ಸಂಪುಟ ವಿಸ್ತರಣೆ ಸರ್ಕಸ್; ಇಂದು ದೆಹಲಿಯ ರಾಹುಲ್ ನಿವಾಸದಲ್ಲಿ ನಾಯಕರ ಸಭೆ, ಸಚಿವ ಸ್ಥಾನಕ್ಕೆ ಶಾಸಕರ ಲಾಬಿ

ಆಕಾಂಕ್ಷಿಗಳ ಪಟ್ಟಿ ಜೊತೆ ಬರಲು ರಾಜ್ಯ ನಾಯಕರಿಗೆ ರಾಹುಲ್​ ಈಗಾಗಲೇ ಸೂಚನೆ ನೀಡಿದ್ದರು. ಅದರಂತೆ ನಾಯಕರು ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದಾರೆ. ಇಂದು ರಾಜ್ಯ ನಾಯಕರೊಂದಿಗೆ ಚರ್ಚಿಸಿ ಅಂತಿಮ‌ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದಕ್ಕೂ‌ ಮುನ್ನ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ಸಭೆ ನಡೆಯಲಿದೆ.

HR Ramesh | news18
Updated:December 21, 2018, 11:04 AM IST
ಸಂಪುಟ ವಿಸ್ತರಣೆ ಸರ್ಕಸ್; ಇಂದು ದೆಹಲಿಯ ರಾಹುಲ್ ನಿವಾಸದಲ್ಲಿ ನಾಯಕರ ಸಭೆ, ಸಚಿವ ಸ್ಥಾನಕ್ಕೆ ಶಾಸಕರ ಲಾಬಿ
ಸಾಂದರ್ಭಿಕ ಚಿತ್ರ
HR Ramesh | news18
Updated: December 21, 2018, 11:04 AM IST
ನವದೆಹಲಿ: ನಾಳೆಗೆ ಸಂಪೂರ್ಣ ವಿಸ್ತರಣೆ ನಡೆಯುವುದು ಖಚಿತ ಎಂದು ರಾಜ್ಯ ಕಾಂಗ್ರೆಸ್​ ನಾಯಕರು ಹೇಳಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಂದು ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಲ್ಲಿ ಸಂಜೆ 5ಗಂಟೆಗೆ ಸಭೆ ನಡೆಸಲಿದ್ದಾರೆ.

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಡಿ.ಕೆ.‌ ಶಿವಕುಮಾರ್, ಕೆ.ಸಿ. ವೇಣುಗೋಪಾಲ್ ಜೊತೆ ಸಭೆ ನಡೆಸಲಿರುವ ರಾಹುಲ್​ ಗಾಂಧಿ, ತಾವು ಮೊದಲೇ ಸೂಚಿಸಿದಂತೆ ನಾಯಕರು ಸಿದ್ಧಪಡಿಸಿರುವ ಸಚಿವಾಕಾಂಕ್ಷಿಗಳ ಪಟ್ಟಿಗೆ ಗ್ರೀನ್​ ಸಿಗ್ನಲ್ ನೀಡಲಿದ್ದಾರೆ.

ಆಕಾಂಕ್ಷಿಗಳ ಪಟ್ಟಿ ಜೊತೆ ಬರಲು ರಾಜ್ಯ ನಾಯಕರಿಗೆ ರಾಹುಲ್​ ಈಗಾಗಲೇ ಸೂಚನೆ ನೀಡಿದ್ದರು. ಅದರಂತೆ ನಾಯಕರು ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದಾರೆ. ಇಂದು ರಾಜ್ಯ ನಾಯಕರೊಂದಿಗೆ ಚರ್ಚಿಸಿ ಅಂತಿಮ‌ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದಕ್ಕೂ‌ ಮುನ್ನ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ಸಭೆ ನಡೆಯಲಿದೆ.

ಸಚಿವ ಸ್ಥಾನಕ್ಕಾಗಿ ಲಾಬಿ:

ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ಶುರುವಾಗಿದ್ದು, ನ್ಯೂಸ್ 18 ಕನ್ನಡಕ್ಕೆ ಈ ಬಗ್ಗೆ ಕೆಲವು ಮಹತ್ವದ ಮಾಹಿತಿ ಸಿಕ್ಕಿದೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು  ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ, ಅಹಮದ್ ಪಟೇಲ್ ಮೂಲಕ‌  ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಉಳಿದಂತೆ, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಮೂಲಕ ಹೆಚ್.ಕೆ‌‌ ಪಾಟೀಲ್ ಲಾಬಿ ನಡೆಸಿದ್ದಾರೆ. ಹೈದರಾಬಾದ್​ ಕರ್ನಾಟಕ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮೂಲಕ ರಹೀಂಖಾನ್ ತಮ್ಮ ಬೇಡಿಕೆಯಿಟ್ಟಿದ್ದಾರೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ, ದೆಹಲಿಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಸಿಎಂ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಮೂಲಕ ಇ.ತುಕಾರಾಂ, ಡಿಸಿಎಂ ಪರಮೇಶ್ವರ್​ ಮೂಲಕ ಎಸ್.ಟಿ. ಸೋಮಶೇಖರ್, ರಾಜಸ್ಥಾನ‌ ಡಿಸಿಎಂ ಸಚಿನ್ ಪೈಲಟ್, ಗುಲಾಂ ನಬಿ ಆಜಾದ್ ಮೂಲಕ ಎಂ. ಕೃಷ್ಣಪ್ಪ, ಸೋನಿಯಾ ಗಾಂಧಿ, ಗುಲಾಂ ನಬಿ ಆಜಾದ್​ ಮೂಲಕ ಎಂ.ಬಿ‌. ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಸಿ.ಎಸ್​. ಶಿವಳ್ಳಿ, ಆರ್​. ಧರ್ಮಸೇನಾ ಹಾಗೂ ಬಿ.ಸಿ‌ ಪಾಟೀಲ್ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು, ತಮ್ಮ ತಂದೆ ಕೆ.ಹೆಚ್.ಮುನಿಯಪ್ಪರಿಂದಲೇ  ರೂಪಾ ಶಶಿಧರ್ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
Loading...

First published:December 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...