ಲೋಕಸಭೆಯಲ್ಲಿ ಜೆಡಿಎಸ್​ ಕಾಂಗ್ರೆಸ್​ ಮೈತ್ರಿ: ಹೆಚ್ಚಿನ ಸೀಟು ಗೆಲ್ಲಲು ‘ಕೈ​’ ಸಿದ್ದತೆ, ಸಿದ್ದು ಸ್ಪರ್ಧೆ ಸಾಧ್ಯತೆ


Updated:August 1, 2018, 6:33 PM IST
ಲೋಕಸಭೆಯಲ್ಲಿ ಜೆಡಿಎಸ್​ ಕಾಂಗ್ರೆಸ್​ ಮೈತ್ರಿ: ಹೆಚ್ಚಿನ ಸೀಟು ಗೆಲ್ಲಲು ‘ಕೈ​’ ಸಿದ್ದತೆ, ಸಿದ್ದು ಸ್ಪರ್ಧೆ ಸಾಧ್ಯತೆ

Updated: August 1, 2018, 6:33 PM IST
ಚಿದಾನಂದ ಪಾಟೀಲ್​, ನ್ಯೂಸ್​-18 ಕನ್ನಡ

ಬೆಂಗಳೂರು(ಆಗಸ್ಟ್​.01): ಲೋಕಸಭಾ ಚುನಾವಣೆ ಸಮೀಸುತ್ತಿದಂತೆಯೇ ಕಾಂಗ್ರೆಸ್​ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲ್ಲು ಭಾರೀ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಬೆಂಗಳೂರಿನಲ್ಲಿ ಹೆಚ್ಚು ಸೀಟ್ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.

ಬೆಂಗಳೂರು ದಕ್ಷಿಣ ಜೆಡಿಎಸ್​ಗೆ ಬಿಟ್ಟುಕೊಟ್ಟು, ನಗರದ ಸೆಂಟ್ರಲ್​ ಸೇರಿದಂತೆ ಉತ್ತರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ. ದಕ್ಷಿಣ ಕ್ಷೇತ್ರ ತೆನೆಗೆ ಬಿಟ್ಟುಕೊಡಲು ಕಾಂಗ್ರೆಸ್ ಒಲವು ತೋರಿದ್ದು, ಉತ್ತರ ಮತ್ತು ಸೆಂಟ್ರಲ್​ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ, ಹಿಂದುಳಿದವರ ಮತ ಹೆಚ್ಚಿರುವ ಕಾರಣ ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದಲ್ಲಿ ಮತ ವಿಭಜನೆ ಆಗಲ್ಲ ಎಂಬ ಲೆಕ್ಕಚಾರವಿದೆ. ಉತ್ತರ ಲೋಕಸಭಾ ಕ್ಷೇತ್ರದಲ್ಲಿ 5 ಅಸೆಂಬ್ಲಿ ಗೆದ್ದಿರುವ ಕಾಂಗ್ರೆಸ್, ಸೆಂಟ್ರಲ್​ ಲೋಕಸಭಾ ಕ್ಷೇತ್ರದಲ್ಲೂ ಹೆಚ್ಚಿನ ಪ್ರಾಬಲ್ಯ ಹೊಂದಿದೆ.

ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿರುವ ಒಕ್ಕಲಿಗ ಮತಗಳಿದ್ದು, ಜೆಡಿಎಸ್​ ಅಭ್ಯರ್ಥಿ ಸೂಕ್ತ ಎಂದು ಕಾಂಗ್ರೆಸ್​ ನಾಯಕರು ಚಿಂತನೆ ನಡೆಸಿದ್ಧಾರೆ. ಈ ಹಿನ್ನಲ್ಲೆಯಲ್ಲಿ ಸೀಟು ಹೊಂದಾಣಿಕೆ ವೇಳೆ ಜೆಡಿಎಸ್ ಜತೆ ಈ ವಿಚಾರ ಪ್ರಸ್ತಾಪ ಮಾಡುವ ಸಾಧ್ಯತೆಯಿದೆ.

ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಾಯ: ಲೋಕಸಭೆ ಚುನಾವಣೆಗೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕಣಕ್ಕಿಳಿಸುವಂತೆ ಬೆಂಬಲಿಗರು ಕೆಪಿಸಿಸಿಗೆ ಒತ್ತಾಯಿಸಿದ್ದಾರೆ. ಮೈಸೂರು ಕ್ಷೇತ್ರದಿಂದಲೇ ಸಿದ್ದರಾಮಯ್ಯರನ್ನ ಕಣಕ್ಕಿಳಿಸೋ ಬಗ್ಗೆ ಚರ್ಚೆ ನಡೆಸಿ, ಮಾಜಿ ಸಿಎಂಗೆ ಬೆಂಬಲಿಸುವಂತೆ ಜೆಡಿಎಸ್​ಗೆ ಆಗ್ರಹಿಸಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್​ಗೆ ಒತ್ತಾಯಿಸುವಂತೆ ರಾಜ್ಯ ನಾಯಕರಿಗೆ ಬೆಂಬಲಿಗರ ಒತ್ತಡವಿದೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಯಾವುದೇ ಕ್ಷೇತ್ರದ ಕಟ್ಟುಪಾಡಿಲ್ಲ. ಅವರು ಎಲ್ಲಿ ಬೇಕಾದ್ರೂ ಸ್ಪರ್ಧಿಸಲಿ ಎಂದು ರಾಜ್ಯ ನಾಯಕರು ಭರವಸೆ ನೀಡಿದ್ಧಾರೆ. ಆದರೆ, ಲೋಕಸಭೆಗೆ ಇನ್ನೂ ಸ್ಪರ್ಧೆಗೆ ಸಿದ್ದರಾಮಯ್ಯ ಉತ್ಸಾಹ ತೋರಿಸಿಲ್ಲ ಎನ್ನುತ್ತಿವೆ ಮೂಲಗಳು.
Loading...

ಲೋಕಸಭೆ ಮೇಲೆ ರೋಷನ್​ ಕಣ್ಣು: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್​ ನಾಯಕ ರೋಷನ್ ಬೇಗ್ ಚಿಂತನೆ ನಡೆಸಿದ್ಧಾರೆ. ಸಚಿವ ಸ್ಥಾನ‌ ಸಿಗದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯತ್ತ ಬೇಗ್ ಕಣ್ಣು ಹಾಕಿದ್ದಾರೆ.

ಇನ್ನೊಂದೆಡೆ ಸಚಿವ ಸ್ಥಾನಕ್ಕೂ ಲಾಬಿ ನಡೆಸುತ್ತಿರುವ ರೋಷನ್ ಬೇಗ್, ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮೂಲಕ ವರಿಷ್ಠರಿಗೆ ಹೇಳಿಸುತ್ತಿದ್ಧಾರೆ ಎನ್ನಲಾಗಿದೆ.  ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುವಂತೆ ಈಗಾಗಲೇ ಅಹ್ಮದ್ ಪಟೇಲ್ ಭೇಟಿ ಮಾಡಿ ಬೇಗ್ ಚರ್ಚಿಸಿದ್ಧಾರೆ.

​ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಬಳಿ ಚರ್ಚಿಸಿರುವ ಬೇಗ್​, ​ಕೆ.ಜೆ. ಜಾರ್ಜ್ ಬಳಿ ಇರುವ ಐಟಿ- ಬಿಟಿ ಖಾತೆ‌ ಮೇಲೆ ಕಣ್ಣಿಟ್ಟಿದ್ಧಾರೆ ಎಂದು ತಿಳಿದು ಬಂದಿದೆ. ಇನ್ನು ಭರವಸೆ ಈಡೇರಿಸುವುದಾಗಿ ನಾಯಕರು ಮಾತು ಕೊಟ್ಟಿದ್ದಾರೆ.

ಆದರೂ ಸಚಿವ ಸ್ಥಾನ ಕೈ ತಪ್ಪಿದ್ದಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ಪರ್ಧೆ ನಡೆಸುವ ಯೋಚನೆಯಿದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ, ಶಿವಾಜಿನಗರದ ವಿಧಾನಸಭೆ ಕ್ಷೇತ್ರದಿಂದ ಪುತ್ರ ರುಮಾನ್​ ಕಣಕ್ಕಿಳಿಸುವ ಪ್ಲಾನ್​ ಇದೆ. ​
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...