• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Congress: BPL ಕಾರ್ಡ್​ ಇದ್ರೆ ಪ್ರತೀ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಫ್ರೀ; ಮತದಾರರಿಗೆ ಕಾಂಗ್ರೆಸ್​ ಪಾಳಯದಿಂದ 3ನೇ ಗ್ಯಾರಂಟಿ!

Congress: BPL ಕಾರ್ಡ್​ ಇದ್ರೆ ಪ್ರತೀ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಫ್ರೀ; ಮತದಾರರಿಗೆ ಕಾಂಗ್ರೆಸ್​ ಪಾಳಯದಿಂದ 3ನೇ ಗ್ಯಾರಂಟಿ!

ಅನ್ನಭಾಗ್ಯ

ಅನ್ನಭಾಗ್ಯ

ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆಗ ಬಿಪಿಎಲ್ ಕುಟುಂಬಗಳಿಗೆ ತಲಾ 7ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. 2019ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕೇಸರಿ ಪಡೆ 5 ಕೆಜಿಗೆ ಇಳಿಸಿತ್ತು. ಎಲೆಕ್ಷನ್​ ಟೈಂನಲ್ಲಿ ಮಂಡಿಸಿದ ಬಜೆಟ್​ನಲ್ಲಿ ಮತ್ತೆ 7 ಕೆಜಿಗೆ ಹೆಚ್ಚಿಸಿದ್ದರು. ಈಗ ಕಾಂಗ್ರೆಸ್​​ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿದೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ (Karnataka Election) ಕೌಂಟ್​​ಡೌನ್​ ಶುರುವಾಗಿದ್ದು, ಮತದಾರರನ್ನ (Voter) ಸೆಳೆಯಲು ಪಕ್ಷಗಳು ಮುಂದಾಗಿವೆ. ಶತಾಯಗತಾಯ ಅಧಿಕಾರಕ್ಕೆ ಬರಲು ಪಣ ತೊಟ್ಟಿರುವ ಕಾಂಗ್ರೆಸ್​ (Congress) ಹೋದಲ್ಲಿ ಬಂದಲ್ಲೆಲ್ಲಾ ಉಚಿತ (Free) ಆಶ್ವಾಸನೆಗಳನ್ನ ನೀಡುತ್ತಿದೆ. 200 ಯೂನಿಟ್​ ಉಚಿತ ವಿದ್ಯುತ್ (Free Power)​ ಆಯ್ತು. ಮಹಿಳಾಮಣಿಗಳಿಗೆ 2000 ರೂಪಾಯಿ ಆಯ್ತು. ಇವತ್ತು ಕಾಂಗ್ರೆಸ್​ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿ (Free Rise) ನೀಡೋದಾಗಿ ಘೋಷಣೆ ಮೊಳಗಿಸಿದೆ. ಕೆಪಿಸಿಸಿ (KPCC) ಕಚೇರಿಯಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್​ (DK Shivakumar) ಬಳಗ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಘೋಷಣೆ ಮಾಡಿದ್ದಷ್ಟೇ ಅಲ್ಲ, ಗ್ಯಾರಂಟಿ ಕಾರ್ಡ್​ಗೂ (Guarantee Card) ಸಹಿ ಹಾಕಿದ್ದೀವಿ ಎಂದಿದ್ದಾರೆ.


ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆಗ ಬಿಪಿಎಲ್ ಕುಟುಂಬಗಳಿಗೆ ತಲಾ 7ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. 2019ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕೇಸರಿ ಪಡೆ 5 ಕೆಜಿಗೆ ಇಳಿಸಿತ್ತು. ಎಲೆಕ್ಷನ್​ ಟೈಂನಲ್ಲಿ ಮಂಡಿಸಿದ ಬಜೆಟ್​ನಲ್ಲಿ ಮತ್ತೆ 7 ಕೆಜಿಗೆ ಹೆಚ್ಚಿಸಿದ್ದರು. ಈಗ ಕಾಂಗ್ರೆಸ್​​ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿದೆ.


ಇದನ್ನೂ ಓದಿ: Kalasipalya Bus Terminal: 63 ಕೋಟಿ ರೂಪಾಯಿ ವೆಚ್ಚದ ಕಲಾಸಿಪಾಳ್ಯದ ಬಸ್​​ ಟರ್ಮಿನಲ್​ ಉದ್ಘಾಟಿಸಿದ ಸಿಎಂ ಬೊಮ್ಮಾಯಿ


ಪ್ರಜಾಧ್ವನಿ ಯಾತ್ರೆಯಲ್ಲಿ ಜನರೂ ಕೇಳ್ತಿದ್ದಾರೆ


ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಆಹಾರ ಭದ್ರತಾ ಕಾಯ್ದೆಯನ್ನು ಯುಪಿಎ ಸರ್ಕಾರ ಮಾಡಿತ್ತು. ಬಡತನ ರೇಖೆಗಿಂತ ಕೆಳಗಿನವರಿಗೆ ಕಡಿಮೆ ದರದಲ್ಲಿ ಅಕ್ಕಿಕೊಡಲು ಕಾಯ್ದೆ ತರಲಾಗಿತ್ತು. ನಮ್ಮ ಪ್ರಣಾಳಿಕೆಯಲ್ಲಿ ಅನ್ನಭಾಗ್ಯ ಘೋಷಣೆ ಮಾಡಿದ್ದೇವು. ಏಳು ಕೆಜಿ ಅಕ್ಕಿ ಉಚಿತವಾಗಿ ಕೊಡಲು ತೀರ್ಮಾನ ಮಾಡಿದ್ದೇವು. ಇದನ್ನು ಬಿಜೆಪಿಯ ಅವರು 7ರಿಂದ ಐದು ಕೆಜಿಗೆ ಇಳಿಕೆ ಮಾಡಿದರು.


ಈ ಬಗ್ಗೆ ನಾನು ವಿಧಾನಸಭೆಯಲ್ಲೂ ಮಾತನಾಡಿದ್ದೆ, ಬಡವರು, ಕೂಲಿ ಕಾರ್ಮಿಕರಿಗೆ ಕೋವಿಡ್ ಸಂದರ್ಭದಲ್ಲಿ ತುಂಬಾ ಅನುಕೂಲ ಆಯ್ತು. ದುಡ್ಡಿನ ಕೊರತೆ ನೆಪ ಒಡ್ಡಿ ಕಡಿಮೆ ಮಾಡಿದ್ದರು. ಪ್ರಜಾಧ್ವನಿ ಯಾತ್ರೆಯಲ್ಲಿ ಜನರೂ ಕೇಳ್ತಿದ್ದಾರೆ. ಅಕ್ಕಿ ನೀಡುವುದನ್ನು ಜಾಸ್ತಿ ಮಾಡಬೇಕು ಅಂತ ಕೇಳುತ್ತಿದ್ದಾರೆ. ಬೆಲೆ ಏರಿಕೆಯಿಂದ ಎಲ್ಲಾ ಗಗನಕ್ಕೆ ಹೋಗಿದೆ. ಹಸಿದವರಿಗೆ ಊಟ ಕೊಡೋದು ಸರ್ಕಾರದ ಕರ್ತವ್ಯ ಎಂದರು.
ಸುಳ್ಳು ಹೇಳೋದಕ್ಕೆ ಅಂತಾ ಬೊಮ್ಮಾಯಿಯನ್ನ ಸಿಎಂ ಮಾಡಿದ್ದಾರೆ


ತಲಾ 10 ಕೆಜಿ ಕೊಡಲು ಪಕ್ಷದಿಂದ ತೀರ್ಮಾನ ಮಾಡಿದ್ದೇವೆ. ಗ್ಯಾರೆಂಟಿ ಕಾರ್ಡ್ ಗಳಿಗೆ ನಾನು, ಡಿಕೆ ಶಿವಕುಮಾರ್ ಇಬ್ಬರೂ ಸಹಿ ಮಾಡಿದ್ದೀವಿ. ಎಲ್ಲಾ ಮನೆಮನೆಗಳಿಗೂ ಕಾರ್ಡ್ ಗಳನ್ನ ಹಂಚುತ್ತಿದ್ದೇವೆ. ನಾವು ಹಿಂದೆ ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಈಗಾಗಲೇ ನಾಲ್ಕೈದು ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತಿದೆ. 10 ಕೆಜಿ ಅಕ್ಕಿ ಕೊಡುವುದರಿಂದ ಇನ್ನೂ ನಾಲ್ಕೈದು ಸಾವಿರ ಕೋಟಿ ರೂ‌ಪಾಯಿ ಖರ್ಚು ಹೆಚ್ಚಾಗುತ್ತದೆ.


ಇದನ್ನೂ ಓದಿ: Sa Ra Mahesh: ಮಂತ್ರಿಗಿರಿ ಆಸೆ ಇದ್ದವರು ಸತ್ತು ದೆವ್ವವಾದ್ರು! ಸದನದಲ್ಲಿ ‘ದೆವ್ವ’ಗಳ ಬಗ್ಗೆ ಸ್ವಾರಸ್ಯಕರ ಚರ್ಚೆ


ಕೇಂದ್ರ ಸರ್ಕಾರ ಮೂರು ರೂಪಾಯಿಗೆ ಕೆಜಿ ಅಕ್ಕಿ ಕೊಡುತ್ತದೆ. ನಾವು ಖರೀದಿ ಮಾಡಿ ಉಚಿತವಾಗಿ ಕೊಡ್ತೀವಿ. ಇದು ಕೇಂದ್ರ ಸರ್ಕಾರದ ಯೋಜನೆ ಅಂತಾ ಬೊಮ್ಮಾಯಿ ಸುಳ್ಳು ಹೇಳ್ತಿದ್ದಾರೆ. ಸುಳ್ಳು ಹೇಳೋದಕ್ಕೆ ಅಂತಾ ಬೊಮ್ಮಾಯಿಯನ್ನ ಸಿಎಂ ಮಾಡಿಟ್ಟುಕೊಂಡಿದ್ದಾರೆ. ಆರ್ ಎಸ್ ಎಸ್ ಸುಳ್ಳಿನ ಫ್ಯಾಕ್ಟರಿ. ಫುಡ್ ಸೆಕ್ಯೂರಿಟಿ ಆಕ್ಟ್ ಮಾಡಿದ್ದು ಮೋದಿನಾ? ಆಹಾರ ಭದ್ರತೆ ಕಾನೂನು ತಂದಿದ್ದು ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಎಂದು ಹೇಳಿದರು. ಇನ್ನು ಕಾಂಗ್ರೆಸ್​​ನ ಈ ಭರವಸೆಗಳು ಮತದಾರರನ್ನ ಸೆಳೆಯುತ್ತಾ? ಗೆಲುವಿಗೆ ಸಹಕಾರಿ ಆಗುತ್ತಾ ಎಂಬುದನ್ನ ಕಾಲವೇ ಉತ್ತರಿಸಲಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು