• Home
  • »
  • News
  • »
  • state
  • »
  • Poster Politics: ನೊಂದ ಗುತ್ತಿಗೆದಾರರು ಪ್ರಾಯೋಜಿಸುವ Guess & Win Contest; ಸಚಿವ ಮುನಿರತ್ನ ವಿರುದ್ಧ ಪೋಸ್ಟರ್ ವಾರ್​

Poster Politics: ನೊಂದ ಗುತ್ತಿಗೆದಾರರು ಪ್ರಾಯೋಜಿಸುವ Guess & Win Contest; ಸಚಿವ ಮುನಿರತ್ನ ವಿರುದ್ಧ ಪೋಸ್ಟರ್ ವಾರ್​

ಪೋಸ್ಟರ್​ ವಾರ್

ಪೋಸ್ಟರ್​ ವಾರ್

10 ಸಾವಿರ ಕೋಟಿ ರೂ. ಕಾಮಗಾರಿ ತೋರಿಸುವುದಾದರೆ ಕರೆ ಮಾಡಿ ಅತ್ಯಾಕರ್ಷಕ ಉಡುಗೊರೆ ಗೆಲ್ಲಿ. 8447704040 ಈ ನಂಬರ್ ಗೆ ಕಾಲ್ ಮಾಡಿ ಎಂದು ಬರೆದು ಪೋಸ್ಟರ್​ ಹಾಕಲಾಗಿದೆ.

  • Share this:

ರಾಜ್ಯದಲ್ಲಿಯ ಪೇಸಿಎಂ ಪೋಸ್ಟರ್ (PAYCM Poster) ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಾಂಗ್ರೆಸ್ (Congress) ನಡೆಸಿದ ಪ್ರತಿಭಟನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದ್ದವು. ಇದೀಗ ಅದೇ ಮಾದರಿಯಲ್ಲಿ ಆರ್.ಆರ್.ನಗರ ಶಾಸಕ, ಸಚಿವ ಮುನಿರತ್ನ (Minister Munirathna) ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ. ಇಂದು ಬೆಳಗ್ಗೆ ಆರ್.ಆರ್​.ನಗರದ (RR Nagara) ಪ್ರಮುಖ ಬೀದಿಗಳಲ್ಲಿ Guess & Win Contest ಹೆಸರಿನಡಿ ದೊಡ್ಡ ದೊಡ್ಡ ಪೋಸ್ಟರ್​​ಗಳನ್ನು ಅಂಟಿಸಲಾಗಿದೆ. ನಿನ್ನೆಯಷ್ಟೇ ಸಚಿವ ಮುನಿರತ್ನ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಮತ್ತು ಸಂಸದ ಡಿಕೆ ಸುರೇಶ್ (MP DK Suresh) ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವಾಗ್ದಾಳಿ ಬೆನ್ನಲ್ಲೇ ಇಂದು ಬೆಳಗ್ಗೆ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವರ ವಿರುದ್ಧ ಪೋಸ್ಟರ್​ಗಳು ಕಾಣಿಸುತ್ತಿವೆ.


ನೊಂದ ಗುತ್ತಿಗೆದಾರರು ಪ್ರಾಯೋಜಿಸುವ Guess & Win Contest, ಆರ್ ಆರ್ ನಗರಕ್ಕೆ ಮಂಜೂರಾಗಿದ್ದ 10 ಸಾವಿರ ಕೋಟಿ ರೂ. ಎಲ್ಲಿ ಹೋಯ್ತು? 2013ರಿಂದ ಇಲ್ಲಿಯವರೆಗೆ 10 ಸಾವಿರ ಕೋಟಿ ರೂ.ಗಳನ್ನು ಶಾಸಕ ಮುನಿರತ್ನಂ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ ರಸ್ತೆ, ಪಾರ್ಕ್, ಕೆರೆಗೆ ವಿನಿಯಪೊಗಿಸಿರುವುದು 2 ರಿಂದ 3 ಸಾವಿರ ಕೋಟಿ ರೂಪಾಯಿ. ಉಳಿದ ಹಣ ಎಲ್ಲಿ ಹೋಯ್ತು? ಊಹಿಸಿ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ.


ಮುನಿರತ್ನ ಕಚೇರಿ ಬಳಿಯೇ ಪೋಸ್ಟರ್


10 ಸಾವಿರ ಕೋಟಿ ರೂ. ಕಾಮಗಾರಿ ತೋರಿಸುವುದಾದರೆ ಕರೆ ಮಾಡಿ ಅತ್ಯಾಕರ್ಷಕ ಉಡುಗೊರೆ ಗೆಲ್ಲಿ. 8447704040 ಈ ನಂಬರ್ ಗೆ ಕಾಲ್ ಮಾಡಿ ಎಂದು ಬರೆದು ಪೋಸ್ಟರ್​ ಹಾಕಲಾಗಿದೆ. ಮುನಿರತ್ನ ಅವರ ಕಚೇರಿ, ಆರ್ ಆರ್ ನಗರ ಆರ್ಚ್, ಬಸ್ ನಿಲ್ದಾಣಗಳಲ್ಲಿ ಪೋಸ್ಟರ್​ಗಳನ್ನು ಅಂಟಿಸಲಾಗಿದೆ.


ಪೇಸಿಎಂ ಪೋಸ್ಟರ್ ಪ್ರಕರಣ


ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರ ಬಗ್ಗೆ ಪೇಸಿಎಂ ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಸೂಕ್ತ ತನಿಖೆಗಾಗಿ (Investigation) ಕೇಸ್​ನನ್ನು ಸಿಸಿಬಿಗೆ ವರ್ಗಾವಣೆ ಮಾಡಿತ್ತು.


ಇದನ್ನೂ ಓದಿ:  Sriramulu: ಸ್ನೇಹಕ್ಕಾಗಿ ಜೀವ ಕೊಡಲು ನಾನು ರೆಡಿ; ಜನಾರ್ದನ ರೆಡ್ಡಿ ಜೊತೆ ನಾನಿದ್ದೇನೆ ಎಂದ್ರು ರಾಮುಲು


ಬೆಂಗಳೂರಿನ ಹತ್ತಕ್ಕೂ ಹೆಚ್ಚು ಕಡೆ  ಕಿಡಿಗೇಡಿಗಳು ಪೇ ಸಿಎಂ ಎನ್ನುವ  ಪೋಸ್ಟರ್ (Poster) ಅಂಟಿಸಿದ್ದಾರೆ. ಈ ಸಂಬಂಧ ಹಲವು ಠಾಣೆಗಳಲ್ಲಿ FIR ಕೂಡ ದಾಖಲಾಗಿತ್ತು. ಸದಾಶಿವನಗರ, ಹೈಗ್ರೌಂಡ್ಸ್, ಶೇಷಾದ್ರಿಪುರಂ, ಭಾರತೀನಗರ ಸೇರಿದಂತೆ ಐದಕ್ಕೂ ಹೆಚ್ಚು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಎಲ್ಲಾ ಪ್ರಕರಣಗಳು ಸಿಸಿಬಿಗೆ (CCB) ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.


ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ


ಇದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾಡಿದ ಅನ್ಯಾಯ ಎಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಿಡಿಕಾರಿದ್ರು. ಅಷ್ಟೇ ಅಲ್ಲದೇ ಈ ಕೃತ್ಯವೆಸಗಿದವರನ್ನು ಬಂಧಿಸುವಂತೆ ಪೊಲೀಸ್​ ಠಾಣೆಗೆ ದೂರು ಸಹ ನೀಡಿದ್ದರು. ಎಲ್ಲಾ ಪ್ರಕರಣಗಳನ್ನ ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯಿಂದ ತನಿಖೆಗೆ ಆದೇಶ ನೀಡಿದ್ದಾರೆ. ಪ್ರಕರಣ ವರ್ಗಾವಣೆ ಆಗ್ತಿದ್ದಂತೆಯೇ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.


ಇದನ್ನೂ ಓದಿ:  Janardhan Reddy: ರಾಜಕೀಯಕ್ಕೆ ಜನಾರ್ದನ ರೆಡ್ಡಿ ಪತ್ನಿ? ಹೊಸ ಪಕ್ಷ ಸ್ಥಾಪನೆ ಮಾಡ್ತಾರಾ?


ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದು, ಪೇ ಸಿಎಂ ಅಭಿಯಾನ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ನಡೆಸಿರುವ ಷಡ್ಯಂತರ ಎಂದು ಹೇಳಿದ್ದರು.

Published by:Mahmadrafik K
First published: