Congress Campaign: ಭ್ರಷ್ಟಾಚಾರ, ಭ್ರಷ್ಟಾಚಾರ, ಇದು 40 ಪರ್ಸೆಂಟ್ ಸರ್ಕಾರ! ಹಾಡಿನ ಮೂಲಕ ಕಾಂಗ್ರೆಸ್ ಅಭಿಯಾನ ಶುರು

ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್​ನಿಂದ​ ಅಭಿಯಾನ ಪ್ರಾರಂಭ ಮಾಡಿದ್ದೇವೆ ಎಂದ ಸಿದ್ದರಾಮಯ್ಯ ಅವರು, ಒಂದು ಹೆಲ್ಪ್ ಲೈನ್ ಕೂಡ ಕೊಟ್ಟಿದ್ದೇವೆ. 8447004040 ಈ ನಂಬರ್​ಗೆ ಫೋನ್ ಮಾಡಿ ಮಾಹಿತಿ ನೀಡಬಹುದು ಎಂದ್ರು.

ಬಿಜೆಪಿ ವಿರುದ್ಧ ಕಾಂಗ್ರೆಸ್​ ಅಭಿಯಾನ

ಬಿಜೆಪಿ ವಿರುದ್ಧ ಕಾಂಗ್ರೆಸ್​ ಅಭಿಯಾನ

  • Share this:
ಬಿಜೆಪಿ ಸರ್ಕಾರದ (BJP Government) ಮೇಲೆ 40 ಪರ್ಸೆಂಟ್ ಕಮಿಷನ್ (40 Percentage Commission) ಆರೋಪ ಮಾಡಿರೋ ಕಾಂಗ್ರೆಸ್​ ಇದೀಗ ಹೊಸ ಅಭಿಯಾನ ಶುರು ಮಾಡಿದೆ. ರಾಜ್ಯ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ಕಾಂಗ್ರೆಸ್​ ಅಭಿಯಾನ (Congress Campaign) ಶುರು ಮಾಡಿದೆ. ಹೊಸ ಪ್ಲಾನ್​ನೊಂದಿಗೆ ಕಾಂಗ್ರೆಸ್​ ನಾಯಕರು ಸಜ್ಜಾಗಿದ್ದಾರೆ. ಇನ್ನು ಈ ಅಭಿಯಾನಕ್ಕಾಗಿ ಕಾಂಗ್ರೆಸ್​ ಹೊಸ ಹಾಡೊಂದನ್ನು ಸಹ ರಿಲೀಸ್​ ಮಾಡಿದೆ. ಭ್ರಷ್ಟಾಚಾರ, ಭ್ರಷ್ಟಾಚಾರ, ಇದು 40 ಪರ್ಸೆಂಟ್​ನ​ ಸರ್ಕಾರ ಎನ್ನುವ ಹಾಡಿನ ಮೂಲಕ ಜನರ ಗಮನ ಸೆಳೆಯಲು ಕಾಂಗ್ರೆಸ್​ ನಾಯಕರು ಮುಂದಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್​ ಅವರು ಅವರು, 40% ಕಮಿಷನ್ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ನಾನಾ ಸ್ವರೂಪಗಳ ವಿಡಿಯೋ ಮತ್ತು ಲಂಚದ ರೇಟ್ ಕಾರ್ಡ್‌ಅನ್ನು ಜಂಟಿ ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕೈ ಅಭಿಯಾನ

ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ನಿಂದ​ ಅಭಿಯಾನ ಪ್ರಾರಂಭ ಮಾಡಿದ್ದೇವೆ ಎಂದ ಸಿದ್ದರಾಮಯ್ಯ ಅವರು, ಒಂದು ಹೆಲ್ಪ್ ಲೈನ್ ಕೂಡ ಕೊಟ್ಟಿದ್ದೇವೆ. 8447004040 ಈ ನಂಬರ್ ಗೆ ಫೋನ್ ಮಾಡಿ ಹೇಳಬಹುದು ಎಂದು ಹೇಳಿದ್ರು. www.40 percent.com ಇದಕ್ಕಾದ್ರು ಮೇಲ್​ ಮಾಡಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಭ್ರಷ್ಟಾಚಾರ ರಹಿತ ಆಡಳಿತ ಕೊಡ್ತೀವಿ

ಜೊತೆಗೆ ನಾವು ಅಧಿಕಾರಕ್ಕೆ ಬಂದ್ರೆ ಭ್ರಷ್ಟಾಚಾರ ರಹಿತ ಆಡಳಿತ ಕೊಡ್ತೀವಿ ಎಂಬ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಈ ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತ ಮಾಡಬೇಕು. ಜನರು, ಗುತ್ತಿಗೆದಾರರನ್ನು ಇದರಿಂದ ಪಾರು ಮಾಡಬೇಕು. ಅದಕ್ಕೆ ಈ ಅಭಿಯಾನವನ್ನು ನಾವು ಪ್ರಾರಂಭ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ರು.

ಸಿಎಂ ವಿರುದ್ಧ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ

ಫಸ್ಟ್​ ರ್ಯಾಂಕ್​​ ಪಡೆದವರೇ PSI ಕೇಸ್​ನಲ್ಲಿ ಅರೆಸ್ಟ್​ ಆಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು. PSI ನೇಮಕಾತಿ ಹಗರಣದಲ್ಲಿ ಅಧಿಕಾರಿಯನ್ನೇ ಬಂಧಿಸಿದ್ದೀರಿ. ಕನಕಗಿರಿ ಶಾಸಕ ಸರ್ಕಾರಕ್ಕೆ 15 ಲಕ್ಷ ಕೊಟ್ಟಿದ್ದೀನಿ ಎಂದಿದ್ದಾರೆ. ಪ್ರಿಯಾಂಕ್ ಪ್ರಶ್ನಿಸಿದರೆ ನೋಟಿಸ್ ಕೊಟ್ಟು ಹೆದರಿಸುತ್ತೀರಾ ಎಂದು ಪ್ರಶ್ನಿಸಿದರು. 2,500 ಕೋಟಿ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದರು. ಯತ್ನಾಳ್​ಗೆ ಯಾಕೆ ನೋಟಿಸ್​ ಕೊಟ್ಟು ವಿಚಾರಣೆಗೆ ಕರೆಯಲಿಲ್ಲ ಎಂದರು. ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ವಿರುದ್ಧ ಆರೋಪವಿತ್ತು. ಕೇಸ್ ತನಿಖೆಗೂ ಮುನ್ನ ಅವರು ತಪ್ಪು ಮಾಡಿಲ್ಲ ಎಂದು ಹೇಳ್ತಿದ್ದೀರಿ.ಇದನ್ನೂ ಓದಿ: Karnataka Politics: ಭ್ರಷ್ಟಾಚಾರದಿಂದ ಸರ್ಕಾರ ಗಬ್ಬೆದ್ದು ನಾರುತ್ತಿದೆ ಎಂದ ಸಿದ್ದು, ಬೊಮ್ಮಾಯಿಗೆ ಧಮ್ ಬಂದಿದೆ ಅಂತ ಡಿಕೆಶಿ ಟಾಂಗ್!


ಅಸೆಂಬ್ಲಿಯಲ್ಲಿ ಭ್ರಷ್ಟಾಚಾರದ ವ್ಯಾಪಕವಾಗಿ ಚರ್ಚೆ ಮಾಡಬೇಕು. ಈ ಜವಾಬ್ದಾರಿಯನ್ನು ಶಾಸಕರಿಗೆ ಕೊಟ್ಟಿದ್ದೇವೆ.  ಬ್ರಹ್ಮಾಂಡ ಭ್ರಷ್ಟಾಚಾರದ ಹೊರಗೆ ತೆಗೆಯಲು ಕಾಂಗ್ರೆಸ್ ಸಜ್ಜಾಗಿದೆ. ಅದಕ್ಕಾಗಿ ಇಂದು ನಾವು ಅಭಿಯಾನ ಶುರು ಮಾಡಿದ್ದೇವೆ ಎಂದು ಡಿಕೆಶಿ ಹೇಳಿದ್ರು.

Published by:ಪಾವನ ಎಚ್ ಎಸ್
First published: