• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • 15 ವರ್ಷದ ನಂತರ ಕಾಂಗ್ರೆಸ್ ತೆಕ್ಕೆಗೆ ಮಾಲೂರು ಪುರಸಭೆ ಆಡಳಿತ; ಅಧಿಕಾರ ಸಿಕ್ಕರೂ ಅಧ್ಯಕ್ಷ್ಯಗಿರಿ ಪಕ್ಷೇತರ‌ ಸದಸ್ಯನ ಪಾಲು

15 ವರ್ಷದ ನಂತರ ಕಾಂಗ್ರೆಸ್ ತೆಕ್ಕೆಗೆ ಮಾಲೂರು ಪುರಸಭೆ ಆಡಳಿತ; ಅಧಿಕಾರ ಸಿಕ್ಕರೂ ಅಧ್ಯಕ್ಷ್ಯಗಿರಿ ಪಕ್ಷೇತರ‌ ಸದಸ್ಯನ ಪಾಲು

ಕಾಂಗ್ರೆಸ್ ನಾಯಕರ ಸಂಭ್ರಮ

ಕಾಂಗ್ರೆಸ್ ನಾಯಕರ ಸಂಭ್ರಮ

ಪುರಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಮಾತನಾಡಿದ ಸಂಸದ ಎಸ್ ಮುನಿಸ್ವಾಮಿ, ಶಾಸಕ ನಂಜೇಗೌಡ ವಿರುದ್ದ ವಾಗ್ದಾಳಿ ನಡೆಸಿದರು. ಬಿಜೆಪಿ ಪಕ್ಷದ ಸದಸ್ಯರಿಗೆ ಹಣದ ಆಮಿಷವೊಡ್ಡಿ ಚುನಾವಣೆಗೆ ಗೈರಾಗುವಂತೆ ಮಾಡಿದ್ದಾರೆ. ನಮ್ಮ ಕಡೆಯಿದ್ದ ಪಕ್ಷೇತರ ಸದಸ್ಯರಿಗೆ ಲಕ್ಷಾಂತರ ರೂಪಾಯಿ ಹಣದ ಆಮಿಷವೊಡ್ಡಿದ್ದಾರೆ,

ಮುಂದೆ ಓದಿ ...
  • Share this:

ಕೋಲಾರ(ನ.11): ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಪುರಸಭೆ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆಯಲ್ಲಿ 15 ವರ್ಷದ ನಂತರ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ಮೂಲಕ ಅಧಿಕಾರದ ಗದ್ದುಗೆಗಾಗಿ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ. ನವೆಂಬರ್ 10 ರಂದು ನಡೆದ ಚುನಾವಣೆಯಲ್ಲಿ  ಕಾಂಗ್ರೆಸ್ ನಿಂದ ಅಧ್ಯಕ್ಷ್ಯರಾಗಿ ಪಕ್ಷೇತರ ಸದಸ್ಯ ಮುರಳಿಧರ್,  ಉಪಾಧ್ಯಕ್ಷ್ಯರಾಗಿ ಕಾಂಗ್ರೆಸ್ ಸದಸ್ಯೆ ಭಾರತಮ್ಮ  ಆಯ್ಕೆಯಾಗಿದ್ದಾರೆ, ಬಿಜೆಪಿಯಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅನಿತಾ ಹಾಗೂ ಮಂಜುಳಾ ಅವರು ಸಂಖ್ಯಾಬಲದ ಕೊರತೆಯಿಂದ ಸೋಲೊಪ್ಪಿಕೊಂಡಿದ್ದಾರೆ,  ಇನ್ನು ಚುನಾವಣೆ ಕೇಂದ್ರ  ಮಾಲೂರು ಪುರಸಭೆ ಕಚೇರಿ ಹೊರಗೆ ಹೈಡ್ರಾಮ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಶಾಸಕ ನಂಜೇಗೌಡ ವಿರುದ್ದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು, ಬಿಜೆಪಿ ಸದಸ್ಯೆ ವಿಜಯಲಕ್ಷ್ಮಿ, ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ ರಾಜಪ್ಪ ಎನ್ನುವರನ್ನ, ಕಾಂಗ್ರೆಸ್ ನಾಯಕರು ಕಿಡ್ನಾಪ್ ಮಾಡಿ ಚುನಾವಣೆಗೆ ಗೈರಾಗುವಂತೆ ಮಾಡಿದ್ದಾರೆಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪುರಸಭೆ ಚುನಾವಣೆ ಹಿನ್ನಲೆ ಮಾಲೂರು ಪುರಸಭೆ ಕಚೇರಿಯ ಮುಖ್ಯ ರಸ್ತೆಯುದ್ದಕ್ಕು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು,


ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಮಿಂಚಿದ ಕೈ ಶಾಸಕ, ಸದಸ್ಯರು


ಅಧ್ಯಕ್ಷ್ಯ ಉಪಾಧ್ಯಕ್ಷ ಗಾದಿಗಾಗಿ ಪಕ್ಷೇತರ ಪುರಸಭೆ ಸದಸ್ಯರೊಂದಿಗೆ  ಕಳೆದ 20 ದಿನಗಳಿಂದ ಚಿಕ್ಕಮಗಳೂರು ರೆಸಾರ್ಟ್ ವಾಸ್ತವ್ಯ ದಲ್ಲಿದ್ದ ಕಾಂಗ್ರೆಸ್ ಸದಸ್ಯರು, ಚುನಾವಣೆ ದಿನ ಸಾಂಸ್ಕೃತಿಕ ಉಡುಗೆಯಲ್ಲಿ ಪುರಸಭೆ ಕಚೇರಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಪುರುಷರು  ಪಂಚೆ ಶರ್ಟ್ ಧರಿಸಿದರೆ, ಮಹಿಳೆಯರು ಒಂದೇ ಬಗೆಯ ಬಿಳಿ ಸೀರೆ ಧರಿಸಿ ಚುನಾವಣೆಗೆ ಆಗಮಿಸಿದರು. ಇತ್ತ ಶಾಸಕ ಕೆವೈ ನಂಜೇಗೌಡ ಸಹ ಪಂಚೆ ಶರ್ಟ್ ನಲ್ಲಿ ಆಗಮಿಸಿದ್ದು ಮತ್ತೊಂದು ವಿಶೇಶವಾಗಿತ್ತು, ಕಾಂಗ್ರೆಸ್ ಟೀಂನ ಉಡುಗೆ ಕಂಡು ಒಮ್ಮೆಲೆ ಪೊಲೀಸರು, ಬಿಜೆಪಿ ನಾಯಕರು ಕಣ್ ರೆಪ್ಪೆ ಹಾರಿಸದೆ ನೋಡಿದ್ದು ಕಂಡುಬಂತು.


IPL 2020: ಮುಂಬೈ ಇಂಡಿಯನ್ಸ್ ದಾಖಲೆಯ ಜಯದೊಂದಿಗೆ ಮರಳುಗಾಡಿನ ಐಪಿಎಲ್ ಆವೃತ್ತಿಗೆ ತೆರೆ!


ಕೊರೋನಾ ನಿಯಮಗಳು ಲೆಕ್ಕಕ್ಕಿಲ್ಲ


ಕಳೆದ 15 ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿದ್ದ ಮಾಲೂರು ಪುರಸಭೆಯಲ್ಲಿ ಕಾಂಗ್ರೆಸ್ ಅಡಳಿತ ಅರಂಭವಾಗಿದೆ, ಆದರೆ ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದೆ ಬಂಡಾಯವಾಗಿ ಸ್ಪರ್ಧಿಸಿದ್ದ ಸದಸ್ಯ ಮುರಳೀಧರ ಅವರಿಗೆ ಕಾಂಗ್ರೆಸ್ ಪಕ್ಷವೇ ಬೆಂಬಲಿಸಿ ಇದೀಗ ಅಧ್ಯಕ್ಷ್ಯ ಸ್ತಾನವನ್ನು ನೀಡಿದೆ. ಪುರಸಭೆಯಲ್ಲಿ ಗೆಲುವು ಸಾಧಿಸಿದ ಹಿನ್ನಲೆ,  ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿತ್ತು, ರಸ್ತೆಯುದ್ದಕ್ಕು ಪಟಾಕಿ ಸಿಡಿಸುತ್ತಾ, ಘೋಷಣೆಗಳನ್ನು ಕೂಗುತ್ತಾ, ಶಾಸಕ ನಂಜೇಗೌಡರನ್ನ ಮೇಲಕ್ಕೆತ್ತೆಕೊಂಡು ಕಾರ್ಯಕರ್ತರು ಮೆರವಣಿಗೆ ಮಾಡಿದರು, ಒಂದೆಡೆ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಗಳನ್ನು ಧರಿಸದೆ ನೂರಾರು ಜನರು ಒಂದೆಡೆ ಸೇರಿದ್ದು ಕೊರೋನಾ ನಿಯಮಗಳನ್ನು ಲೆಕ್ಕಕ್ಕಿಲ್ಲದಂತೆ ಅನ್ನಿಸಿತು.


ಕಾಂಗ್ರೆಸ್ ಗೆಲುವು ಶಾಶ್ವತವಲ್ಲ, ಮತ್ತೆ ಅಧಿಕಾರ ಹಿಡಿಯುತ್ತೇವೆ - ಮುನಿಸ್ವಾಮಿ ಗುಟುರು


ಪುರಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಮಾತನಾಡಿದ ಸಂಸದ ಎಸ್ ಮುನಿಸ್ವಾಮಿ, ಶಾಸಕ ನಂಜೇಗೌಡ ವಿರುದ್ದ ವಾಗ್ದಾಳಿ ನಡೆಸಿದರು. ಬಿಜೆಪಿ ಪಕ್ಷದ ಸದಸ್ಯರಿಗೆ ಹಣದ ಆಮಿಷವೊಡ್ಡಿ ಚುನಾವಣೆಗೆ ಗೈರಾಗುವಂತೆ ಮಾಡಿದ್ದಾರೆ. ನಮ್ಮ ಕಡೆಯಿದ್ದ ಪಕ್ಷೇತರ ಸದಸ್ಯರಿಗೆ ಲಕ್ಷಾಂತರ ರೂಪಾಯಿ ಹಣದ ಆಮಿಷವೊಡ್ಡಿದ್ದಾರೆ, ಕಾಂಗ್ರೆಸ್ ಆಡಳಿತದಲ್ಲಿ ಅಧಿಕಾರ ಹೀಗೆ ಇರುವುದಿಲ್ಲ,  ಮುಂದಿನ ದಿನಗಳಲ್ಲಿ ಮತ್ತೆ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯುವುದಾಗಿ ಸವಾಲು ಹಾಕಿದರು.


ಇನ್ನು ಕಾಂಗ್ರೆಸ್ ಗೆಲುವು ನಂತರ ಮಾತನಾಡಿದ ಶಾಸಕ ನಂಜೇಗೌಡ, ಬಿಜೆಪಿ ಸರ್ಕಾರ ಬಂದಮೇಲೆ ಮಾಲೂರು ಅಭಿವೃದ್ಧಿ ಗೆ ಯಾವುದೇ ಅನುದಾನ ನೀಡಿಲ್ಲ, ರಾಜ್ಯದಲ್ಲಿ ಯಾವುದೇ ಕ್ಷೇತ್ರಕ್ಕೂ ಅನುದಾನ ನೀಡಿಲ್ಲ, ಚುನಾವಣೆಯಲ್ಲಿ  ನಾವು ಯಾರಿಗೂ ಹಣ ನೀಡಿಲ್ಲ, ಸಂಸದರ ಆರೋಪ ನಿರಾಧಾರ , ನಮ್ಮ ಒಗ್ಗಟ್ಟಿನಿಂದಲೇ ಜಯ ಸಿಕ್ಕಿದೆ, ಬಿಜೆಪಿಯಲ್ಲಿ ಸಾಕಷ್ಟು ಭಿನ್ನಮತ ಇದೆಯೆಂದು ನಂಜೇಗೌಡ ತಿರುಗೇಟು ನೀಡಿದರು.


ಒಟ್ಟಿನಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆ ಮುಗಿದಿದ್ದು, ಆರು ತಾಲೂಕಿನಲ್ಲಿ 3 ಕಡೆ ಕಾಂಗ್ರೆಸ್,  3 ಕಡೆ ಜೆಡಿಎಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿವೆ. ಮಾಲೂರು ಚುನಾವಣೆಯಲ್ಲಿ ಕಡಿಮೆ ಸ್ಥಾನ ಗೆದ್ದಿದ್ದರೂ ಅಧಿಕಾರ ಹಿಡಿಯಲು ಶತಪ್ರಯತ್ನ ಮಾಡಿದ್ದ ಬಿಜೆಪಿ ಪಾಳಯಕ್ಕೆ ಭಾರೀ ನಿರಾಸೆ ಎದುರಾಗಿದೆ‌.

Published by:Latha CG
First published: