• Home
  • »
  • News
  • »
  • state
  • »
  • Congress Protest: ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?

Congress Protest: ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?

ಶಾಸಕಿ ಸೌಮ್ಯಾ ರೆಡ್ಡಿರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕಿ ಸೌಮ್ಯಾ ರೆಡ್ಡಿರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕಿ ಸೌಮ್ಯಾ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆಯುವ ವೇಳೆ ಹೈಡ್ರಾಮಾವೇ ನಡೆಯಿತು. ಮಹಿಳಾ ಪೊಲೀಸರು ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದೊಯ್ದಿದ್ದಕ್ಕೆ ಆಕ್ರೋಶ ಉಂಟಾಯಿತು.

  • Share this:

ಬೆಂಗಳೂರು: ಕಾಂಗ್ರೆಸ್​ (Congress) ನಾಯಕ ರಾಹುಲ್​ ಗಾಂಧಿಯವರನ್ನು (Rahul Gandhi) ನ್ಯಾಷನಲ್​ ಹೆರಾಲ್ಡ್​​ ಪ್ರಕರಣದಲ್ಲಿ ಸತತ 3 ದಿನಗಳ ಕಾಲ ದೆಹಲಿಯಲ್ಲಿ ED ವಿಚಾರಣೆಗೆ ಒಳಪಡಿಸಿದ್ದನ್ನು ವಿರೋಧಿ ರಾಜ್ಯ ಕಾಂಗ್ರೆಸ್​ ನಾಯಕರು (Karnataka Congress Leaders) ಇಂದು ರಾಜಭವನ ಚಲೋ (Rajbhavan Chalo) ಪಾದಯಾತ್ರೆಯನ್ನು ನಡೆಸಿದರು. ಕೆಪಿಸಿಸಿ ಡಿ.ಕೆ.ಶಿವಕುಮಾರ್​ ಸೂಚನೆ ಮೇರೆಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​​ನ ಪ್ರಮುಖ ನಾಯಕರು, ಕಾರ್ಯಕರ್ತರು ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಿಂದ ರಾಜಭವನ ಚಲೋಗೆ ಮುಂದಾಗಿದ್ದರು. ಆದರೆ ನಾಯಕರ ಪಾದಯಾತ್ರೆ ತಿಮ್ಮಯ್ಯ ರಸ್ತೆ ತಲುಪುತ್ತಿದ್ದಂತೆ ಪೊಲೀಸರು ಸಿದ್ದರಾಮಯ್ಯ, ಪರಮೇಶ್ವರ್​ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡರು. ರಸ್ತೆಯಲ್ಲೇ ಕೂತು ಪ್ರತಿಭಟನೆಗೆ ಮುಂದಾದ ಸಿದ್ದರಾಮಯ್ಯರನ್ನು ಬಲವಂತವಾಗಿ ವಶಕ್ಕೆ ಪಡೆಯಲಾಯಿತು. ನೂರಾರು ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದುಕೊಂಡರು.


ವಶಕ್ಕೆ ಪಡೆಯುವ ವೇಳೆ ಹೈಡ್ರಾಮಾ


ಶಾಸಕಿ ಸೌಮ್ಯಾ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆಯುವ ವೇಳೆ ಹೈಡ್ರಾಮಾವೇ ನಡೆಯಿತು. ಮಹಿಳಾ ಪೊಲೀಸರು ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದೊಯ್ದಿದ್ದಕ್ಕೆ ಆಕ್ರೋಶ ಉಂಟಾಯಿತು. ಪೊಲೀಸರು ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ಮಧ್ಯೆ ಸಣ್ಣ ಪ್ರಮಾಣದ ಘರ್ಷಣೆಯೂ ನಡೆಯಿತು. ಕೆಲವರಿಗೆ ಗಾಯಗಳಾಗಿರುವ ಬಗ್ಗೆಯೂ ವರದಿಯಾಗಿದೆ.


ಸುಧಾಕರ್​ಗೆ ಡಿಕೆಶಿ ತಿರುಗೇಟು


ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ , ಕಾಂಗ್ರೆಸ್ ಪ್ರತಿಭಟನೆಯಿಂದ ಕೋವಿಡ್ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಸಚಿವ ಸುಧಾಕರ್​​ ಹೇಳಿಕೆಗೆ ತಿರುಗೇಟು ನೀಡಿದ್ರು. ಬಿಜೆಪಿಯಲ್ಲಿ ಯಾರ ಯಾರು ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈತ ಆರೋಗ್ಯ ಸಚಿವ ಮೊದಲು ಅವರ ಮೇಲೆ ಕೇಸ್​ ಹಾಕಲಿ. ಬರೀ ಕಾಂಗ್ರೆಸ್ ನವರ ಮೇಲೆ ಕೇಸ್ ಹಾಕ್ತಿದ್ದಾರೆ. ಕೆ.ಎಸ್.ಈಶ್ವರ ಅವರ ಮೇಲೂ ಕೇಸ್ ಹಾಕಿ, ಬಿಜೆಪಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಅವರ ಮೇಲೂ ಯಾಕೆ ಇನ್ನು ಕೇಸ್ ಹಾಕಿಲ್ಲ.  ನಮ್ಮ ಹಕ್ಕು ಹೋರಾಟದ ಹಕ್ಕು. ದೇಶದಲ್ಲಿ ಹೋರಾಟ ಮಾಡುವ ಹಕ್ಕು ಸಂವಿಧಾನ ನಮಗೆ ನೀಡಿದೆ. ಇದೇ ಹೋರಾಟದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ರಾಹುಲ್‌ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕ್ತಿದ್ದಾರೆ. ಬಿಜೆಪಿ ನಮ್ಮನ್ನು  ಹೆದರಿಸುವ ಬೆದರಿಸುವ ಕೆಲಸ ಮಾಡ್ತಿದ್ದಾರೆ . ಬಿಜೆಪಿ ದ್ವೇಷದ ರಾಜಕಾರಣ ಮಾಡ್ತಿದೆ. ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಾರ್ಟಿಯ ಆಸ್ತಿ. ಎಂಗ್ ಇಂಡಿಯಾ ಕೂಡ ಕಾಂಗ್ರೆಸ್ ಆಸ್ತಿ ಎಂದರು.


ಇದನ್ನೂ ಓದಿ: Congress Protest: ಇಂದು ಮತ್ತೆ ಕಾಂಗ್ರೆಸ್ ಪ್ರತಿಭಟನೆ: ಮತ್ತೆ ಕೊರೊನಾ ಹೆಚ್ಚಾದ್ರೆ ಅವರೇ ಹೊಣೆ ಎಂದ ಸಚಿವ ಸುಧಾಕರ್


56 ಇಂಚಿನ ಎದೆ ಇದ್ದರೆ ರಾಜಕೀಯವಾಗಿ ಫೇಸ್ ಮಾಡಲಿ


ಕಾಂಗ್ರೆಸ್​ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಎಐಸಿಸಿ ಕಚೇರಿಯಲ್ಲಿ ನಮ್ಮ ಸಂಸದರು, ಮಾಜಿ ಸಿಎಂಗಳನ್ನು ಬಂಧಿಸಿದ್ದಾರೆ. ನಮ್ಮ ನಾಯಕರ ಮೇಲೆ  ಹಲ್ಲೆ ಮಾಡಿದ್ದಾರೆ. ಎಐಸಿಸಿ ಕಚೇರಿಯಲ್ಲಿ 200 ಕ್ಕೂ ಹೆಚ್ಚು ಕೆಲಸ ಮಾಡ್ತಾರೆ, ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಧಾನಿ ಮೋದಿಗೆ 56 ಇಂಚಿನ ಎದೆ ಇದ್ದರೆ ರಾಜಕೀಯವಾಗಿ ಫೇಸ್ ಮಾಡಲಿ. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು. ಇದು ನರಹೇಡಿ ಸರ್ಕಾರ. ಆರ್ ಎಸ್.ಎಸ್ ದೇಶದಲ್ಲಿ ಶ್ರೀಮಂತ ಎನ್.ಜಿ.ಓ. RSS ಆದಾಯದ ಮೂಲ ಯಾವುದು. ಯತ್ನಾಳ ಸಿಎಂ ಆಗಲು 2500 ಕೋಟಿ ಬೇಕು ಎಂದಾಗ ಇಡಿ ವಿಚಾರಣೆ ಆಯಿತಾ. ಬೊಮ್ಮಾಯಿ ಸೇರಿದಂತೆ ಕೆಲವರ ಮೇಲೆ ಬಿಟ್ ಕಾಯಿನ್ ಆರೋಪ ಬಂತು. ಅದರ ಮೇಲೆ ಇಡಿ ವಿಚಾರಣೆ ಆಯಿತಾ ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ಹೋರಾಟದಿಂದ ಕೋವಿಡ್ ಹೆಚ್ಚಳ ಎಂಬ ಸುಧಾಕರ್ ಹೇಳಿಕೆಗೆ ಕಿಡಿಕಾರಿದರು. ಕೋವಿಡ್ ಸಂದರ್ಭದಲ್ಲಿ ನಾಲ್ಕು ಸಾವಿರ ಕೋಟಿ ಹೊಡೆದ್ರು. ಇದೀಗ ಮತ್ತೊಮ್ಮೆ ಕೋವಿಡ್ ಬರಿಸಿ ಹಣ ಹೊಡೆಯಬೇಕು. ಆರೋಗ್ಯ ಸಚಿವರು ಅನಾರೋಗ್ಯದಿಂದ ವರ್ತಿಸಬಾರದು ಎಂದರು.

Published by:Kavya V
First published: