• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Elections: ತಳ್ಳಾಟ ನೂಕಾಟದಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಶಾಸಕ ರಾಮಪ್ಪ ಅಭಿಮಾನಿಗೆ ಕಪಾಳ ಮೋಕ್ಷ!

Karnataka Elections: ತಳ್ಳಾಟ ನೂಕಾಟದಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಶಾಸಕ ರಾಮಪ್ಪ ಅಭಿಮಾನಿಗೆ ಕಪಾಳ ಮೋಕ್ಷ!

ಸಿದ್ದರಾಮಯ್ಯ

ಸಿದ್ದರಾಮಯ್ಯ

ತಮ್ಮ ಮನೆ ಬಳಿ ತಳ್ಳಾಟ ನೂಕಾಟ ನಡೆಸಿದ ಹರಿಹರ ಶಾಸಕ ರಾಮಪ್ಪ ಬೆಂಬಲಿಗರ ನಡೆಯಿಂದ ಬೇಸತ್ತ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರಲ್ಲಿ ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು(ಮಾ.24): ಚುನಾವಣೆ (Karnataka Elections) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಾಯಕರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಮತದಾರರು ಪ್ರತಿಯೊಬ್ಬ ರಾಜಕೀಯ ನಾಯಕರ ಮೇಲೆ ಕಣ್ಣಿಟ್ಟಿದ್ದಾರೆ. ಅವರೆಲ್ಲರ ಪ್ರತಿಯೊಂದು ಚಟುವಟಿಕೆಗಳನ್ನು ಗಮನಿಸುತ್ತಿದ್ದಾರೆ. ಈ ನಡುವೆ ಟಿಕೆಟ್​ ಆಕಾಂಕ್ಷಿಗಳು ತಮಗೆ ಸ್ಪರ್ಧಿಸುವ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ಹಿರಿಯ ನಾಯಕರನ್ನು ಸುತ್ತುವರೆಯುತ್ತಿರುವ ಘಟನೆಗಳೂ ಕೇಳಿ ಬರುತ್ತಿವೆ.


ಸದ್ಯ ಕಾಂಗ್ರೆಸ್​ನಲ್ಲಿ ಶಾಸಕ ರಾಮಪ್ಪ ಮತ್ತೆ ಹರಿಹರ (Harihar Assembly Constituency) ಕಣದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದು, ಇದಕ್ಕೆ ತಕ್ಕಂತೆ ಅವರ ಬೆಂಬಲಿಗರು ಹಿರಿಯ ನಾಯಕರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಈ ನಡುವೆ ಮಾಝಿ ಸಿಎಂ ಸಿದ್ದರಾಮಯ್ಯ (Siddaramaiah) ರಾಮಪ್ಪ (Ramappa) ಬೆಂಬಲಿಗರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.


ಇದನ್ನೂ ಓದಿ: Kodagu: ಮಕ್ಕಳಿಗೆ ಉಂಗುರ ಕೊಡುವ ಮುನ್ನ ಹುಷಾರ್​​; ರಿಂಗ್​ ನುಂಗಿ 8 ತಿಂಗಳ ಕಂದಮ್ಮ ಸಾವು


ಹೌದು ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಹೀಗಿರುವಾಗ ಅವರ ಬೆಂಬಲಿಗರು ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಯ್ಯರನ್ನು ಸುತ್ತುವರೆದು ತಮ್ಮ ನಾಯಕನಿಗೇ ಕಾಂಗ್ರೆಸ್​ ಟಿಕೆಟ್​ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ರಾಮಪ್ಪ ಅವರಿಗೆ ಸ್ಪಷ್ಟನೆ ನೀಡಿದ್ದು, ಕಾಯುವಂತೆ ಸೂಚಿಸಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯ ಮನೆ ಮುಂದೆ ರಾಮಪ್ಪ ಬೆಂಬಲಿಗರು ಜಮಾಯಿಸಿ ಮತ್ತೆ ಒತ್ತಾಯಿಸಲಾರಂಭಿಸಿದ್ದಾರೆ.
ಇನ್ನು ರಾಮಪ್ಪ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದರಿಂದ ಭಾರೀ ತಳ್ಳಾಟ ಹಾಗೂ ನೂಕಾಟ ಉಂಟಾಗಿದೆ. ಈ ವೇಳೆ ರಾಮಪ್ಪ ಬೆಂಬಲಿಗರನ್ನು ಸಮಾಧಾನಗೊಳಿಸಲು ಯತ್ನಿಸಿದ ಸಿದ್ದರಾಮಯ್ಯ ಟಿಕೆಟ್ ಆಮೇಲೆ ನೋಡೋಣ, ಸರ್ವೆ ರಿಪೋರ್ಟ್ ಬರಲಿ ಎಂದಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯನವರು ಹೊರಡುವಾಗ ಮತ್ತೆ ತಳ್ಳಾಟ ನೂಕಾಟ ಆರಂಭವಾಗಿದೆ. ಇದರಿಂದ ಸುಸ್ತಾದ ಸಿದ್ದರಾಮಯ್ಯ ತಳ್ಳಾಡಿದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಾರೆ.


top videos  ಸದ್ಯ ಸಿದ್ದರಾಮಯ್ಯ ರಾಮಪ್ಪ ಬೆಂಬಲಿಗನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  First published: