ಬೆಂಗಳೂರು: ಕಾಂಗ್ರೆಸ್ ಮುಖಂಡ ರಮೇಶ್ ಬಾಬು (Ramesh Babu) ಹೊಸ ಬಾಂಬ್ ಸಿಡಿಸಿದ್ದಾರೆ. ವರುಣಾದಲ್ಲಿ (Varuna) ವಿಜಯೇಂದ್ರನನ್ನು (BY Vijayendra) ನಿಲ್ಲಿಸುವಂತೆ ಯಡಿಯೂರಪ್ಪಗೆ (BS Yediyurappa) ಆಪ್ತರು ಒತ್ತಡ ಹಾಕುತ್ತಿದ್ದಾರಂತೆ. ಈ ಕುರಿತು ಕಾಂಗ್ರೆಸ್ (Congress) ಮುಖಂಡ ರಮೇಶ್ ಬಾಬು ಹೊಸ ಬಾಂಬ್ ಸಿಡಿಸಿದ್ದಾರೆ. ವರುಣಾಗೆ ವಿಜಯೇಂದ್ರ ಕರೆತರಲು ಶೋಭಾ ಕರಂದ್ಲಾಜೆ (Shobha Karandlaje) ಮೂಲಕ ಒತ್ತಡ ಹಾಕಿಸಿದ್ದಾರೆ. ವಿಜಯೇಂದ್ರ ಮೇಲೆ ಹಲವು ಪ್ರಕರಣಗಳಿವೆ. ಇದನ್ನು ಕ್ಲಿಯರ್ ಮಾಡಲು ವರುಣಾ ಆಫರ್ ನೀಡಿದ್ದಾರಂತೆ. ‘ಅಪ್ಪ-ಮಗನಿಗೆ ಇಷ್ಟವಿಲ್ಲದಿದ್ದರೂ ಸ್ಪರ್ಧೆಗೆ ಒಳಸಂಚು ರೂಪಿಸಿದ್ದಾರೆ ಅಂತ ರಮೇಶ್ ಬಾಬು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಬಾಬು ಅವರು, ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಮಾಡಬೇಕು ಎಂದು ಒತ್ತಡ ತಂದಿದ್ದಾರೆ. ಶೋಭಾ ಕರಂದ್ಲಾಜೆ ಮೂಲಕ ಯಡಿಯೂರಪ್ಪಗೆ ಒತ್ತಡ ಹಾಕುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು.
ಬಿಎಸ್ವೈಗೆ ಕಣ್ಣೀರು ಹಾಕಿಸಿದ್ದರು, ಪುತ್ರನಿಗೆ ಎಂಎಲ್ಸಿ ಮಾಡಿ ಮಂತ್ರಿ ಮಾಡಬೇಕು ಎಂದಿದ್ದರು. ಅದು ಆಗಲಿಲ್ಲ, ಈಗ ಯಡಿಯೂರಪ್ಪಗೆ ಮತ್ತೆ ಆತಂಕ ಶುರುವಾಗಿದೆ. ಶಿಕಾರಿಪುರದಿಂದ ಟೆಕೆಟ್ ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನವೇ ಯಡಿಯೂರಪ್ಪ ಹೇಳಿದ್ದರು, ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ.
ವಿಜಯೇಂದ್ರ ಸ್ಪರ್ಧೆ ಕುರಿತಂತೆ ಬಿಎಸ್ ಯಡಿಯೂರಪ್ಪ
ಇತ್ತ, ವಿಜಯೇಂದ್ರ ಸ್ಪರ್ಧೆ ಕುರಿತಂತೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡುತ್ತಾರೆ. ವರುಣಾದಲ್ಲಿ ವಿಜಯೇಂದ್ರ ನಿಲ್ಲಬೇಕು ಅಂತ ಬಹಳ ಒತ್ತಡ ಇದೆ. ಆದರೆ ನಾನು ಬಹಳ ಹಿಂದೆಯೇ ವರುಣಾದಲ್ಲಿ ಒತ್ತಡ ಇದ್ದರೂ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಬೇಕು ಅಂತ ಹೇಳಿದ್ದೇನೆ. ವರುಣಾದಲ್ಲಿ ವಿಜಯೇಂದ್ರ ಯಾವುದೇ ಕಾರಣಕ್ಕೆ ಸ್ಪರ್ಧೆ ಮಾಡಲ್ಲ. ಶಿಕಾರಿಪುರದಲ್ಲೇ ಸ್ಪರ್ಧೆ ಮಾಡುವಂತೆ ನಾನು ವಿಜಯೇಂದ್ರಗೆ ಹೇಳಿದ್ದೇನೆ. ವಿಜಯೇಂದ್ರ ವರುಣಾದಲ್ಲಿ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ