರಿಸ್ಥಿತಿ ವರ್ಷಾಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಯಡಿಯೂರಪ್ಪ, "46 ವರ್ಷಗಳ ಹಿಂದೆ ಇದೇ ದಿನ ಅಂದಿನ ಪ್ರಧಾನಿ ಇಂದಿರಾಗಾಂಧಿ ಯಾವುದೇ ಕಾರಣ ಇಲ್ಲದೇ ತುರ್ತುಸ್ಥಿತಿ ಘೋಷಣೆ ಮಾಡಿದ್ದರು. ಅವರು ಕೇವಲ ತನ್ನ ಖುರ್ಚಿ ಉಳಿವಿಗಾಗಿ ಇಂತಹ ತೀರ್ಮಾನ ಮಾಡಿದ್ದು ವಿಪರ್ಯಾಸ. ಈ ಸಂದರ್ಭದಲ್ಲಿ ದೇಶದ ಅನೇಕ ನಾಯಕರು ಜೈಲುವಾಸ ಅನುಭವಿಸಬೇಕಾಯಿತು. ವಾಕ್ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ ಕಸಿದುಕೊಳ್ಳಲಾಯಿತು. ಹಲವು ಪತ್ರಿಕೆಗಳು ಪ್ರತಿಭಟಿಸಿದ್ದವು.
ನಾನು ಸೇರಿದಂತೆ ಅನೇಕ ಕಾರ್ಯಕರ್ತರು ಜೈಲುವಾಸ ಅನುಭವಿಸಬೇಕಾಯಿತು. ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡೀಸ್, ದೇವೇಗೌಡ ಸೇರಿದಂತೆ ಎಲ್ಲರನ್ನೂ ಬಂಧಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಟ್ಟಿದ್ದರು. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ನಟಿ ಸ್ನೇಹಲತಾ ಜೈಲಿನಲ್ಲಿ ಸಾವನ್ನಪ್ಪಿದ್ದರು. ಪರಿಣಾಮ ಆನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜನ ಅವರನ್ನ ತಿರಸ್ಕರಿಸಿದರು.
ಇದನ್ನೂ ಓದಿ: Amit Shah| 1975ರ ತುರ್ತು ಪರಿಸ್ಥಿತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ; ಅಮಿತ್ ಶಾ
ಈ ದಿನ ಬಿಜೆಪಿಯಿಂದ ಅಂದು ಬಂಧಿತರಾದವರ ಮನೆಗೆ ಹೋಗಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಮನೆಮನೆಗೆ ಗುರುತಿಸಿ ಸನ್ಮಾನ ಮಾಡುತ್ತಿರುವ ನಮ್ಮ ಕಾರ್ಯಕ್ರರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಅಂತಹ ಕರಾಳ ಶಾಸನ ಜನಜೀವನದ ಮೇಲೆ ಬೀರಿದ ದುಷ್ಪರಿಣಾಮ 46 ವರ್ಷಗಳಾದ್ಮೇಲೂ ಕಾಣುತ್ತಿದೆ. ಇಂದು ಕಾಂಗ್ರೆಸ್ ದೇಶದ ಜನರಲ್ಲಿ ಕ್ಷಮೆ ಕೇಳ್ಬೇಕು. ಆಮೂಲಕ ಅವರು ಮಾಡಿದ ಅಕ್ಷ್ಯಮ್ಯ ಅಪರಾಧವನ್ನ ಒಪ್ಪಿಕೊಳ್ಳಬೇಕು. ಮನೆಮನೆಗೆ ಗುರುತಿಸಿ ಸನ್ಮಾನ ಮಾಡುತ್ತಿರುವ ನಮ್ಮ ಕಾರ್ಯಕ್ರರ್ತರಿಗೆ ಧನ್ಯವಾದ ತಿಳಿಸುತ್ತೇನೆ
ಜೈಲಿನಲ್ಲಿದ್ದಾಗ ಅಲ್ಲೇ ನಮ್ಮನ್ನ ಮುಗಿಸೋಕೆ ಪ್ರಯತ್ನ ಮಾಡಿದ್ದನ್ನು ಜೀವನ ಪೂರ್ತಿ ನೆನಪಿಟ್ಡುಕೊಳ್ಳಬೇಕು. ಜಯಪ್ರಕಾಶ್ ನಾರಾಯಣ್ ಪುಣ್ಯಾತ್ಮನ ಹೋರಾಟದಿಂದ ತುರ್ತು ಪರಿಸ್ಥಿತಿ ಅಂತ್ಯ ಆಯ್ತು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪತುರ್ತು ಪರಿಸ್ಥಿತಿ ದಿನದ ಎಲ್ಲಾ ಪ್ರಮುಖ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: CoronaVirus Live Update| ದೇಶದಲ್ಲಿ ತಗ್ಗುತ್ತಿರುವ ಕೊರೋನಾ ಸೋಂಕು, ಚೇತರಿಕೆ ಪ್ರಮಾಣದಲ್ಲೂ ಏರಿಕೆ!
ಇದೇ ಸಂದರ್ಭದಲ್ಲಿ ಪತ್ರಕರ್ತರು ಮಾಜಿ ಸಿಎಂ ಕುಮಾರಸ್ವಾಮಿ ಯವರ ಅಧಿವೇಶನ ಕರೆಯುವ, ರಮೇಶ್ ಜಾರಕಿಹೊಳಿ ನಡೆ ಹಾಗೂ ಕೊರೊನಾ ಡೆಲ್ಟಾ ಪ್ಲಸ್ ಕುರಿತ ವಿಷಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಆದರೆ, ಇಂದು ತುರ್ತು ಪರಿಸ್ಥಿತಿ ವಿಷಯ ಬಿಟ್ಟು ಬೇರೆ ಏನು ಮಾತನಾಡುವುದಿಲ್ಲ" ಎಂದು ಸ್ಪಷ್ಟಪಡಿಸಿರುವ ಸಿಎಂ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡದೆ ಹೊರಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ