ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ; ರಿಜ್ವಾನ್​ಗೆ ಟಿಕೆಟ್​ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ

news18-kannada
Updated:November 16, 2019, 10:54 PM IST
ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ; ರಿಜ್ವಾನ್​ಗೆ ಟಿಕೆಟ್​ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ
ಕೆಪಿಸಿಸಿ ಕಚೇರಿ
  • Share this:
ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಕಾಂಗ್ರೆಸ್ ಉಳಿದ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

ಈ ಹಿಂದೆ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಆರು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು. ಇದೀಗ ಅರು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಶಿವಾಜಿನಗರದಿಂದ ಕೊನೆಗೂ ರಿಜ್ವಾನ್ ಅರ್ಷದ್ ಅವರನ್ನು ಅಭ್ಯರ್ಥಿ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಹಿರಿಯರ ಅಸಮಾಧಾನದ ನಡುವೆಯೇ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮಣೆ ಹಾಕಿದೆ. ಇನ್ನು ಬಿಜೆಪಿಯಿಂದ ಕಾಂಗ್ರೆಸ್​ಗೆ ಬಂದಿದ್ದ ರಾಜು ಕಾಗೆಗೆ ಕಾಗವಾಡದಿಂದ ಟಿಕೆಟ್ ನೀಡಲಾಗಿದೆ.


  • ಅಥಣಿ- ಗಜಾನನ ಬಾಲಚಂದ್ರ ಮಂಗಸೂಲಿ

  • ಕಾಗವಾಡ- ರಾಜುಕಾಗೆ

  • ಗೋಕಾಕ್ - ಲಖನ್ ಜಾರಕಿಹೊಳಿ

  • ವಿಜಯನಗರ - ವೆಂಕಟರಾವ್ ಘೋರ್ಪಡೆ
  • ಶಿವಾಜಿನಗರ- ರಿಜ್ವಾನ್ ಅರ್ಷದ್

  • ಕೆ.ಆರ್.ಪೇಟೆ- ಕೆ.ಬಿ.ಚಂದ್ರಶೇಖರ್


First published:November 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ