ಬೆಂಗಳೂರು: ರೈತರ ಸಾಲ ಮನ್ನಾ (Farm Loan Waivers) ಮಾಡುವುದರಿಂದ ದೇಶದ ಆರ್ಥಿಕತೆಗೆ ಯಾವುದೇ ರೀತಿಯ ಉಪಯೋಗವಿಲ್ಲ ಎಂದು ಹೇಳಿದ್ದ ಬಿಜೆಪಿ (BJP) ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಕಾಂಗ್ರೆಸ್ (Congress) ನಾಯಕರು ಪ್ರತಿಭಟನೆ ನಡೆಸಿದ್ದಾರೆ. ತೇಜಸ್ವಿ ಸೂರ್ಯ ಹೇಳಿಕೆ ಕುರಿತಂತೆ ಆಕ್ರೋಶ ಹೊರ ಹಾಕಿರುವ ಯೂಥ್ ಕಾಂಗ್ರೆಸ್ ಕಾರ್ಯಕರ್ತರು (Youth Congress), ತೇಜಸ್ವಿ ಸೂರ್ಯರನ್ನು ಗಡಿಪಾರು ಮಾಡುವಂತೆ ಘೋಷಣೆ ಕೂಗಿದರು. ತೇಜಸ್ವಿ ರೈತ ವಿರೋಧಿ ಸಂಸದ. ಯುಪಿಎ ಸರ್ಕಾರದ (UPA Government) ಅವಧಿಯಲ್ಲಿ ರೈತರ ಸಾಲ ಮನ್ನಾ ಆಗಿತ್ತು. ಆದರೆ ಈಗ ಅದಾನಿ ಲಕ್ಷಾಂತರ ಕೋಟಿ ರೂಪಾಯಿ ಲೂಟಿ ಮಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಬಾರದು, ಅದಾನಿ ಸಾಲ ಮನ್ನಾ ಮಾಡಬೇಕಾ? ತೇಜಸ್ವಿಯನ್ನ ಲೋಕಸಭೆ ಸದಸ್ಯತ್ವದಿಂದ ಅಮಾನತು ಮಾಡಬೇಕು ಎಂದು ಪ್ರತಿಭಟನಾನಿರತ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಬೆಲೆ ಗೊತ್ತಿಲ್ಲದೆ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ ಅಂತ ಆಕ್ರೋಶ
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ, ಚೈಲ್ಡ್ ಸೂರ್ಯ, ನಾಲಾಯಕ್ ಸೂರ್ಯ ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾನೆ. ರೈತರು ದೇಶಕ್ಕೆ ಅನ್ನ ಕೊಡ್ತಾರೆ. ಅದರ ಬೆಲೆ ಗೊತ್ತಿಲ್ಲದೆ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ. ಕಾರ್ಪೋರೇಟ್ ಕಂಪನಿಗಳು ಸಾಲ ಮಾಡಿದರೆ ಓಕೆ ಅಂದಿದ್ದಾನೆ. ಕೂಡಲೇ ತೇಜಸ್ವಿ ಸೂರ್ಯ ಗಡಿಪಾರು ಮಾಡಬೇಕು. ರೈತರ ವಿರುದ್ಧ ಮಾತನಾಡಿದ್ದಕ್ಕೆ ತಕ್ಷಣ ಕ್ಷಮೆ ಕೇಳಬೇಕು ಒತ್ತಾಯ ಮಾಡಿದ್ದಾರೆ.
ತೇಜಸ್ವಿ ಸೂರ್ಯ ಅವರ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್, ಮಾನ್ಯ ಸಂಸದರೇ ನಿಮ್ಮದೇ ಪಕ್ಷದವರು ನಿಮ್ಮ ಮಾತು ಕೇಳಿ ರೈತರ ಸಾಲ ಮನ್ನಾ ಮಾಡುವುದನ್ನು ಕೈ ಬಿಟ್ಟಿದೆಯಾ? ನಿಮ್ಮ ಆಡಳಿತಾವಧಿಯಲ್ಲಿ ಉದ್ಯಮಿಗಳ ಸಾಲಮನ್ನಾ ಮಾತ್ರ ಮಾಡಲಾಗುವುದಾ? ಎಂದು ಪ್ರಶ್ನೆ ಮಾಡಿದೆ.
ರೈತರ ಸಾಲ ಮನ್ನಾ ಮಾಡುವುದು ನಿಷ್ಪ್ರಯೋಜಕ ಎಂದಿರುವ @Tejasvi_Surya ಅವರೇ,
ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು NPA ಹೆಸರಲ್ಲಿ ಎಳ್ಳುನೀರು ಬಿಟ್ಟಿದ್ದು ಆರ್ಥಿಕತೆಗೆ ಉಪಯೋಗವೇ❓
ತಾಲಿಬಾನಿಗಳ ಅಫ್ಘಾನಿಸ್ತಾನಕ್ಕೆ ಪ್ರತಿ ವರ್ಷ ನೂರಾರು ಕೋಟಿ ದಾನ ಮಾಡುವುದು ದೇಶದ ಆರ್ಥಿಕತೆಗೆ ಸಹಾಯಕವೇ❓#ರೈತವಿರೋಧಿಬಿಜೆಪಿ
— Karnataka Congress (@INCKarnataka) February 7, 2023
ಕರ್ನಾಟಕ ಕಾಂಗ್ರೆಸ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ರೈತರ ಸಾಲ ಮನ್ನಾ ಮಾಡುವುದು ನಿಷ್ಪ್ರಯೋಜಕ ಎಂದಿರುವ ತೇಜಸ್ವಿ ಸೂರ್ಯ ಅವರೇ, ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು ಎನ್ಪಿಎ (NPA) ಹೆಸರಲ್ಲಿ ಎಳ್ಳುನೀರು ಬಿಟ್ಟಿದ್ದು ಆರ್ಥಿಕತೆಗೆ ಉಪಯೋಗವೇ? ತಾಲಿಬಾನಿಗಳ ಅಫ್ಘಾನಿಸ್ತಾನಕ್ಕೆ ಪ್ರತಿ ವರ್ಷ ನೂರಾರು ಕೋಟಿ ದಾನ ಮಾಡುವುದು ದೇಶದ ಆರ್ಥಿಕತೆಗೆ ಸಹಾಯಕವೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ತೇಜಸ್ವಿ ಸೂರ್ಯ ಹೇಳಿದ್ದೇನು?
ಕಾರ್ಯಕ್ರಮವೊಂದರಲ್ಲಿ ತೇಜಸ್ವಿ ಸೂರ್ಯ ಮಾತನಾಡಿರುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು, 2009ನೇ ಇಸವಿಯಲ್ಲಿ ಯುಪಿಎ ಸರ್ಕಾರ ಚುನಾವಣೆಗೆ ಹೋಗಬೇಕಿತ್ತು. 2008ರ ಫುಲ್ ಬಜೆಟ್ನಲ್ಲಿ ಅವರು ಮಾಡಿದ್ದು ಏನು ಎಂದರೆ, ಒಂದು ಲಕ್ಷ ಕೋಟಿ ರೂಪಾಯಿಯ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಎಲೆಕ್ಷನ್ ಗೆಲ್ಲಬೇಕು ಅನ್ನೋ ಉದ್ದೇಶದಿಂದ ಸಾಲ ಮನ್ನಾ ಮಾಡಿದ್ದರು. ರೈತರ ಸಾಲ ಮನ್ನಾ ಮಾಡಿದ್ದು ಒಂದು ತಾತ್ಕಾಲಿಕ ಪರಿಹಾರ ಮಾತ್ರ. ಇದರಿಂದ ರೈತರಿಗೆ ಒಂದಿಷ್ಟ ಉಪಯೋಗ ಆಯ್ತು. ಆದರೆ ಇದರಿಂದ ದೇಶಕ್ಕೆ ಯಾವುದೇ ರೀತಿಯ ಆರ್ಥಿಕ ಉಪಯೋಗ ಆಗಿಲ್ಲ ಎಂದು ಹೇಳಿದ್ದರು.
ಮಾನ್ಯ ಸಂಸದರೇ ನಿಮ್ಮದೇ ಪಕ್ಷದವರು ನಿಮ್ಮ ಮಾತು ಕೇಳಿ ರೈತರ ಸಾಲ ಮನ್ನಾ ಮಾಡುವುದುನ್ನು ಕೈ ಬಿಟ್ಟಿದೆಯಾ?@tejasvisurya
ನಿಮ್ಮ ಆಡಳಿತಾವಧಿಯಲ್ಲಿ ಉದ್ಯಮಿಗಳ ಸಾಲಮನ್ನಾ ಮಾತ್ರ ಮಾಡಲಾಗುವುದಾ?#IYCKarnataka #INCKarnataka pic.twitter.com/RFsc7SzKgp
— IYC Karnataka (@IYCKarnataka) February 7, 2023
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿದ್ದು, ನಾನು ಮುಖ್ಯಮಂತ್ರಿಯಾಗಿರುವಾಗ 22 ಲಕ್ಷದ 27 ಸಾವಿರ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 50,000 ರೂಪಾಯಿ ವರೆಗಿನ ಒಟ್ಟು 8,165 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಬಿಎಸ್ ಯಡಿಯೂರಪ್ಪ ಯಡಿಯೂರಪ್ಪ, ಯಾರಾದರೂ ಒಬ್ಬರು ರೈತರ ಸಾಲ ಮನ್ನಾ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ