ಬೆಂಗಳೂರು: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಅವರನ್ನು ಜಾರಿ ನಿರ್ದೇಶನಾಲಯ (ED Questions Rahul Gandhi) ವಿಚಾರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (Congress Protest) ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಹೀಗಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ (Bengaluru Traffic) ದಟ್ಟಣೆ ಕಂಡುಬಂದಿದೆ. ಪ್ರತಿಭಟನೆಯ ವೇಳೆ ಆಂಬ್ಯುಲೆನ್ಸ್ ಕೂಡ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದ್ದಾಗಿ ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ. ಅಲ್ಲದೇ ಕಾಂಗ್ರೆಸ್ ಪ್ರತಿಭಟನೆ ವೇಳೆ ನಂದಿನಿ ಲೇಔಟ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ರಾಮಕೃಷ್ಣ ಎಂಬುವವರಿಗೆ ಹೃದಯಾಘಾತವಾಗಿದೆ. ಪ್ರತಿಭಟನೆಯ ವೇಳೆ ವಿ.ರಾಮಕೃಷ್ಣ ಅಸ್ವಸ್ಥಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಭಟನೆ ವೇಳೆ ಬಸ್ನಲ್ಲಿ ಕುಳಿತಿದ್ದ ವೇಳೆಯೇ ರಾಮಕೃಷ್ಣ ಅವರಿಗೆ ಹೃದಯಾಘಾತವಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಫೋರ್ಟೀಸ್ ಆಸ್ಪತ್ರೆಗೆ ನಂದಿನಿ ಲೇಔಟ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಅವರನ್ನು ದಾಖಲು ಮಾಡಲಾಗಿದೆ. ಈವೇಳೆ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಸ್ಪತ್ರೆಗೆ ತೆರಳಿ ವಿ. ರಾಮಕೃಷ್ಣ ಅವರ ಆರೋಗ್ಯ ವಿಚಾರಿಸಿದ್ದಾರೆ.
Karnataka | Traffic snarl seen in Bengaluru ahead of Congress protest and march over Rahul Gandhi's questioning by ED. An ambulance too seen stuck in the traffic. pic.twitter.com/KymdKVzb6c
ಕೆಪಿಸಿಸಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ನ ಪ್ರಮುಖ ನಾಯಕರು, ಕಾರ್ಯಕರ್ತರು ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಿಂದ ರಾಜಭವನ ಚಲೋಗೆ ಮುಂದಾಗಿದ್ದರು. ಆದರೆ ಕಾಂಗ್ರೆಸ್ ನಾಯಕರ ಪಾದಯಾತ್ರೆ ತಿಮ್ಮಯ್ಯ ರಸ್ತೆ ತಲುಪುತ್ತಿದ್ದಂತೆ ಪೊಲೀಸರು ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡರು.
ರಸ್ತೆಯಲ್ಲೇ ಕೂತು ಪ್ರತಿಭಟನೆಗೆ ಮುಂದಾದ ಸಿದ್ದರಾಮಯ್ಯರನ್ನು ಬಲವಂತವಾಗಿ ವಶಕ್ಕೆ ಪಡೆಯಲಾಯಿತು. ನೂರಾರು ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದುಕೊಂಡರು.
ವಶಕ್ಕೆ ಪಡೆಯುವ ವೇಳೆ ಹೈಡ್ರಾಮಾ ಶಾಸಕಿ ಸೌಮ್ಯಾ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆಯುವ ವೇಳೆ ಹೈಡ್ರಾಮಾವೇ ನಡೆಯಿತು. ಮಹಿಳಾ ಪೊಲೀಸರು ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದೊಯ್ದಿದ್ದಕ್ಕೆ ಆಕ್ರೋಶ ಉಂಟಾಯಿತು. ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಸಣ್ಣ ಪ್ರಮಾಣದ ಘರ್ಷಣೆಯೂ ನಡೆಯಿತು. ಕೆಲವರಿಗೆ ಗಾಯಗಳಾಗಿರುವ ಬಗ್ಗೆಯೂ ವರದಿಯಾಗಿದೆ.
56 ಇಂಚಿನ ಎದೆ ಇದ್ದರೆ ರಾಜಕೀಯವಾಗಿ ಫೇಸ್ ಮಾಡಲಿ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಎಐಸಿಸಿ ಕಚೇರಿಯಲ್ಲಿ ನಮ್ಮ ಸಂಸದರು, ಮಾಜಿ ಸಿಎಂಗಳನ್ನು ಬಂಧಿಸಿದ್ದಾರೆ. ನಮ್ಮ ನಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ಎಐಸಿಸಿ ಕಚೇರಿಯಲ್ಲಿ 200 ಕ್ಕೂ ಹೆಚ್ಚು ಕೆಲಸ ಮಾಡ್ತಾರೆ, ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಧಾನಿ ಮೋದಿಗೆ 56 ಇಂಚಿನ ಎದೆ ಇದ್ದರೆ ರಾಜಕೀಯವಾಗಿ ಫೇಸ್ ಮಾಡಲಿ. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು. ಇದು ನರಹೇಡಿ ಸರ್ಕಾರ. ಆರ್ ಎಸ್.ಎಸ್ ದೇಶದಲ್ಲಿ ಶ್ರೀಮಂತ ಎನ್.ಜಿ.ಓ. RSS ಆದಾಯದ ಮೂಲ ಯಾವುದು. ಯತ್ನಾಳ ಸಿಎಂ ಆಗಲು 2500 ಕೋಟಿ ಬೇಕು ಎಂದಾಗ ಇಡಿ ವಿಚಾರಣೆ ಆಯಿತಾ. ಬೊಮ್ಮಾಯಿ ಸೇರಿದಂತೆ ಕೆಲವರ ಮೇಲೆ ಬಿಟ್ ಕಾಯಿನ್ ಆರೋಪ ಬಂತು. ಅದರ ಮೇಲೆ ಇಡಿ ವಿಚಾರಣೆ ಆಯಿತಾ ಎಂದು ಪ್ರಶ್ನಿಸಿದರು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ