Congress Protest: ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಆಗ್ತಿದೆ; ಸಿದ್ದರಾಮಯ್ಯ

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆಯೂ ಇವರು ಇಡಿಯನ್ನು ಛೂ  ಬಿಟ್ಟಿದೆ. ಈ ಮೂಲಕ ಅವರನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಆದೇ ಕಾರಣಕ್ಕೆ ನಾವು ಕಾರ್ಯಕರ್ತ ಜೊತೆ ಅವರಿಗೆ ನೈತಿಕ ಬೆಂಬಲಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ಪ್ರತಿಭಟನೆ

  • Share this:
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi), ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಖಂಡಿಸಿ ಕೈ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು (Congress Leaders) ಮತ್ತು ಕಾರ್ಯಕರ್ತರು ಲಾಲ್ ಬಾಗ್ ಗೇಟ್ ಬಳಿ ಪ್ರತಿಭಟನೆ ಆರಂಭಿಸಿ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೋದಿ ಪ್ರಧಾನಿಯಾದ ಬಳಿಕ ಎಲ್ಲಾ ಸ್ವತಂತ್ರ ಸಂಸ್ಥೆಯನ್ನು ಕೈಗೊಂಬೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಆರ್ ಬಿಐ, ಸಿಎಜೆ, ಇಡಿ, ಐಟಿ ಹೀಗೆ ಎಲ್ಲವನ್ನೂ ಕೂಡ ತಮ್ಮ ತಾಳಕ್ಕೆ ಕುಣಿಸ್ತಿದ್ದಾರೆ. ಐಟಿಯನ್ನು, ಇಡಿಯನ್ನು ವಿರೋಧ ಪಕ್ಷದ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ

ಸ್ವತಂತ್ರ ಭಾರತದಲ್ಲಿ ಯಾವತ್ತೂ ಕೂಡ ಸ್ವತಂತ್ರ ಸಂಸ್ಥೆಯನ್ನು ಕೈಗೊಂಬೆ ಮಾಡಿರುವ ನಿದರ್ಶನ ಇಲ್ಲ. ಆದರೆ ಪ್ರಧಾನಿ ಮೋದಿ ಎಲ್ಲಾ ಸಂಸ್ಥೆಯನ್ನು ಕೈಗೊಂಬೆ ಮಾಡಿದ್ದಾರೆ. ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಶನ್ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇವರು ಸಂವಿಧಾನದ ಎಲ್ಲಾ ಸಂಸ್ಥೆಗಳನ್ನು ಕೈಗೊಂಬೆ ಮಾಡಿದ್ದಾರೆ. ಈ ಮೂಲಕ ಇವರು ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ:  Congress Protest: ಇಡಿ ಮುಂದೆ ಹಾಜರಾದ ರಾಹುಲ್ ಗಾಂಧಿ; ಇತ್ತ ಕಾಂಗ್ರೆಸ್ ಪ್ರತಿಭಟನೆ

ಹಾಗೆಯೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆಯೂ ಇವರು ಇಡಿಯನ್ನು ಛೂ  ಬಿಟ್ಟಿದೆ. ಈ ಮೂಲಕ ಅವರನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಆದೇ ಕಾರಣಕ್ಕೆ ನಾವು ಕಾರ್ಯಕರ್ತ ಜೊತೆ ಅವರಿಗೆ ನೈತಿಕ ಬೆಂಬಲಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ನಿಮ್ಮಿಂದ ನಾವು ದೇಶ ಭಕ್ತಿ ಕಲೀಬೇಕಾ?

ಆರ್ ಎಸ್ ಎಸ್ 1925 ರಲ್ಲಿ ಶುರುವಾಯಿತು, ಅದರ ಸಂಸ್ಥಾಪಕ ಹೆಗಡೇವಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರಾ? ಗೋಳ್ವಾಳ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರಾ? ಅವರ ಸಹಚರರಾದ ನಿಮ್ಮಿಂದ ನಾವು ದೇಶ ಭಕ್ತಿ ಕಲೀಬೇಕಾ? ಮೋದಿಯವರೇ ನೀವು ಪರ್ಮನೆಂಟ್ ಆಗಿ ಪ್ರಧಾನಿಯಾಗಿ ಇರ್ತೀರಾ ಎಂದು ಪ್ರಶ್ನೆ ಮಾಡಿದರು.

ಅಲ್ಲೇ ಗೂಟ ಹೊಡೆದು ಕೂತ್ಕೊಳ್ಳೋಕೆ ಆಗುತ್ತಾ ನಿಮಗೆ..? ಇಲ್ಲ ನೀವು ಶಾಶ್ವತವಾಗಿ ಅಲ್ಲಿ ಕೂರೋಕೆ ಆಗಲ್ಲ.. ಕಾಂಗ್ರೆಸ್ ಇರೋಕೆ ಬಿಡಲ್ಲ ನೆನಪಿರಲಿ. ಇಲ್ಲಿ ಹಾಳಾಗಿರುವ ಶಾಂತಿ ಸುವ್ಯವಸ್ಥೆ ಮರು ಸ್ಥಾಪಿಸಲು ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ. ಇಡಿ ಛೂ ಬಿಟ್ಟು ರಾಹುಲ್ ಗಾಂಧಿ ಸೋನಿಯಾ ಗಾಂಧಿ ಹೆದರಿಸುವ ಕೆಲಸ ಮೋದಿ ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ.

ನೈತಿಕ ಬೆಂಬಲ ವ್ಯಕ್ತಪಡಿಸಲು ಪ್ರತಿಭಟನೆ

ರಾಹುಲ್ ಹಾಗೂ ಸೋನಿಯಾ ಗಾಂಧಿಗೆ ನೈತಿಕ ಬೆಂಬಲ ವ್ಯಕ್ತಪಡಿಸಲು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಕಾನೂನನ್ನು ಅನುಕೂಲಕ್ಕೆ ತಕ್ಕಂತೆ ಬಳಸಲು ಅಲ್ಲ. ಹೆಡ್ಗೆವಾರ್, ಗೋಳ್ವವ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ದೇಶಕ್ಕಾಗಿ ಆರ್ ಎಸ್ ಎಸ್ ತ್ಯಾಗ ಮಾಡಿದ್ಯಾ? ಇವಾಗ ನಮಗೆ ದೇಶಭಕ್ತಿ ಹೇಳಲು ಬಂದಿದ್ದಾರೆ.

ಇದನ್ನೂ ಓದಿ:  Minister Munirathna: ಸಚಿವ ಮುನಿರತ್ನ ವಿರುದ್ಧ ವಿದ್ಯಾರ್ಥಿಗಳಿಂದ ದೂರು; ಯಾಕೆ ಗೊತ್ತಾ?

ಟ್ರಸ್ಟಿಗಳ ಮೇಲೆ ಇಡಿ ಚೂ ಬಿಟ್ಟಿದ್ದೀರಲ್ಲಾ ನಿಮಗೆ ಮಾನ ಮರ್ಯಾದೆ ಇದ್ಯಾ?  ಇಡಿ‌ ಮೂಲಕ ಸೋನಿಯಾ, ರಾಹುಲ್ ಗಾಂಧಿ ಹೆದರಿಸುತ್ತೇವೆ ಎಂದರೆ ಭ್ರಮೆ. ಇದದು ಸಾಂಕೇತಿಕ ಮುಷ್ಕರ ಅಷ್ಟೇ. ಕಾರ್ಯಕರ್ತರು ಬೀದಿಗೆ ಬಂದು ಸರ್ಕಾರಿ ಕಚೇರಿ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Published by:Mahmadrafik K
First published: