ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಶಾಸಕರಿಗೆ ವಿಪ್​ ಜಾರಿ; ಅತೃಪ್ತರ ಕೈಗೆ ವಿಪ್​ ಪ್ರತಿ ನೀಡುತ್ತಾರಾ ಮುಖಂಡರು?

ಅತೃಪ್ತರಿಗೆ ಮುಖಂಡರು ಹೇಗೆ ವಿಪ್​ಅನ್ನು ನೀಡಲಿದ್ದಾರೆ. ಸ್ಪೀಕರ್​ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

HR Ramesh | news18
Updated:July 11, 2019, 6:26 PM IST
ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಶಾಸಕರಿಗೆ ವಿಪ್​ ಜಾರಿ; ಅತೃಪ್ತರ ಕೈಗೆ ವಿಪ್​ ಪ್ರತಿ ನೀಡುತ್ತಾರಾ ಮುಖಂಡರು?
ಸರ್ಕಾರಿ ಮುಖ್ಯ ಸಚೇತಕರು ಜಾರಿ ಮಾಡಿರುವ ವಿಪ್​
 • News18
 • Last Updated: July 11, 2019, 6:26 PM IST
 • Share this:
ಬೆಂಗಳೂರು: ಅಧಿವೇಶನ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳ ಶಾಸಕರಿಗೆ ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕ ಗಣೇಶ್​ ಹುಕ್ಕೇರಿ ಅವರು ವಿಪ್​ ಜಾರಿ ಮಾಡಿದ್ದಾರೆ.

ನಾಳೆಯಿಂದ ಆರಂಭವಾಗುವ ಅಧಿವೇಶನದಲ್ಲಿ ಶಾಸಕರು ಸದನದಲ್ಲಿ ಹಾಜರಿರಬೇಕು ಮತ್ತು ಸರ್ಕಾರದ ಪರವಾಗಿ ಮತ ಚಲಾಯಿಸಬೇಕು. ಒಂದು ವೇಳೆ ಸದನಕ್ಕೆ ಗೈರಾದರೆ ಅಥವಾ ಹಾಜರಿದ್ದು ಸರ್ಕಾರದ ಪರ ಮತ ಚಲಾಯಿಸದೆ ಇದ್ದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುವುದು ಎಂದು ವಿಪ್​ನಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಸುಪ್ರೀಂಕೋರ್ಟ್​ ಸೂಚನೆ ಹಿನ್ನೆಲೆಯಲ್ಲಿ ಇಂದು ಅತೃಪ್ತ 10 ಶಾಸಕರು ಖುದ್ದಾಗಿ ರಾಜೀನಾಮೆ ನೀಡಲು ಸ್ಪೀಕರ್​ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆಯೇ ಅತೃಪ್ತರ ಕೈಗೆ ವಿಪ್​ ನೀಡಲು ಮುಖಂಡರು ಸಕಲ ತಯಾರಿ ನಡೆಸಿದ್ದಾರೆ.

ಇದನ್ನು ಓದಿ: ಡಿಕೆಶಿ ಮುಂಬೈನಲ್ಲಿ ಹೋಟೆಲ್​ ಮುಂಭಾಗ ನಿಂತಿದ್ದಾಗ ನಾನು ಹೋಟೆಲ್​ ಒಳಗಡೆಯೇ ಇದ್ದೆ; ಬಿಜೆಪಿ ನಾಯಕ ಆರ್.ಅಶೋಕ್​

ಸ್ಪೀಕರ್​ ಇನ್ನು ರಾಜೀನಾಮೆಗಳನ್ನು ಅಂಗೀಕರಿಸಿಲ್ಲ. ಅದಕ್ಕೂ ಮುನ್ನವೇ ಅವರು ವಿಪ್​ ನೀಡಿದರೆ, ಶಾಸಕರು ನಾಳೆ ಸದನಕ್ಕೆ ಹಾಜರಾಗಿ ಸರ್ಕಾರದ ಪರವಾಗಿ ಮತ ಚಲಾಯಿಸಲೇಬೇಕಾಗುತ್ತದೆ. ಇಲ್ಲವಾದಲ್ಲಿ ಅವರು ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ಏತನ್ಮಧ್ಯೆ ಅತೃಪ್ತರಿಗೆ ಮುಖಂಡರು ಹೇಗೆ ವಿಪ್​ಅನ್ನು ನೀಡಲಿದ್ದಾರೆ. ಸ್ಪೀಕರ್​ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres