VS Ugrappa: ಲೋಕಪಾಲ-ಕಪ್ಪುಹಣ ಬರತ್ತೆ, ಭ್ರಷ್ಟಾಚಾರ ತೊಲಗತ್ತೆ ಎಂದ ಬಿಜೆಪಿಗೆ ನೈತಿಕತೆ ಇದೆಯೇ; ವಿ.ಎಸ್.​ ಉಗ್ರಪ್ಪ ಕಿಡಿ

ದೇವನಹಳ್ಳಿ ತಾಲ್ಲೂಕು ಕೆಐಡಿಬಿ ಲ್ಯಾಂಡ್ ವಿಚಾರಕ್ಕೆ ಸಿಎಂ ಯಡಿಯೂರಪ್ಪ ವಿರುದ್ದ ಹೈ ಕೋಟ್೯ ಆದೇಶ ಒಂದನ್ನು ಕೊಟ್ಟಿದೆ. ಇಂತಹ ಭ್ರಷ್ಟ ವ್ಯಕ್ತಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಬಿಜೆಪಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?" ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.

ವಿ.ಎಸ್.​ ಉಗ್ರಪ್ಪ.

ವಿ.ಎಸ್.​ ಉಗ್ರಪ್ಪ.

 • Share this:
  ಬೆಂಗಳೂರು (ಮಾರ್ಚ್​ 21); ಬಿಜೆಪಿಯವರು ನಾವು ಅಧಿಕಾರಕ್ಕೆ ಬಂದರೆ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುತ್ತೇವೆ, ಲೋಕಪಾಲ ಜಾರಿ ಮಾಡುತ್ತೇವೆ, ಭ್ರಷ್ಟಾಚಾರವನ್ನು ತೊಲಗಿಸಿ ಭ್ರಷ್ಟರನ್ನು ಜೈಲಿಗಟ್ಟುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿದ್ದರು. ಆದರೆ, ಇಂದು ಬಿಜೆಪಿ ಅಧಿಕಾರದಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಲೋಕಪಾಲ ಈವರೆಗೆ ಜಾರಿಯಾಗಿಲ್ಲ. ಇನ್ನೂ ಕಪ್ಪು ಹಣದ ಬಗ್ಗೆ ಮಾತೇ ಇಲ್ಲದಂತಾಗಿದೆ. ಇಷ್ಟಕ್ಕೂ ಯಡಿಯೂರಪ್ಪನಂತಹ ಭ್ರಷ್ಟ ವ್ಯಕ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿರುವ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿ.ಎಸ್​. ಉಗ್ರಪ್ಪ ಕಿಡಿಕಾರಿದ್ದಾರೆ.

  ಮಾಜಿ ಸಚಿವ ಕೃಷ್ಣ ಭೈರೇಗೌಡ , ಮಾಜಿ ಸಂಸದ ಉಗ್ರಪ್ಪ ಮತ್ತು ಬ್ರಿಜೇಶ್ ಕಾಳಪ್ಪ ಅವರಿಂದ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ವಿ.ಎಸ್​. ಉಗ್ರಪ್ಪ, "ಲೋಕಪಾಲ ಕಾಯ್ದೆ ಜಾರಿಗೆ ಬರಬೇಕು ಅಂತ ಹೋರಾಟ ಮಾಡಿದ್ದವರು ಇದೇ ಬಿಜೆಪಿವರು. ಆದ್ರೆ ಇಂದು ಆ ಬಗ್ಗೆ ಬಿಜೆಪಿಯ ಯಾವ ನಾಯಕರು ಮಾತನಾಡುತ್ತಿಲ್ಲ.  ಕಪ್ಪು ಹಣ ದೇಶಕ್ಕೆ ವಾಪಸ್ ಬರುತ್ತೆ ಅಂತ ಹೇಳಿದ್ರೂ ಆ ಕೆಲಸ ಕೂಡ ಇವರಗೆ ಆಗಿಲ್ಲ.

  ದೇವನಹಳ್ಳಿ ತಾಲ್ಲೂಕು ಕೆಐಡಿಬಿ ಲ್ಯಾಂಡ್ ವಿಚಾರಕ್ಕೆ ಸಿಎಂ ಯಡಿಯೂರಪ್ಪ ವಿರುದ್ದ ಹೈ ಕೋಟ್೯ ಆದೇಶ ಒಂದನ್ನು ಕೊಟ್ಟಿದೆ. ಇಂತಹ ಭ್ರಷ್ಟ ವ್ಯಕ್ತಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಬಿಜೆಪಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?" ಎಂದು ಅವರು ಪ್ರಶ್ನಿಸಿದ್ದಾರೆ.

  "ಲೋಕಪಾಲ್ ವ್ಯವಸ್ಥೆ ಬರಬೇಕು ಎಂದು ಮೋದಿ ಹೇಳಿದ್ದರು. ಮೋದಿಯವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಮೇಲೆ 10% ಸರ್ಕಾರ ಎಂದು ಆರೋಪ ಮಾಡಿದ್ದರು. ಈಗ ಮಿಸ್ಟರ್ ಮೋದಿಯವರನ್ನ ನಾನು ಕೇಳ್ತಿದ್ದೀನಿ, ಮೊನ್ನೆ ಹೈಕೋರ್ಟ್ ಒಂದು‌ ಜಡ್ಜ್ ಮೆಂಟ್ ನೀಡಿದೆ. ಬಹುದೊಡ್ಡ ಭ್ರಷ್ಟಾಚಾರ ಆದ ಹಿನ್ನಲೆಯಲ್ಲಿ ಕೆ ಐ ಡಿ ಬಿ ಅಕ್ವೈರ್ ಮಾಡಿದ ಜಮೀನನ್ನು ಸಿಎಂ ಯಡಿಯೂರಪ್ಪ, ನಿರಾಣಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಿಕ್ ಬ್ಯಾಕ್ ಡಿನೊಟಿಫಿಕೇಶನ್ ಮಾಡಿದ್ದರು. ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಕ್ಯುಸಡ್ ನಂಬರ್ 1. ಇಂತಹ ಹಿನ್ನೆಲೆ ಇರುವ ಯಡಿಯೂರಪ್ಪ ಯಾವ ರೀತಿ ಅಧಿಕಾರದಲ್ಲಿ ಮುಂದುವರೆಯುತ್ತಾರೆ?

  ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಯಡಿಯೂರಪ್ಪ ಅವ್ರನ್ನು ಸಿಎಂ ಆಗಿ ಮುಂದುವರೆಸುತ್ತಾರೆ? ಚಾರ್ಜ್ ಶೀಟ್ ಹಾಕಿದ ಹಿನ್ನಲೆ ಯಡಿಯೂರಪ್ಪ ಟ್ರಯಲ್ ಫೇಸ್ ಮಾಡಲಿ. ಕಾಂಗ್ರೆಸ್ ಯಡಿಯೂರಪ್ಪ ಅವ್ರ ರಾಜೀನಾಮೆಗೆ ಆಗ್ರಹಿಸುತ್ತದೆ" ಎಂದಿದ್ದಾರೆ.

  ಇದನ್ನೂ ಓದಿ: ಸಿಎಂಗೆ ಜಲ ಸಂಪನ್ಮೂಲ ಇಲಾಖೆ ತಮಗೇ ಬೇಕಿತ್ತು, ಹೀಗಾಗಿ ಜಾರಕಿಹೊಳಿಯನ್ನು ಸಿಲುಕಿಸಲಾಗಿದೆ: ಯತ್ನಾಳ್ ಹೊಸ ಬಾಂಬ್

  ಇನ್ನೂ ಮಾಜಿ ಸಚಿವ ಕೃಷ್ಣೇಭೈರೇಗೌಡ ಮಾತನಾಡಿ, "ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರು. ತಮ್ಮ ವೈಯಕ್ತಿಕ ಲಾಭಕ್ಕಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಸ್ಪೆಷಲ್ ಕೋರ್ಟ್ ತಪ್ಪು ಮಾಡಿದೆ ಅಂತ ಈಗಾಗಲೇ ತಿಳಿಸಿದೆ. ಯಡಿಯೂರಪ್ಪ ವಿರುದ್ದ ಈ ಹಿಂದೆಯೇ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವು ದರಿಂದ ತನಿಖೆಗೆ ಒಳಪಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಅಧಿಕಾರ ದುರುಪಯೋಗ ಪಡಿಸಿ ಕೊಳ್ಳ ಬಾರದು.

  ಹೀಗಾಗಿ ವಿಚಾರಣೆ ನಡೆಯುವಾಗ ಯಡಿಯೂರಪ್ಪ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಯಡಿಯೂರಪ್ಪ ತಮ್ಮ ಸ್ಥಾನದಲ್ಲಿ ಇರದೇ ರಾಜೀನಾಮೆ ಕೊಡಬೇಕು. ಆರ್ ಟಿ ಜಿ ಎಸ್ ನಲ್ಲೇ ಭ್ರಷ್ಟಾಚಾರ ನಡೆಸಿರುವ ದಾಖಲೆಯೂ ಇದೆ. ನಾ ಖಾವೂಂಗಾ ನಾ ಖಾನೆ ದೂಂಗಾ ಅಂತ ಬಿಜೆಪಿ ನಾಯಕರು ಹೇಳ್ತಿದ್ರು. ಈಗ ಯಡಿಯೂರಪ್ಪ ಗೆ ತಿನ್ಲಿಕ್ಕೆ ಬಿಟ್ಟಿದ್ದೀರಾ ಅಂದ್ರೆ ಇದರಲ್ಲಿ ನಿಮಗೂ ಪಾಲಿದೆಯಾ?. ಕರ್ನಾಟಕದಲ್ಲಿ ನಡೆಯುತ್ತಿರುವ ಹಗರಣ, ಭ್ರಷ್ಟಾಚಾರ ಕಣ್ಣಿಗೆ ಕಂಡ್ರೂ ಏಕೆ ಮೋದಿ ಮತ್ತು ಬಿಜೆಪಿ ವರಿಷ್ಠರು ಸುಮ್ಮನಿದ್ದಾರೆ? ಇವರು ಎಮ್ಮೆ ಚರ್ಮದವರಾ?" ಎಂದು ಪ್ರಶ್ನಿಸಿದ್ದಾರೆ.
  Published by:MAshok Kumar
  First published: